7ನೇ ವೇತನ ಆಯೋಗ: ಸರ್ಕಾರಿ ನೌಕರರ ವೇತನ 27 ಸಾವಿರವರೆಗೆ ಹೆಚ್ಚಾಗಬಹುದು!

ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ವೇತನ ಹೆಚ್ಚಿಸಲು ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೌಕರರು ದೇಶಾದ್ಯಂತ ಉಗ್ರ ಹೋರಾಟ ಆರಂಭಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ವೇತನ ಹೆಚ್ಚಿಸಲು ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೌಕರರು ದೇಶಾದ್ಯಂತ ಉಗ್ರ ಹೋರಾಟ ಆರಂಭಿಸಿದ್ದಾರೆ. ಅದರಲ್ಲೂ ಉತ್ತರ ಭಾರತದ ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ಪ್ರತಿಭಟನೆಯ ಕಾವು ಜೋರಾಗಿದೆ. ಇದರ ಜೊತೆಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಉತ್ತರ ಪ್ರದೇಶದ ಸರಕಾರಿ ನೌಕರರು ಹೋರಾಟ ನಡೆಸುತ್ತಿದ್ದಾರೆ ಹಾಗೂ ರಾಜ್ಯದ ವೈದ್ಯರ ಸಮೂಹ ಕೂಡ ಸರಕಾರ ಪಕ್ಷಪಾತ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅವರೂ ಹೋರಾಟಕ್ಕೆ ಧುಮುಕಿದ್ದಾರೆ.

7ನೇ ವೇತನ ಆಯೋಗದ ಶಿಫಾರಸಿನಂತೆ ವೈದ್ಯರಿಗೆ ನೀಡಬೇಕಾಗಿರುವ 'ನಾನ್ ಪ್ರ್ಯಾಕ್ಟೀಸಿಂಗ್ ಭತ್ಯೆ' (ಎನ್‌ಪಿಎ ಭತ್ಯೆ - ಖಾಸಗಿಯಾಗಿ ಕ್ಲಿನಿಕ್ ನಡೆಸದಿರಲು ವೈದ್ಯರಿಗೆ ನೀಡುವ ಭತ್ಯೆ) ನೀಡಿಲ್ಲ ಎಂದು ಆರೋಪಿಸಿರುವ ಉತ್ತರ ಪ್ರದೇಶದ 16 ಸಾವಿರ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಉತ್ತರ ಪ್ರದೇಶ ವೈದ್ಯರ ಸಂಘಟನೆಯಾದ ಪ್ರಾಂತೀಯ ಚಿಕಿತ್ಸಾ ಸಂಘ ಈ ಕುರಿತು ಸರಕಾರಕ್ಕೆ ಪತ್ರವನ್ನೂ ಬರೆದಿದೆ.

ತಿಂಗಳಿಗೆ ರೂ. 27 ಸಾವಿರ ಭತ್ಯೆ ಬಾಕಿ?

ತಿಂಗಳಿಗೆ ರೂ. 27 ಸಾವಿರ ಭತ್ಯೆ ಬಾಕಿ?

ಕೇಂದ್ರದ 7ನೇ ವೇತನ ಆಯೋಗದ ಶಿಫಾರಸಿನಂತೆ ಸರಕಾರಿ ವೈದ್ಯರಿಗೆ ಶೇ. 20 ರಷ್ಟು 'ನಾನ್ - ಪ್ರ್ಯಾಕ್ಟಿಸಿಂಗ್ ಭತ್ಯೆ' ನೀಡಬೇಕಿದೆ. ಅಂದರೆ ಸರಕಾರಿ ವೈದ್ಯನೊಬ್ಬನ ತಿಂಗಳ ಸಂಬಳ ರೂ. 2 ಲಕ್ಷಗಳಿದ್ದರೆ ಆತನಿಗೆ ತಿಂಗಳಿಗೆ 40 ಸಾವಿರ ಎನ್‌ಪಿಎ ಭತ್ಯೆ ನೀಡಬೇಕು. ಆದರೆ ಪ್ರಸ್ತುತ ಜಾರಿಯಲ್ಲಿರುವ ನಿಯಮಾವಳಿಗಳ ಪ್ರಕಾರ ಆತನಿಗೆ ಕೇವಲ ರೂ. 13 ಸಾವಿರ ಭತ್ಯೆ ನೀಡಲಾಗುತ್ತಿದೆ. ಇದು ವೇತನ ಆಯೋಗದ ಶಿಫಾರಸಿಗಿಂತ ರೂ. 27 ಸಾವಿರ ಕಡಿಮೆಯಾಗಿದೆ.

ಸರ್ಕಾರದ ಭರವಸೆ

ಸರ್ಕಾರದ ಭರವಸೆ

ಎನ್‌ಪಿಎ ಭತ್ಯೆ ಬೇಡಿಕೆ ಕುರಿತಂತೆ ವೈದ್ಯರ ಸಂಘದ ಮುಖಂಡರು ಈಗಾಗಲೇ ಉತ್ತರ ಪ್ರದೇಶ ಸರಕಾರದ ಮುಖ್ಯ ಕಾರ್ಯದರ್ಶಿ ಅನೂಪ ಚಂದ್ರ ಪಾಂಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವೈದ್ಯರ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಲಾಗುವುದು ಎಂದು ಸರ್ಕಾರದ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ರಾಜ್ಯದ ಆರೋಗ್ಯ ಹಾಗೂ ವೈದ್ಯಕೀಯ ಖಾತೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ಪಾಂಡೆ ತಿಳಿಸಿದ್ದಾರೆ.

7ನೇ ವೇತನ ಆಯೋಗದ ಶಿಫಾರಸು ಏನು?

7ನೇ ವೇತನ ಆಯೋಗದ ಶಿಫಾರಸು ಏನು?

7ನೇ ವೇತನ ಆಯೋಗದ ಪ್ರಕಾರ ನೂತನ ಸಂಬಳ ಹಾಗೂ ಭತ್ಯೆ ವ್ಯವಸ್ಥೆ ಜಾರಿಯಾಗಬೇಕಿದೆ. ಸರಕಾರಿ ನೌಕರರ ಕಾರ್ಯದಕ್ಷತೆಯನ್ನು ಹೆಚ್ಚಿಸಲು 7ನೇ ವೇತನ ಆಯೋಗ ಹಲವಾರು ಸಲಹೆ-ಸೂಚನೆಗಳನ್ನು ನೀಡಿದೆ.
ಸೇವೆಯಲ್ಲಿರುವಾಗಲೇ ಸರಕಾರಿ ಅಧಿಕಾರಿಗಳು ತಮ್ಮ ವೃತ್ತಿ ಭವಿಷ್ಯವನ್ನು ಮತ್ತಷ್ಟು ಸುಧಾರಿಸಲು ಜಾರಿಗೆ ತರಲಾದ ಮಾರ್ಪಡಿಸಲಾದ ಆಶ್ವಾಸಿತ ವೃತ್ತಿಜೀವನದ ಪ್ರಗತಿ (The Modified Assured Career Progression - MACP) ಯೋಜನೆಯನ್ನು 7ನೇ ವೇತನ ಆಯೋಗದ ಪ್ರಕಾರ ಮತ್ತೆ ಮಾರ್ಪಡಿಸಲಾಗಿದೆ. ಈ ಹಿಂದಿನ ವ್ಯವಸ್ಥೆಯಲ್ಲಿದ್ದ ಕುಂದು ಕೊರತೆಗಳನ್ನು ನಿವಾರಿಸಿ ನೌಕರರಲ್ಲಿಯ ಅಸಮಾಧಾನ ನಿವಾರಣೆಗೆ ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು 7ನೇ ವೇತನ ಆಯೋಗದ ವರದಿ ತಿಳಿಸಿದೆ.

ಏನಿದು ಎನ್‌ಪಿಎ ಭತ್ಯೆ?

ಏನಿದು ಎನ್‌ಪಿಎ ಭತ್ಯೆ?

ಎನ್‌ಪಿಎ ಭತ್ಯೆ ಎಂಬುದು ಕೇಂದ್ರ ಸರಕಾರ ಹಾಗೂ ಕೆಲ ರಾಜ್ಯ ಸರಕಾರಗಳು ಸರಕಾರಿ ವೈದ್ಯರಿಗೆ ನೀಡುವ ವಿಶೇಷ ಭತ್ಯೆಯಾಗಿದೆ. ಸರಕಾರಿ ಸೇವೆಯಲ್ಲಿರುವ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಬಾರದು ಎಂದು ಸರ್ಕಾರಗಳು ನಿಯಮ ರೂಪಿಸಿವೆ. ರೋಗಿಗಳ ಹಿತದೃಷ್ಟಿಯಿಂದ ಈ ನಿಯಮ ರೂಪಿಸಲಾಗಿದೆ. ಆದರೆ ಈ ನಿಯಮದ ಕಾರಣದಿಂದ ನಷ್ಟವಾಗುತ್ತದೆ ಎಂದು ಸರಕಾರಿ ವೈದ್ಯರು ಕೆಲಸ ಬಿಡಬಾರದು ಎಂಬ ಕಾರಣದಿಂದ ಎನ್‌ಪಿಎ ಭತ್ಯೆಯನ್ನು ಸರಕಾರಗಳು ನೀಡುತ್ತವೆ. ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+