ಹೊಸ ವರ್ಷಕ್ಕೆ ಬಂಪರ್! ಎಲ್ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ

ಎಲ್ಪಿಜಿ ಗ್ರಾಹಕರಿಗೆ ಹೊಸ ವರ್ಷ ಹರುಷ ತಂದಿದೆ! ಕೇಂದ್ರ ಸರ್ಕಾರ ಹೊಸ ವರ್ಷದ ಸಂದರ್ಭದಲ್ಲಿ ಗ್ರಾಹಕರನ್ನು ಸಮಾಧಾನ ಪಡಿಸಿದೆ. ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರವನ್ನು ಕಡಿತಗೊಳಿಸಲಾಗಿದೆ.

ಎಲ್ಪಿಜಿ ಗ್ರಾಹಕರಿಗೆ ಹೊಸ ವರ್ಷ ಹರುಷ ತಂದಿದೆ! ಕೇಂದ್ರ ಸರ್ಕಾರ ಹೊಸ ವರ್ಷದ ಸಂದರ್ಭದಲ್ಲಿ ಗ್ರಾಹಕರನ್ನು ಸಮಾಧಾನ ಪಡಿಸಿದೆ. ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರವನ್ನು ಕಡಿತಗೊಳಿಸಲಾಗಿದೆ. ಒಂದೇ ತಿಂಗಳಲ್ಲಿ ಎರಡನೇ ಬಾರಿ ಇಳಿಕೆ ಇದಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ದರ ರೂ. 120.50 ರಷ್ಟು ಕಡಿಮೆ ಮಾಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಎಲ್ಪಿಜಿ ಸಂಪರ್ಕ ಪಡೆಯೋದು ಹೇಗೆ?

ಸಬ್ಸಿಡಿ ಸಹಿತ

ಸಬ್ಸಿಡಿ ಸಹಿತ

ಹೊಸ ವರ್ಷದ ಮುನ್ನಾ ದಿನ ಎಲ್‌ಪಿಜಿ ಬೆಲೆ ರೂ. 5.91 ಕಡಿಮೆಯಾಗಿದೆ.
14.2 ಕೆ.ಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಸೋಮವಾರದಿಂದ ಜಾರಿ ಬಂದಿದ್ದು, ರೂ. 5.91 ಕಡಿಮೆಯಾಗಿದೆ. ಕಳೆದ ಬಾರಿ ರೂ. 6.52 ರಷ್ಟು ಬೆಲೆಯನ್ನು ತಗ್ಗಿಸಲಾಗಿತ್ತು ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ. ಎಲ್ಪಿಜಿ ದರ ರೂ. 500.90 ರಿಂದ ರೂ. 494.99 ಕ್ಕೆ ಇಳಿದಿದೆ. ಕಳೆದ ತಿಂಗಳು 14.2 ಕೆಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 507.42 ರಷ್ಟಿತ್ತು.

ಸಬ್ಸಿಡಿ ರಹಿತ ಸಿಲಿಂಡರ್‌

ಸಬ್ಸಿಡಿ ರಹಿತ ಸಿಲಿಂಡರ್‌

ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆಯಲ್ಲೂ ಇಳಿಕೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ಸಿಲಿಂಡರ್‌ ಬೆಲೆ ಇಳಿಕೆಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ದರವನ್ನು ರೂ. 120.50 ರಂತೆ ಕಡಿಮೆ ಮಾಡಲಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ದರ ಪ್ರತಿ ಸಿಲಿಂಡರ್ ಗೆ ಕಳೆದ ಬಾರಿ ರೂ. 133 ಇಳಿಕೆ ಮಾಡಲಾಗಿತ್ತು.

ಪ್ರತಿವರ್ಷ 12 ಸಿಲಿಂಡರ್

ಪ್ರತಿವರ್ಷ 12 ಸಿಲಿಂಡರ್

ದೇಶದ ಕುಟುಂಬಗಳು ಪ್ರತಿವರ್ಷ 12 ಸಬ್ಸಿಡಿ ಸಹಿತ ಸಿಲಿಂಡರ್ ಗಳನ್ನು ವಿಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತ ಖರೀದಿಸಬೇಕಾಗುತ್ತದೆ. ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಎಲ್ಪಿಜಿ ಬೆಲೆ ಇಳಿಕೆಗೆ ಕಾರಣ

ಎಲ್ಪಿಜಿ ಬೆಲೆ ಇಳಿಕೆಗೆ ಕಾರಣ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ಬೆಲೆ ಇಳಿಕೆ ಕಂಡಿರುವುದು ಹಾಗು ಡಾಲರ್ ಎದುರು ರೂಪಾಯಿ ವಿನಿಮಯ ದರ ಇಳಿಕೆಯೆತ್ತ ಸಾಗುತ್ತಿರುವುದರಿಂದ ಬೆಲೆ ಕಡಿತಗೊಳಿಸಲಾಗಿದೆ.

ಉಜ್ವಲ ಯೋಜನೆ

ಉಜ್ವಲ ಯೋಜನೆ

ಕೇಂದ್ರದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ 10 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸಿದೆ. ಈ ಯೋಜನೆ ಸಾಕಾರಕ್ಕಾಗಿ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೈಜೋಡಿಸಿವೆ. ಕೇಂದ್ರದ ಉಜ್ವಯ ಯೋಜನೆಯಂತೆ ರಾಜ್ಯದಲ್ಲಿ ಅನಿಲಭಾಗ್ಯ ಯೋಜನೆ ಅನುಷ್ಠಾನವಾಗಿದೆ. ಕೇಂದ್ರ ಸರ್ಕಾರ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ರಾಜ್ಯದ ಶೇ. 60ರಷ್ಟು ಕುಟುಂಬಗಳು ಬರುತ್ತಿರಲಿಲ್ಲ. ಹೀಗಾಗಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಅವರೆಲ್ಲರಿಗೂ ಅಡುಗೆ ಅನಿಲ (ಗ್ಯಾಸ್) ನೀಡುವ ಉದ್ದೇಶ ಹೊಂದಿದೆ. ಎಲ್ಪಿಜಿ ಸಬ್ಸಿಡಿ: ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ

100% ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ

100% ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ

ಶೇ. 100 ರಷ್ಟು ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಸಾಧಿಸುವ ಗುರಿ ಹೊಂದಲಾಗಿದೆ. 2011 ರ ಸಮಾಜೋ ಆರ್ಥಿಕ ಜಾತಿ ಜನಗಣತಿ (SECC) ಆಧಾರದ ಮೇಲೆ ಸಂಪರ್ಕಗಳನ್ನು ನೀಡಲಾಗುತ್ತಿತ್ತು. ನಂತರ ಪ್ರಧಾನ ಮಂತ್ರಿ ಆವಾಸ ಯೋಜನೆ ಮತ್ತು ಅಂತ್ಯೋದಯ ಯೋಜನೆಯ ಫಲಾನುಭವಿಗಳಾದ ಎಸ್‌ಸಿ, ಎಸ್‌ಟಿ, ಅರಣ್ಯ ನಿವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳು, ದ್ವೀಪ ನಿವಾಸಿಗಳು, ಅಲೆಮಾರಿ ಬುಡಕಟ್ಟು ಜನಾಂಗ, ಚಹಾ ಎಸ್ಟೇಟ್‌ಗಳ ಬಡವರಿಗೆ ಯೋಜನೆಯನ್ನು ವಿಸ್ತರಿಸಲಾಗಿತ್ತು. ಈಗ ಎಲ್ಲ ವರ್ಗದ ಕಡು ಬಡವರಿಗೂ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಎಲ್‌ಪಿಜಿ ಸಂಪರ್ಕ ಲಭ್ಯವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+