For Quick Alerts
ALLOW NOTIFICATIONS  
For Daily Alerts

ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ?

ದಕ್ಷಿಣ ಭಾರತೀಯ ಚಿತ್ರರಂಗ ಅಗಾಧವಾಗಿ ಬೆಳೆದು ನಿಂತಿದೆ. ಪ್ರತಿ ವರ್ಷ ನೂರಾರು ಸಂಖ್ಯೆಯಲ್ಲಿ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಲನಚಿತ್ರಗಳು ತಯಾರಾಗುತ್ತಿವೆ.

By Siddu Thoravat
|

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತೀಯ ಚಿತ್ರರಂಗ ಅಗಾಧವಾಗಿ ಬೆಳೆದು ನಿಂತಿದೆ. ಪ್ರತಿ ವರ್ಷ ನೂರಾರು ಸಂಖ್ಯೆಯಲ್ಲಿ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಲನಚಿತ್ರಗಳು ತಯಾರಾಗುತ್ತಿವೆ. ಅದರಲ್ಲೂ ದೊಡ್ಡ ಬಜೆಟ್ ನ ಚಿತ್ರ ನಿರ್ಮಾಣಕ್ಕೆ ದಕ್ಷಿಣ ಭಾರತೀಯ ಚಿತ್ರರಂಗ ಹೆಸರು ಮಾಡಿದೆ. ತೀರಾ ಈಚೆಗೆ ಬಿಡುಗಡೆಯಾದ ಬೃಹತ್ ಬಜೆಟ್ ಚಿತ್ರಗಳಾದ ಬಾಹುಬಲಿ, ರೋಬೋಟ್‌ಗಳಂತೂ ವಿಶ್ವದಲ್ಲೇ ಸಂಚಲನ ಸೃಷ್ಟಿಸಿವೆ. ಚಿತ್ರಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಬಜೆಟ್ ಹೂಡಲಾಗುತ್ತಿದೆ. ಜೊತೆಗೆ ಇವುಗಳಲ್ಲಿ ಅಭಿನಯಿಸುವ ತಾರೆಯರಿಗೆ ಕೋಟಿ ಕೋಟಿ ಮೊತ್ತದ ಸಂಭಾವನೆಯನ್ನೂ ನೀಡಲಾಗುತ್ತಿದೆ. ಹೀಗಾಗಿ ದಕ್ಷಿಣ ಭಾರತೀಯ ಚಲನಚಿತ್ರ ರಂಗದ ಹಲವಾರು ಸ್ಟಾರ್ ಗಳು ಭಾರತೀಯ ಚಿತ್ರರಂಗದಲ್ಲಿ ಅತಿ ಶ್ರೀಮಂತ ನಟರಾಗಿದ್ದಾರೆ. ಸೌತ್ ಇಂಡಿಯನ್ ಚಿತ್ರಗಳಿಗೆ ವಿಶ್ವದಾದ್ಯಂತ ತುಂಬಾ ಬೇಡಿಕೆ ಇದೆ. ಇವರು ಬಾಲಿವುಡ್ ನ 10 ಅತೀ ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತಾ?

 

ಇಲ್ಲಿ ಚಿತ್ರವೊಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಅತೀ ಶ್ರೀಮಂತ ದಕ್ಷಿಣ ಭಾರತದ ಟಾಪ್ ೨೦ ನಟರ ಪಟ್ಟಿ ನೀಡಲಾಗಿದೆ.

20. ಆರ್‍ಯ

20. ಆರ್‍ಯ

ಆರ್‍ಯ ದಕ್ಷಿಣ ಭಾರತೀಯ ಚಿತ್ರರಂಗದ ಹೆಸರಾಂತ ಕಲಾವಿದರಲ್ಲೊಬ್ಬರಾಗಿದ್ದಾರೆ. ಕೇರಳದಲ್ಲಿ ಹುಟ್ಟಿ ಬೆಳೆದು, ಆರಂಭದಲ್ಲಿ ಕಂಪ್ಯೂಟರ್ ಎಂಜಿನೀಯರ್ ಆಗಿ ಇವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಆದರೆ ಚಿತ್ರರಂಗದೆಡೆಗೆ ಇವರಿಗಿದ್ದ ಸೆಳೆತದಿಂದ ನಟನಾ ವೃತ್ತಿಯನ್ನು ಆಯ್ದುಕೊಂಡರು. ಹಲವಾರು ದೊಡ್ಡ ಚಿತ್ರಗಳಲ್ಲಿ ನಟಿಸಿರುವ ಇವರು, ತಾವು ಅಭಿನಯಿಸುವ ಚಿತ್ರವೊಂದಕ್ಕೆ ಸುಮಾರು 4 ರಿಂದ 6bಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

19. ಸುದೀಪ್

19. ಸುದೀಪ್

1973ರಲ್ಲಿ ಮೈಸೂರಿನಲ್ಲಿ ಜನ್ಮ ತಾಳಿದ ಸುದೀಪ್ ಈಗ ಕನ್ನಡದ ಜನಪ್ರಿಯ ನಟರಲ್ಲೊಬ್ಬರಾಗಿದ್ದಾರೆ. ಸದ್ಯ ಚಿತ್ರವೊಂದಕ್ಕೆ ಸುಮಾರು 6 ಕೋಟಿ ರೂಪಾಯಿ ಪಡೆಯುವ ಇವರು, ಹಿಟ್ ಚಿತ್ರಗಳಾದ ಹುಚ್ಚ, ವೀರ ಮದಕರಿ, ಈಗ ಹಾಗೂ ಕೆಂಪೇಗೌಡ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ವಿಶೇಷ ನಟನೆಯಿಂದ ಬಹುಬೇಡಿಕೆಯ ನಟರಾಗಿದ್ದಾರೆ.  

18. ಟಿ.ಆರ್. ಸಿಲಂಬರಸನ್
 

18. ಟಿ.ಆರ್. ಸಿಲಂಬರಸನ್

ಕಲೆಯನ್ನು ದೈವದತ್ತವಾಗಿ ಪಡೆದಿರುವ ಸಿಲಂಬರಸನ್ ತಮ್ಮ ದೈಹಿಕ ಫಿಟ್ ನೆಸ್ ನಿಂದ ಹೆಸರುವಾಸಿಯಾಗಿದ್ದಾರೆ. ಖ್ಯಾತ ಚಿತ್ರ ನಿರ್ಮಾಪಕ ದೇಸಿಂಗು ರಾಜೇಂದರ್ ಇವರ ತಂದೆ. ಆರಂಭದಲ್ಲಿ ಗಾಯಕನಾಗಿ ವೃತ್ತಿ ಜೀವನ ಆರಂಭಿಸಿದ ಸಿಲಂಬರಸನ್, ನಂತರ ಅಭಿನಯ ವೃತ್ತಿಯನ್ನು ಆಯ್ದುಕೊಂಡರು. ಸದ್ಯ ಚಿತ್ರವೊಂದಕ್ಕೆ 7 ರಿಂದ 8 ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರೆ.

17. ವಿಕ್ಟರಿ ವೆಂಕಟೇಶ

17. ವಿಕ್ಟರಿ ವೆಂಕಟೇಶ

ಚಿತ್ರವೊಂದಕ್ಕೆ 7 ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆಯುವ ವೆಂಕಟೇಶ ದಗ್ಗುಬಾಟಿ ದಕ್ಷಿಣ ಭಾರತದ ಹೆಸರಾಂತ ನಟರಲ್ಲೊಬ್ಬರಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಇವರು, ಮಸಾಲಾ, ಘರ್ಷಣಾ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಕಷ್ಟು ಅಭಿಮಾನಿಗಳ ಸಮೂಹ ಹೊಂದಿರುವ ಇವರು, ಮತ್ತಷ್ಟು ಹಿಟ್ ಚಿತ್ರಗಳನ್ನು ನೀಡುವ ಸಾಧ್ಯತೆಗಳಿವೆ.

16. ನಾಗಾರ್ಜುನ ಅಕ್ಕಿನೇನಿ

16. ನಾಗಾರ್ಜುನ ಅಕ್ಕಿನೇನಿ

ಹೈದರಾಬಾದ್ ಮೂಲದ ನಾಗಾರ್ಜುನ ಅಕ್ಕಿನೇನಿ ಶ್ರೇಷ್ಠ ನಟರಾಗಿದ್ದಾರೆ. ಹೈದರಾಬಾದ್ ನಲ್ಲಿ ಶಿಕ್ಷಣ ಪಡೆದ ಇವರು, ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಅಟೊಮೋಬೈಲ್ ಎಂಜಿನಿಯರಿಂಗ್ ಪದವೀಧರರಾದ ನಾಗಾರ್ಜುನ, ಪ್ರತಿ ಚಿತ್ರಕ್ಕೆ 7 ರಿಂದ 10 ಕೋಟಿ ರೂಪಾಯಿ ಸಂಭಾವನೆ ಗಳಿಸುತ್ತಾರೆ.

15. ರವಿ ತೇಜ

15. ರವಿ ತೇಜ

ರವಿ ತೇಜ ಜನಪ್ರಿಯ ನಟರಲ್ಲೊಬ್ಬರಾಗಿದ್ದು, ಇವರ ಬಗ್ಗೆ ಹೆಚ್ಚಿನ ಪರಿಚಯ ಹೇಳುವುದು ಅಗತ್ಯವೇ ಇಲ್ಲ. ಆಂಧ್ರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಇವರು ಚಿತ್ರರಂಗದ ಮೂಲಕ ತಮ್ಮ ವೃತ್ತಿ ಬದುಕಿನ ಉನ್ನತ ಮಟ್ಟಕ್ಕೇರಿದ್ದಾರೆ. ಮೂಲಗಳ ಪ್ರಕಾರ ಚಿತ್ರವೊಂದಕ್ಕೆ 8 ರಿಂದ 10 ಕೋಟಿ ರೂಪಾಯಿ ಸಂಪಾದಿಸುವ ಇವರು, ವಿಕ್ರಮಾರ್ಕುಡು, ಕಿಕ್, ಸಂಭೋ ಸಿವಾ ಸಂಭೋ ಹಾಗೂ ಕೃಷ್ಣ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

14. ಕಾರ್ತಿ

14. ಕಾರ್ತಿ

ಬಹು ಖ್ಯಾತ ನಟರಾಗಿರುವ ಕಾರ್ತಿ, 1977 ರಲ್ಲಿ ಚೆನ್ನೈನಲ್ಲಿ ಜನಿಸಿದರು. ಸಹಾಯಕ ನಿರ್ದೇಶಕನಾಗಿ ವೃತ್ತಿ ಆರಂಭಿಸಿದ ಇವರು ನಂತರ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟರು. ಜನಪ್ರಿಯ ಚಿತ್ರಗಳಾದ ಆಯಿರಾಥಿಲ್ ಒರುವನ್, ಮದ್ರಾಸ್, ಪರುತ್ತಿವೀರನ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಅವರ ಸಂಭಾವನೆ ಚಿತ್ರವೊಂದಕ್ಕೆ 8 ರಿಂದ 10 ಕೋಟಿ ರೂಪಾಯಿಗಳಷ್ಟಾಗಿದೆ.

13. ಧನುಷ್

13. ಧನುಷ್

ಧನುಷ್ ಎಂದು ಖ್ಯಾತರಾಗಿರುವ ಇವರ ನಿಜ ನಾಮಧೇಯ ವೆಂಕಟೇಶ ಪ್ರಭು. ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಹಿನ್ನೆಲೆ ಗಾಯಕರೂ ಹೌದು. ಜೊತೆಗೆ ಕೆಲ ಚಿತ್ರಗಳಿಗೆ ನಿರ್ಮಾಪಕರು ಆಗಿದ್ದಾರೆ. ಆಡುಕಾಲಂ ಚಿತ್ರದ ಅಭಿನಯಕ್ಕೆ ಇವರು 'ಶ್ರೇಷ್ಠ ನಟ' ಎಂದು ನ್ಯಾಷನಲ್ ಫಿಲ್ಮ್ ಅವಾರ್ಡ್ ಪಡೆದುಕೊಂಡಿದ್ದಾರೆ. ಪ್ರತಿ ಚಿತ್ರಕ್ಕೆ ಇವರು ಗಳಿಸುವ ಮೊತ್ತ ಸುಮಾರು 10 ರಿಂದ 15 ಕೋಟಿ ರೂಪಾಯಿಗಳಾಗಿದೆ.

12. ವಿಕ್ರಮ್

12. ವಿಕ್ರಮ್

ತಮಿಳು ಸೂಪರ್ ಸ್ಟಾರ್ ವಿಕ್ರಮ್ ದಕ್ಷಿಣ ಭಾರತದ ಸಿರಿವಂತ ನಟರಲ್ಲೊಬ್ಬರಾಗಿದ್ದಾರೆ. ೧೯೯೦ ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ತಮ್ಮ ವಿಶಿಷ್ಟ ಅಭಿನಯದಿಂದ ಸೆಳೆಯುತ್ತಾರೆ. ಪ್ರತಿ ಚಿತ್ರಕ್ಕೆ ಇವರ ಸಂಭಾವನೆ 12 ಕೋಟಿ ರೂಪಾಯಿಗಳಷ್ಟಾಗಿದೆ.

11. ರಾಮ ಚರಣ್

11. ರಾಮ ಚರಣ್

ತೆಲುಗು ಚಿತ್ರರಂಗದ ರಾಮ ಚರಣ್ ಪ್ರತಿ ಚಿತ್ರಕ್ಕೆ ಗಳಿಸುವುದು ಸುಮಾರು 12 ಕೋಟಿ ರೂಪಾಯಿ. ತೆಲುಗು ಚಿತ್ರರಂಗದ ಅನಭಿಷಿಕ್ತ ತಾರೆ ಚಿರಂಜೀವಿಯವರ ಸುಪುತ್ರರಾಗಿರುವ ಇವರು ತಮ್ಮ ಮನೋಜ್ಞ ಅಭಿನಯದ ಮೂಲಕ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ.

10. ಜ್ಯೂನಿಯರ್ ಎನ್‌ಟಿಆರ್

10. ಜ್ಯೂನಿಯರ್ ಎನ್‌ಟಿಆರ್

ತೆಲುಗು ಚಿತ್ರರಂಗದ ಕಲಾವಿದ ಜ್ಯೂನಿಯರ್ ಎನ್‌ಟಿಆರ್ ಪ್ರತಿ ಚಿತ್ರಕ್ಕೆ ಪಡೆಯುವುದು ಸುಮಾರು 12 ಕೋಟಿ ರೂಪಾಯಿ. 1983ರಲ್ಲಿ ಹುಟ್ಟಿದ ಇವರು ಕೂಚಿಪುಡಿ ನೃತ್ಯ ಕಲಾವಿದರೂ ಆಗಿದ್ದಾರೆ. ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಅಡಿಯಿಟ್ಟ ಇವರು ಪ್ರಸ್ತುತ ಚಿತ್ರರಂಗದಲ್ಲಿ ಉತ್ತಮ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

9. ಅಲ್ಲು ಅರ್ಜುನ್

9. ಅಲ್ಲು ಅರ್ಜುನ್

ಖ್ಯಾತ ಚಿತ್ರ ನಿರ್ಮಾಪಕ ಅಲ್ಲು ಅರವಿಂದ್ ಅವರ ಸುಪುತ್ರ ಅಲ್ಲು ಅರ್ಜುನ್. ಅಭಿಮಾನಿಗಳು ಅರ್ಜುನ್ ಅವರನ್ನು ಬನ್ನಿ ಎಂದು ಕರೆಯುತ್ತಾರೆ. ಅಲ್ಲು ಅರ್ಜುನ್ ಅವರ ಅಂಕಲ್ ಚಿರಂಜೀವಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸದ್ಯ ಅರ್ಜುನ್ ಪ್ರತಿ ಚಿತ್ರಕ್ಕೆ ಸುಮಾರು ರೂ. 14 ಕೋಟಿ ಸಂಭಾವನೆ ಪಡೆಯುತ್ತಾರೆ.

8. ಅಜಿತ್

8. ಅಜಿತ್

ತಮಿಳು ಸುಪರ್ ಸ್ಟಾರ್ ಅಜಿತ್ ಕುಮಾರ್ ೧೯೯೫ ರಲ್ಲಿ ಆಸೈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅನೇಕ ಹಿಟ್ ಫಿಲಂಗಳನ್ನು ನೀಡಿರುವ ಇವರು ಪ್ರತಿ ಚಿತ್ರಕ್ಕೆ ಸುಮಾರು 16 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

7. ಸೂರ್ಯ

7. ಸೂರ್ಯ

ಚಿತ್ರವೊಂದಕ್ಕೆ 17 ಕೋಟಿ ರೂಪಾಯಿ ಪಡೆಯುವ ಸೂರ್ಯ ದಕ್ಷಿಣ ಭಾರತದ ಸಿರಿವಂತ ನಟರಲ್ಲೊಬ್ಬರು. ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡಿರುವ ಇವರಿಗೆ ಅನೇಕ ಬಿರುದು, ಪ್ರಶಸ್ತಿಗಳು ಸಂದಿವೆ.

6. ಮಹೇಶ ಬಾಬು

6. ಮಹೇಶ ಬಾಬು

ಭಾರಿ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಮಹೇಶ ಬಾಬು ಉತ್ತಮ ನಟರಾಗಿ ಹೆಸರು ಗಳಿಸಿದ್ದಾರೆ. ಬಾಲಕಲಾವಿದರಾಗಿ ಬಣ್ಣ ಹಚ್ಚಿದ ಇವರು, 1999ರಲ್ಲಿ ರಾಜಕುಮಾರುಡು ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ಸದ್ಯ ಮಹೇಶ ಬಾಬು ಚಿತ್ರವೊಂದಕ್ಕೆ 18 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

5. ಪವನ ಕಲ್ಯಾಣ

5. ಪವನ ಕಲ್ಯಾಣ

ತೆಲುಗು ಚಿತ್ರರಂಗದ ಹಿರಿಯ ಚಿರಂಜೀವಿ ಅವರ ಸಹೋದರ ಪವನ ಕಲ್ಯಾಣ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. 1996 ರಲ್ಲಿ ಚಿತ್ರರಂಗ ಪ್ರವೇಶಿಸಿದ ಇವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪ್ರತಿ ಚಿತ್ರಕ್ಕೆ ಇವರು ಪಡೆಯುವ ಸಂಭಾವನೆ 18 ಕೋಟಿ ರೂಪಾಯಿ.

4. ಪ್ರಭಾಸ

4. ಪ್ರಭಾಸ

'ಈಶ್ವರ' ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದ ಪ್ರಭಾಸ, ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರು ಅಭಿನಯಿಸಿದ ಇತ್ತೀಚಿನ ಚಿತ್ರಗಳಾದ ಬಾಹುಬಲಿ ಭಾಗ ೧-೨ ಭಾರತೀಯ ಚಿತ್ರರಂಗದ ಅತಿ ಹೆಚ್ಚು ಹಣ ಗಳಿಸಿದ ಚಿತ್ರಗಳಾಗಿವೆ. ಬಾಹುಬಲಿ ಚಿತ್ರಕ್ಕೆ ಇವರಿಗೆ 20 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಇವರ ಸಂಭಾವನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ.

3. ಕಮಲ ಹಾಸನ್

3. ಕಮಲ ಹಾಸನ್

ದಶಕಗಳಿಂದ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಿಂದ ಖ್ಯಾತರಾಗಿರುವ ಕಮಲ ಹಾಸನ್ ಪ್ರತಿ ಚಿತ್ರಕ್ಕೆ ಸುಮಾರು 25 ರಿಂದ 30 ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಿದ್ದಾರೆ. ತಮಿಳು, ಹಿಂದಿ ಹಾಗೂ ಇನ್ನೂ ಅನೇಕ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ನೂರಾರು ಪ್ರಶಸ್ತಿಗಳು ಸಂದಿವೆ. ಕಮಲ ಹಾಸನ್ 4 ರಾಷ್ಟ್ರೀಯ ಪ್ರಶಸ್ತಿ, 16 ಫಿಲಂ ಫೇರ್ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.

2. ವಿಜಯ್

2. ವಿಜಯ್

ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್, ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ಎ. ಚಂದ್ರಶೇಖರ ಅವರ ಪುತ್ರರಾಗಿದ್ದಾರೆ. ಹಿನ್ನೆಲೆ ಗಾಯಕರೂ ಆಗಿರುವ ವಿಜಯ್, ಪ್ರತಿ ಚಿತ್ರಕ್ಕೆ 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

1. ರಜನಿಕಾಂತ್

1. ರಜನಿಕಾಂತ್

ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲೇ ಅತಿ ಸಿರಿವಂತ ನಟರಲ್ಲೊಬ್ಬರಾಗಿದ್ದಾರೆ. ಇವರು ಚಿತ್ರವೊಂದಕ್ಕೆ 50 ರಿಂದ 60 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ತಮ್ಮದೇ ಆದ ವಿಶಿಷ್ಟ ಶೈಲಿಯ ಅಭಿನಯ, ಸಾಹಸ ದೃಶ್ಯಗಳಲ್ಲಿ ಲೀಲಾಜಾಲವಾಗಿ ಪಾಲ್ಗೊಳ್ಳುವಿಕೆ ಹಾಗೂ ಎಲ್ಲ ತರದ ಪಾತ್ರಗಳಲ್ಲಿ ನಟಿಸುವ ರಜನಿಕಾಂತ್ ಅವರಿಗೆ ಬಹುದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಅಷ್ಟೇ ಅಲ್ಲದೆ ಸ್ವಭಾವತಃ ಒಳ್ಳೆಯ ವ್ಯಕ್ತಿಯಾಗಿರುವ ಇವರಿಗೆ ಇಡೀ ವಿಶ್ವದಲ್ಲೇ ಗೌರವ ಸ್ಥಾನವಿದೆ. ಇತ್ತೀಚೆಗೆ ಬಿಡುಗಡೆಯಾದ ಕಬಾಲಿ ಚಿತ್ರಕ್ಕೆ ಇವರು 35 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಈ ಚಿತ್ರ ಸುಮಾರು 80 ಕೋಟಿ ರೂಪಾಯಿ ಆದಾಯ ಗಳಿಸಿತ್ತು.

 

ಅಬ್ಬಾ..! ಇವು ಭಾರತದ ಸಾರ್ವಕಾಲಿಕ ಅತಿಹೆಚ್ಚು ವೆಚ್ಚದ ಸಿನಿಮಾಗಳುಅಬ್ಬಾ..! ಇವು ಭಾರತದ ಸಾರ್ವಕಾಲಿಕ ಅತಿಹೆಚ್ಚು ವೆಚ್ಚದ ಸಿನಿಮಾಗಳು

English summary

Top 20 Richest South Indian Actors 2018

Top 20 Richest & Highest Paid South Indian Actors 2018.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X