For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ ಸಬ್ಸಿಡಿ: ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ

ಎಲ್ಪಿಜಿ ಸಬ್ಸಿಡಿ ನೇರ ಲಾಭ ವರ್ಗಾವಣೆ(ಡಿಬಿಟಿ) ವ್ಯವಸ್ಥೆ ರದ್ದಾಗಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ನೇರ ಲಾಭ ವರ್ಗಾವಣೆ ವ್ಯವಸ್ಥೆ ಬದಲಿಸುವ ಕುರಿತು ಯಾವುದೇ ಪ್ರಸ್ತಾವನೆಗಳು ಸರ್ಕಾರದ ಬಳಿ ಇಲ್ಲ.

|

ಎಲ್ಪಿಜಿ ಸಬ್ಸಿಡಿ ನೇರ ಲಾಭ ವರ್ಗಾವಣೆ(ಡಿಬಿಟಿ) ವ್ಯವಸ್ಥೆ ರದ್ದಾಗಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ನೇರ ಲಾಭ ವರ್ಗಾವಣೆ ವ್ಯವಸ್ಥೆ ಬದಲಿಸುವ ಕುರಿತು ಯಾವುದೇ ಪ್ರಸ್ತಾವನೆಗಳು ಸರ್ಕಾರದ ಬಳಿ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.

ಎಲ್ಪಿಜಿ ಸಬ್ಸಿಡಿ: ನೇರ ಲಾಭ ವರ್ಗಾವಣೆ ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ

ಎಲ್‌ಪಿಜಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವ ಸದ್ಯದ ನೇರ ಪಾವತಿ ವ್ಯವಸ್ಥೆ (ಡಿಬಿಟಿ) ಮುಂದುವರಿಯಲಿದೆ.

ಎಲ್‌ಪಿಜಿ ಸಬ್ಸಿಡಿ ವ್ಯವಸ್ಥೆ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಲ್ಲಿ ಸತ್ಯಾಂಶವಿಲ್ಲ. ಗ್ರಾಹಕರು ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯನ್ನು ಹಿಂಪಡೆದು ಹಳೆಯ ವ್ಯವಸ್ಥೆಯನ್ನು ಸಬ್ಸಿಡಿ ವಿತರಣೆಗೆ ಅನುಸರಿಸಲಾಗುವುದು. ಈ ಸಂಬಂಧಿ ಪ್ರಸ್ತಾವನೆಗಳು ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲ ಸಚಿವಾಲಯದ ಮುಂದಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ ಸಚಿವಾಲಯ ಈ ಸುಳ್ಳು ವರದಿಗಳನ್ನು ತಳ್ಳಿಹಾಕಿದೆ. ಗ್ರಾಮೀಣ ಭಾಗದ ಎಲ್ಪಿಜಿ ಗ್ರಾಹಕರ ಬ್ಯಾಂಕ್‌ ಖಾತೆಗೆ ಸಬ್ಸಿಡಿಯು ಜಮೆಯಾಗುತ್ತಿಲ್ಲ. ಬ್ಯಾಂಕು ಮತ್ತು ಎಲ್‌ಪಿಜಿ ಏಜೆನ್ಸಿಗಳ ಬೇಜವಾಬ್ದಾರಿಯಿಂದಾಗಿ ಅರ್ಹರಿಗೆ ಸಬ್ಸಿಡಿ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿದ್ದವು.

Read more about: lpg money finance news
English summary

No proposal to alter DBT mechanism to transfer subsidy to LPG consumers: Govt

The Ministry of Petroleum and Natural Gas has clarified that there is no proposal to alter the DBT mechanism to transfer subsidy to domestic LPG consumers.
Story first published: Wednesday, December 5, 2018, 12:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X