ವಾಜಪೇಯಿ ಸ್ಮರಣಾರ್ಥ, ಶೀಘ್ರದಲ್ಲೇ 100 ರೂಪಾಯಿ ನಾಣ್ಯ ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶೀಘ್ರದಲ್ಲೇ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶೀಘ್ರದಲ್ಲೇ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲಿದೆ. 100 ರೂ. ನಾಣ್ಯದ ಮೇಲಿರುವ ವೈಶಿಷ್ಟ್ಯತೆಗಳ ಕುರಿತ ಮಾಹಿತಿ ಈಗ ಬಹಿರಂಗವಾಗಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ 100 ರೂಪಾಯಿ ನಾಣ್ಯ ಬಿಡುಗಡೆಯಾಗುತ್ತಿದೆ.

ವಾಜಪೇಯಿ ಸ್ಮರಣಾರ್ಥ, ಶೀಘ್ರದಲ್ಲೇ 100 ರೂಪಾಯಿ ನಾಣ್ಯ ಬಿಡುಗಡೆ

100 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಮುಖ ಚಿತ್ರ ಹಾಗೂ ಅವರ ಜನ್ಮ ಮತ್ತು ಮರಣ ದಿನಾಂಕ (1924-2018) ಇರಲಿದೆ. ಜೊತೆಗೆ ದೇವನಾಗರಿ ಹಾಗೂ ಇಂಗ್ಲೀಷ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಇರಲಿದೆ.

ನಾಣ್ಯದ ಇನ್ನೊಂದು ಮುಖದ ಮಧ್ಯ ಭಾಗದಲ್ಲಿ ಅಶೋಕ ಚಕ್ರ ಇರಲಿದ್ದು, ಇದರ ಕೆಳಗೆ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೇ ಮುದ್ರಿಸಲಾಗುವುದು. ಅಲ್ಲದೆ ದೇವ ನಾಗರಿ ಲಿಪಿಯಲ್ಲಿ ಭಾರತ್ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾ ಎಂದು ಇರಲಿದೆ. ಹೊಸ 100 ರೂಪಾಯಿ ನಾಣ್ಯಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+