For Quick Alerts
ALLOW NOTIFICATIONS  
For Daily Alerts

ಜಿಯೋ, ಏರ್ಟೆಲ್, ವೋಡಾಫೋನ್: 2019 ಕ್ಕೆ ಯಾವ ಪ್ಲಾನ್ ಗಳು ಬೆಸ್ಟ್? ಇಲ್ಲಿದೆ ಹೋಲಿಕೆ..

ಹಣ ಉಳಿತಾಯದ ವಿಷಯಕ್ಕೆ ಬಂದಾಗ, ದೂರಸಂಪರ್ಕ ಸೇವೆ ನೀಡುವ ಅತ್ಯುತ್ತಮ ಕೈಗೆಟುಕುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಹಣ ಉಳಿಸಬಹುದು. ಹಾಗಿದ್ದರೆ ಕೆಲವು ಉತ್ತಮ ಟೆಲಿಕಾಂ ಪ್ಲಾನ್ ಗಳ ಹೋಲಿಕೆ ಇಲ್ಲಿದೆ.

|

2019 ರ ಹೊಸ ವರ್ಷವು ಹತ್ತಿರದಲ್ಲಿದೆ! ಹೊಸ ವರ್ಷದ ಸಂದರ್ಭದಲ್ಲಿ ಹಣ ಉಳಿತಾಯ ಮಾಡುವ ಒಂದು ನಿರ್ಣಯ ಕೈಗೊಳ್ಳಬಹುದು. ಹಣ ಉಳಿತಾಯದ ವಿಷಯಕ್ಕೆ ಬಂದಾಗ, ದೂರಸಂಪರ್ಕ ಸೇವೆ ನೀಡುವ ಅತ್ಯುತ್ತಮ ಕೈಗೆಟುಕುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಹಣ ಉಳಿಸಬಹುದು.
ಹಾಗಿದ್ದರೆ ಕೆಲವು ಉತ್ತಮ ಟೆಲಿಕಾಂ ಪ್ಲಾನ್ ಗಳ ಹೋಲಿಕೆ ಇಲ್ಲಿದೆ ನೋಡಿ.. ಬಾಲಿವುಡ್ ನ ಟಾಪ್ 15 ಶ್ರೀಮಂತ ನಟಿಯರು, ನಂಬರ್ 1 ಯಾರು ಗೊತ್ತೆ?

ರೂ. 200 ಅಡಿಯಲ್ಲಿ ಪ್ರಿಪೇಯ್ಡ್ ಯೋಜನೆಗಳು

ರೂ. 200 ಅಡಿಯಲ್ಲಿ ಪ್ರಿಪೇಯ್ಡ್ ಯೋಜನೆಗಳು

ರಿಲಯನ್ಸ್ ಜಿಯೋ ರೂ. 149 ಬೆಲೆಯ ಜನಪ್ರಿಯ ಯೋಜನೆಯನ್ನು ನೀಡುತ್ತದೆ. ಅದು ದಿನಕ್ಕೆ 1.5 ಜಿಬಿ ಡೇಟಾವನ್ನು ನೀಡುತ್ತದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು ಮತ್ತು ಒಟ್ಟು 42GB 4G ಡೇಟಾ, ದಿನಕ್ಕೆ 100 SMS ಮತ್ತು ಸ್ಥಳೀಯ/STD ಮತ್ತು ರೋಮಿಂಗ್ ನಲ್ಲಿ ಅನಿಯಮಿತ ಕರೆಗಳನ್ನು ಒದಗಿಸುತ್ತದೆ.

ವೊಡಾಫೋನ್ ರೂ. 199 ಪ್ಲಾನ್

ವೊಡಾಫೋನ್ ರೂ. 199 ಪ್ಲಾನ್

ವೊಡಾಫೋನ್ ರೂ. 199 ಪ್ರಿಪೇಡ್ ಯೋಜನೆ ದಿನಕ್ಕೆ 1.5 ಜಿಬಿ ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ. ಈ ಯೋಜನೆಯು ದಿನಕ್ಕೆ 100 SMS ಗಳನ್ನು ಒದಗಿಸುತ್ತದೆ. ಆದರೆ ಕರೆ ಮಿತಿ ಇದೆ.

ಏರ್ಟೆಲ್ ರೂ. 199 ಪ್ಲಾನ್

ಏರ್ಟೆಲ್ ರೂ. 199 ಪ್ಲಾನ್

ಏರ್ಟೆಲ್ ರೂ. 199 ಪ್ರಿಪೇಡ್ ಯೋಜನೆಯು ದಿನಕ್ಕೆ 1.5 ಜಿಬಿ ಡೇಟಾವನ್ನು 28 ದಿನಗಳವರೆಗೆ ಒದಗಿಸುತ್ತದೆ. ಒಟ್ಟು 42GB ಡೇಟಾವನ್ನು 100 ದಿನನಿತ್ಯದ SMS ಮತ್ತು ಅನಿಯಮಿತ ಸ್ಥಳೀಯ/ ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಪಡೆಯುತ್ತಾರೆ.

ರೂ. 200-299 ರವರೆಗಿನ ಪ್ರಿಪೇಯ್ಡ್ ಪ್ಲಾನ್

ರೂ. 200-299 ರವರೆಗಿನ ಪ್ರಿಪೇಯ್ಡ್ ಪ್ಲಾನ್

ಜಿಯೋ ರೂ. 299 ಪ್ರಿಪೇಡ್ ಪ್ಲಾನ್ ಪರಿಚಯಿಸಿದ್ದು, ಇದು ಒಟ್ಟು 84GB ಡೇಟಾ ನೀಡುತ್ತದೆ.

ಈ ದರದ ಮಿತಿಯಲ್ಲಿ ವೊಡಾಫೋನ್ ಎರಡು ಯೋಜನೆಗಳನ್ನು ಹೊಂದಿದ್ದು, ರೂ. 209 ಮತ್ತು ರೂ. 255. ಇದರಲ್ಲಿ ಬಳಕೆದಾರರು ಪ್ರತಿದಿನ 1.5 ಜಿಬಿ ಮತ್ತು 2 ಜಿಬಿ ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯುತ್ತಾರೆ.

ಅದೇ ರೀತಿ ಏರ್ಟೆಲ್ ರೂ. 249 ಅನಿಯಮಿತ ಯೋಜನೆ ಅಡಿಯಲ್ಲಿ 28 ದಿನಗಳವರೆಗೆ ಪ್ರತಿದಿನ 2 ಜಿಬಿ ಡೇಟಾವನ್ನು ನೀಡುತ್ತದೆ.

ರೂ. 300- 500 ರವರೆಗಿನ ಪ್ರಿಪೇಯ್ಡ್ ಪ್ಲಾನ್

ರೂ. 300- 500 ರವರೆಗಿನ ಪ್ರಿಪೇಯ್ಡ್ ಪ್ಲಾನ್

ರಿಲಯನ್ಸ್ ಜಿಯೋ ರೂ. 349 ಪ್ರಿಪೇಡ್ ಪ್ಲಾನ್ 70 ದಿನಗಳ ಮಾನ್ಯತೆಯೊಂದಿಗೆ 105 ಜಿಬಿ ಡೇಟಾವನ್ನು ನೀಡುತ್ತದೆ. ಜತೆಗೆ ಜಿಯೋ ರೂ. 399 ಮತ್ತು ರೂ. 449 ಯೋಜನೆಗಳನ್ನು ಹೊಂದಿದ್ದು, ದಿನಕ್ಕೆ 1.5 ಜಿಬಿ ಡೇಟಾವನ್ನು ಕ್ರಮವಾಗಿ 84 ಮತ್ತು 91 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ.

ಏರ್ಟೆಲ್ ಮೂರು ಯೋಜನೆ

ಏರ್ಟೆಲ್ ಮೂರು ಯೋಜನೆ

ಇದೇ ರೀತಿ ಏರ್ಟೆಲ್ ಮೂರು ಯೋಜನೆಗಳನ್ನು ಹೊಂದಿದ್ದು, ರೂ. 399 ಮತ್ತು 448 ಪ್ರಿಪೇಯ್ಡ್ ಯೋಜನೆಗಳು ದಿನಕ್ಕೆ 1.4 ಜಿಬಿ ಡೇಟಾವನ್ನು ನೀಡುತ್ತವೆ. ಕ್ರಮವಾಗಿ 70-82 ದಿನಗಳ ಸಿಂಧುತ್ವ ಹೊಂದಿವೆ. ರೂ. 499 ರೀಚಾರ್ಜ್ ಯೋಜನೆ 82 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2 ಜಿಬಿ ಡೇಟಾವನ್ನು ಒದಗಿಸುತ್ತದೆ.

ವೊಡಾಫೋನ್ ರೂ. 349, 399, 479 ಪ್ಲಾನ್

ವೊಡಾಫೋನ್ ರೂ. 349, 399, 479 ಪ್ಲಾನ್

ವೊಡಾಫೋನ್ ರೂ. 349 ಅನಿಯಮಿತ ಪ್ರಿಪೇಡ್ ಪ್ಯಾಕ್ ಅನ್ನು ಪ್ರತಿದಿನ 3ಜಿಬಿ ಡೇಟಾದೊಂದಿಗೆ 28 ​​ದಿನಗಳವರೆಗೆ ನೀಡುತ್ತದೆ.
ಇನ್ನೊಂದು ಯೋಜನೆ ರೂ.399 ಅಡಿಯಲ್ಲಿ ಪ್ರತಿದಿನ 1.4GB ಡೇಟಾವನ್ನು 70 ದಿನಗಳ ವ್ಯಾಲಿಡಿಟಿಯೊಂದಿಗೆ ಒದಗಿಸುತ್ತದೆ. ಕೊನೆಯದಾಗಿ ರೂ. 479 ಯೋಜನೆ ಮೂಲಕ ಪ್ರತಿದಿನ 1.5 ಜಿಬಿ ಡೇಟಾವನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ.

English summary

Reliance Jio vs Airtel vs Vodafone: Best plans for 2019 compared

you can save a lot by opting for the best affordable plans offered by telecos that will keep you connected and online for the entire year. Here's a comparison.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X