ಇತ್ತೀಚೆಗೆ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರವು ಒಪ್ಪಿಕೊಂಡಾಗ ಸಾವಿರಾರು ಬಿಎಸ್ಎನ್ಎಲ್ ಉದ್ಯೋಗಿಗಳು ಇದು ತಮ್ಮ ದೊಡ್ಡ ಗೆಲುವು ಎಂದು ಸಂಭ್ರಮಿಸಿದ್ದರು.
ಇತ್ತೀಚೆಗೆ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರವು ಒಪ್ಪಿಕೊಂಡಾಗ ಸಾವಿರಾರು ಬಿಎಸ್ಎನ್ಎಲ್ ಉದ್ಯೋಗಿಗಳು ಇದು ತಮ್ಮ ದೊಡ್ಡ ಗೆಲುವು ಎಂದು ಸಂಭ್ರಮಿಸಿದ್ದರು. ದಿನಾಂಕ ಡಿಸೆಂಬರ್ 13ರ ಅದಿಸೂಚನೆಯಲ್ಲಿ ಈ ಸಂಬಂಧ ಹಲವು ನಿರ್ಧಾರ ಪ್ರಕಟಿಸಲಾಗಿದೆ.
ಕೇಂದ್ರ ಸರ್ಕಾರ ಏಳನೇ ವೇತನ ಆಯೋಗದನ್ವಯ ವೇತನ ಹಾಗೂ ಪಿಂಚಣಿ ಪರಿಷ್ಕರಿಸಲು ಮುಂದಾಗಿದ್ದು, ಸರ್ಕಾರಿ ಸ್ವಾಮ್ಯ ಸಂಸ್ಥೆ ಬಿಎಸ್ಎನ್ಎಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಈ ಡೆಡ್ ಲೈನ್ (Last Dates) ಬಗ್ಗೆ ಎಚ್ಚರವಿರಲಿ
ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಕ್ರಮ
ಕೇಂದ್ರವು ಬಿಎಸ್ಎನ್ಎಲ್ ನೌಕರರ ಬೇಡಿಕೆ ಈಡೇರಿಸಲು ಒಪ್ಪಿದೆ. ಏಳನೇ ವೇತನ ಆಯೋಗದಂತೆ ವೇತನ ಹಾಗೂ ಪಿಂಚಣಿ ಪರಿಷ್ಕರಿಸಲು ನಿರ್ಧರಿಸಿದೆ.
ಹಣಕಾಸು ಇಲಾಖೆ ಹಂತದಲ್ಲಿದ್ದ ಕೆಲವು ತಡೆ ತೆರವುಗೊಳಿಸಲಾಗಿದೆ. ಮೂಲ ವೇತನ ಆಧಾರದಲ್ಲಿ ಪಿಂಚಣಿ ಪಾಲು ಪಾವತಿ, ಪಿಂಚಣಿ ಪರಿಷ್ಕರಣೆ, ಬಾಕಿ ಉಳಿದ ಪಾವತಿಗೆ ಕ್ರಮ, ವೇತನ ಪರಿಷ್ಕರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಬಿಎಸ್ಎನ್ಎಲ್ 4 ಜಿ ಸ್ಪೆಕ್ಟ್ರಮ್ ಹಂಚಿಕೆ
4ಜಿ ಸ್ಪೆಕ್ರ್ಟಮ್ ಅಲಾಟ್ ಮೆಂಟ್ ಬಗ್ಗೆ ನಿರ್ಧರಿಸಲಾಗಿದ್ದು, ಬಿಎಸ್ಎನ್ಎಲ್ ಗೆ 4 ಜಿ ಸ್ಪೆಕ್ಟ್ರಮ್ ಹಂಚಿಕೆಗೆ ಟೆಲಿಕಾಂ ಇಲಾಖೆ ಈಗಾಗಲೇ ಕ್ಯಾಬಿನೆಟ್ ನೋಟ್ ಅನ್ನು ಸಿದ್ಧಪಡಿಸಿದೆ. ಅನಿರ್ದಿಷ್ಟ ಮುಷ್ಕರಕ್ಕೆ ನೋಟೀಸ್ ನೀಡಲ್ಪಟ್ಟ ತಕ್ಷಣ ಅದನ್ನು ಮಧ್ಯಂತರ ಸಮಾಲೋಚನೆಗೆ ಕಳುಹಿಸಲಾಗಿದೆ.
ಬಿಎಸ್ಎನ್ಎಲ್ ಮೂರನೇ ವೇತನ ಪರಿಷ್ಕರಣೆ
3 ನೇ ವೇತನ ಪರಿಷ್ಕರಣೆ ಸಂಚಿಕೆಗೆ ಸಂಬಂಧಪಟ್ಟಂತೆ, ಯಾವುದೇ ಅಂತಿಮ ಒಪ್ಪಂದಕ್ಕೆ ತಲುಪಿಲ್ಲ. ಆದರೆ, ಈ ವಿಷಯದಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ಆದಾಗ್ಯೂ, 03.12.2018 ರಂದು ನಡೆದ ಸಭೆಯಲ್ಲಿ ಸಿನ್ಹಾ ಮತ್ತು ಟೆಲಿಕಾಂ ಅಧಿಕಾರಿಗಳು 3 ನೇ ವೇತನ ಪರಿಷ್ಕರಣೆಗೆ ಪರಿಹಾರ ನೀಡುವ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿದ್ದಾರೆ.


Click it and Unblock the Notifications