ಸಿನಿಮಾ ಜಗತ್ತಿನಲ್ಲಿ ಈಗ ಕೆಜಿಎಫ್ ಹವಾ ಬಲು ಜೋರಾಗಿದೆ.. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಜಗತ್ತಿನಾದ್ಯಂತ ನಾಗಾಲೋಟ ಮುಂದುವರೆಸಿರುವ ಕೆಜಿಎಫ್ ಮೈಲುಗಲ್ಲು ಸ್ಥಾಪನೆ ಮಾಡಿದ್ದು, 100 ಕೋಟಿ ಗಳಿಕೆಯ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ.
ಸಿನಿಮಾ ಜಗತ್ತಿನಲ್ಲಿ ಈಗ ಕೆಜಿಎಫ್ ಹವಾ ಜೋರಾಗಿದೆ.. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಜಗತ್ತಿನಾದ್ಯಂತ ನಾಗಾಲೋಟ ಮುಂದುವರೆಸಿರುವ ಕೆಜಿಎಫ್ ಮೈಲುಗಲ್ಲು ಸ್ಥಾಪನೆ ಮಾಡಿದ್ದು, 100 ಕೋಟಿ ಗಳಿಕೆಯ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ.
ಕನ್ನಡಿಗರ ಹೆಮ್ಮೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ತೆರೆಕಂಡು ಒಂದು ವಾರದ ಹೊಸ್ತಿಲಲ್ಲಿ ನಿಂತಿದೆ. ಆದರೆ ಇದರ ಹವಾ ಮಾತ್ರ ಸುಂಟರಗಾಳಿಯಂತೆ ಇದೆ! ಹಾಗಿದ್ದರೆ ಕಳೆದ ಆರು ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ ನೋಡೋಣ ಬನ್ನಿ..
ಡಿಸೆಂಬರ್ 21
ಡಿಸೆಂಬರ್ 21 ರಂದು ಕೆಜಿಎಫ್ ಬಿಡುಗಡೆಯಾಗಿದೆ. ಭಾರೀ ನಿರೀಕ್ಷೆಗಳೊಂದಿಗೆ ಸಿನಿಮಾ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಕೆಜಿಎಫ್ ಅಭಿಮಾನಿಗಳಿಗೆ ನಿರಾಶೆ ಮಾಡಲಿಲ್ಲ.
ಕೆಜಿಎಫ್ ಮೊದಲ ದಿನ ಕಲೆಕ್ಷನ್ ರೂ. 23 ಕೋಟಿ. ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ?
ಡಿಸೆಂಬರ್ 22
ಎರಡನೇ ದಿನವಾದ ಶನಿವಾರ ಕೆಜಿಎಫ್ ಗಳಿಸಿದ್ದು ಬರೋಬ್ಬರಿ ರೂ. 17 ಕೋಟಿ. ಮೊದಲ ದಿನಕ್ಕೆ ಹೋಲಿಸಿದರೆ ಕಲೆಕ್ಷನ್ ಕಡಿಮೆಯಾಗಿದೆ.
ಡಿಸೆಂಬರ್ 23
ಮೂರನೇ ದಿನವಾದ ಭಾನುವಾರ ಕೆಜಿಎಫ್ ಗಳಿಸಿದ್ದು ಬರೋಬ್ಬರಿ ರೂ. 18 ಕೋಟಿ. ಅಂದರೆ ಮೂರು ದಿನಕ್ಕೆ ಒಟ್ಟು ರೂ. 58 ಕೋಟಿ.
ಡಿಸೆಂಬರ್ 24
ಕೆಜಿಎಫ್ ನಾಲ್ಕನೇ ದಿನವಾದ ಸೋಮವಾರ ರೂ. 19 ಕೋಟಿ ಗಳಿಸಿದೆ. ದಿನದಿಂದ ದಿನಕ್ಕೆ ಗಳಿಕೆಯ ಗ್ರಾಪ್ ಏರುತ್ತಲೇ ಸಾಗಿದೆ.
ಡಿಸೆಂಬರ್ 25
ಕೇಜಿಎಫ್ ಐದನೇ ದಿನ ನೂರರ ಗಡಿ ದಾಟಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿತು. ಐದನೇ ದಿನಕ್ಕೆ ರೂ. 100 ಕೋಟಿ ಗಡಿ ದಾಟಿದೆ ಎಂದು ಬಾಕ್ಸ್ ಆಫೀಸ್ ತಜ್ಞರು ಲೆಕ್ಕಾಚಾರ ಮಾಡಿದ್ದಾರೆ.
ಹಿಂದಿ ವರ್ಷನ್ ಗಳಿಕೆ ಎಷ್ಟು?
ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಕೆಜಿಎಫ್ ಬಾಕ್ಸ್ ಆಫಿಸ್ ಗಳಿಕೆನ್ನು ಟ್ವೀಟ್ ಮಾಡಿದ್ದಾರೆ.
ಹಿಂದಿ ಅವತರಣಿಕೆಯ ಕೆಜಿಎಫ್ ಐದನೇ ದಿನಕ್ಕೆ ಒಟ್ಟು ರೂ. 16.45 ಕೋಟಿ ಗಳಿಸಿದೆ ಎಂದಿದ್ದಾರೆ.
ತರಣ್ ಆದರ್ಶ ನೀಡಿದ ಮಾಹಿತಿಯಂತೆ ಕೆಜಿಎಫ್ ಮೊದಲ ದಿನ ಅಂದ್ರೆ ಶುಕ್ರವಾರ ರೂ. 2.10 ಕೋಟಿ, ಶನಿವಾರ ರೂ. 3 ಕೋಟಿ, ಭಾನುವಾರ ರೂ. 4.10 ಕೋಟಿ, ಸೋಮವಾರ ರೂ. 2.90 ಕೋಟಿ ಹಾಗೂ ಮಂಗಳವಾರ ರೂ. 4.35 ಕೋಟಿ ಗಳಿಕೆ ಮಾಡಿದೆ. ಅಂದರೆ ಐದು ದಿನಗಳಿಗೆ ಒಟ್ಟು ರೂ. 16.45 ಕೋಟಿ ಬಾಚಿಕೊಂಡಿದೆ.
100 ಕೋಟಿ ಕ್ಲಬ್
ಕನ್ನಡದ ಹೆಮ್ಮೆ ಕೆಜಿಎಫ್ ಸಿನಿಮಾ ನೂರು ಕೋಟಿ ಗಳಿಸಿ ಜಗತ್ತಿನಾದ್ಯಂತ ಕನ್ನಡದ ಖ್ಯಾತಿಯನ್ನು ಪಸರಿಸಿದೆ. ಡಿಸೆಂಬರ್ ೨೧ರಿಂದ ಇಲ್ಲಿಯವರೆಗೆ ದಿನದಿಂದ ದಿನಕ್ಕೆ ಕಲೆಕ್ಷನ್ ಏರುತ್ತಲೆ ಹೋಗುತ್ತಿದ್ದು, ಕೆಜಿಎಫ್ ನೂರು ಕೋಟಿ ಕ್ಲಬ್ ಗೆ ಸೆರಿದೆ. ಕನ್ನಡದ ಮೊದಲ 100 ಕೋಟಿ ಕ್ಲಬ್ ಸೇರಿರುವ ಸಿನಿಮಾವಾಗಿದೆ. ಕನ್ನಡದ ಇಲ್ಲಿಯವರೆಗಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದೆ.
ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ
ಜಗತ್ತಿನಾದ್ಯಂತ ಕೆಜಿಎಫ್ ಚಿತ್ರ ವಿಕ್ಷಿಸಿದ ಎಲ್ಲಾ ಭಾಷೆಯ ಜನರು ಭರಪೂರ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. ಗಣ್ಯ ವ್ಯಕ್ತಿಗಳು, ಬೇರೆ ರಂಗದ ನಟ/ನಟಿಯರು ಅಭಿನಂದನೆ ಸಲ್ಲಿಸಿದ್ದಾರೆ. ವಿಕ್ಷಕರ ಪಾಸಿಟಿವ್ ವಿಮರ್ಶೆಯ ಜೊತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲೂ ಏರಿಕೆ ಆಗುತ್ತಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications