For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಆವಾಸ ಯೋಜನೆ: ಮನೆ ಖರೀದಿಸುವವರಿಗೆ ಹೊಸ ವರ್ಷಕ್ಕೆ ಸಿಹಿಸುದ್ದಿ

ಕೇಂದ್ರವು ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಅಡಿಯಲ್ಲಿ ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಮ್ (CLSS) ಮೂಲಕ ಮಧ್ಯಮ ಆದಾಯ ಗುಂಪು (ಎಂಐಜಿ) ಗಳಿಗೆ ನೀಡುವ ಮನೆ ಸಾಲದ ಅವಧಿ ಮಾರ್ಚ್ 2020 ರ ವರೆಗೆ ವಿಸ್ತರಿಸಿದೆ.

|

ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ದೇಶದ ಜನತೆಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದ್ದು, ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಬಡ್ಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಇದರ ಬಗ್ಗೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಸಚಿವಾಲಯದ ಅನ್ವಯ ಮಧ್ಯಮ ಆದಾಯ ಗುಂಪುಗಳ (ಎಂಐಜಿ) CLSS ಯೋಜನೆಯನ್ನು ಡಿಸೆಂಬರ್ 12, 2017ರಿಂದ ಆರಂಭಿಸಲಾಗಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಸಾಲದ ಅವಧಿ ವಿಸ್ತಾರ

ಸಾಲದ ಅವಧಿ ವಿಸ್ತಾರ

ಕೇಂದ್ರವು ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಅಡಿಯಲ್ಲಿ ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಮ್ (CLSS) ಮೂಲಕ ಮಧ್ಯಮ ಆದಾಯ ಗುಂಪು (ಎಂಐಜಿ) ಗಳಿಗೆ ನೀಡುವ ಮನೆ ಸಾಲದ ಅವಧಿ ಮಾರ್ಚ್ 2020 ರ ವರೆಗೆ ವಿಸ್ತರಿಸಿದೆ ಎಂದು ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವ ಹೃದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ.

ಸಬ್ಸಿಡಿ ಮೊತ್ತ ಎಷ್ಟು?

ಸಬ್ಸಿಡಿ ಮೊತ್ತ ಎಷ್ಟು?

ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಮ್ (CLSS) ಮೂಲಕ ಕೇಂದ್ರ ಸರ್ಕಾರ ರೂ. 2.67 ಲಕ್ಷದವರೆಗೆ ಸಬ್ಸಿಡಿಯನ್ನು ಒದಗಿಸುತ್ತದೆ. ಇದಕ್ಕಾಗಿ ಒಂದು ವರ್ಷದವರೆಗೆ (ಮಾರ್ಚ್, 31 2020) ಅವಧಿಯನ್ನು ವಿಸ್ತರಿಸಲಾಗಿದೆ ಎಂದಿದ್ದಾರೆ.

ಅರ್ಹತೆ ಮಾನದಂಡ

ಅರ್ಹತೆ ಮಾನದಂಡ

ಮದ್ಯಮ ಆದಾಯ ಗುಂಪಿನ (MIG) ಫಲಾನುಭವಿಗಳು ವಾರ್ಷಿಕವಾಗಿ ರೂ. 6 ಲಕ್ಷದಿಂದ ರೂ. 18 ಲಕ್ಷ ಆದಾಯ ಹೊಂದಿದವರಿಗೆ CLSS ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೊದಲ ಬಾರಿಗೆ ಮನೆ ಖರೀದಿಸುತ್ತಿದ್ದಲ್ಲಿ ಬಡ್ಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ವಾರ್ಷಿಕ ಆದಾಯ ರೂ. 12 ಲಕ್ಷದಿಂದ 18 ಲಕ್ಷ ವರೆಗೆ ಇದ್ದಲ್ಲಿ ಬಡ್ಡಿ ಸಬ್ಸಿಡಿ ಶೇ. 3 ರಷ್ಟಾಗುತ್ತದೆ.

ಫಲಾನುಭವಿಗಳು

ಫಲಾನುಭವಿಗಳು

ಈ ವರ್ಷ ಡಿಸೆಂಬರ್ 30 ರವರೆಗೆ ಸುಮಾರು 3,39,713 ಫಲಾನುಭವಿಗಳು PMAY (Urban), ಪಿಎಎಂಐ (ಅರ್ಬನ್) ಅಡಿಯಲ್ಲಿ ಸಿಎಲ್ಎಸ್ಎಸ್ ಪಡೆದುಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರದ ಆಶಯ

ಸರ್ಕಾರದ ಆಶಯ

CLSS ಸಾಲ ಆಧಾರಿತ ಸಬ್ಸಿಡಿ ಯೋಜನೆ ಅನ್ವಯ ಮಧ್ಯಮ ಆದಾಯ ಹೊಂದಿರುವ ವರ್ಗದವರು ಉತ್ತಮವಾಗಿ ಮರು ಪಾವತಿ ಮಾಡುತ್ತಿದ್ದಾರೆ. ಈ ವಲಯವು ಉತ್ತಮವಾದ ಬೆಳವಣಿಗೆ ಹೊಂದುತ್ತಿರುವ ಕಾರಣ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಬಡ್ಡಿ ಸಬ್ಸಿಡಿಗೆ ಅವಕಾಶ ಕಲ್ಪಿಸಲಾಗಿದೆ.

English summary

PMAY: CLSS home loans for MIG extended till March 2020

CLSS on home loans for the Middle Income Group (MIG) under the Pradhan Mantri Awas Yojana (Urban) till March 2020.
Story first published: Tuesday, January 1, 2019, 12:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X