For Quick Alerts
ALLOW NOTIFICATIONS  
For Daily Alerts

6 ದಿನಗಳ ಕಾಲ ಏರಿಳಿತ ನಂತರ ಪೆಟ್ರೋಲ್, ಡೀಸೆಲ್ ದರ ಸ್ಥಿರ!

|

ಬೆಂಗಳೂರು, ಜನವರಿ 22: ಕಳೆದ ಆರು ದಿನಗಳಿಂದ ಏರಿಳಿತ ಕಂಡಿದ್ದ ಇಂಧನ ಬೆಲೆ ಬುಧವಾರದಂದು ಸ್ಥಿರವಾಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ವ್ಯತ್ಯಾಸ ಮತ್ತು ಡಾಲರ್​ಎದುರು ಭಾರತದ ರೂಪಾಯಿ ಅಪಮೌಲ್ಯ ಎಲ್ಲವೂ ಇಂಧನ ಬೆಲೆ ವ್ಯತ್ಯಾಸಕ್ಕೆ ಕಾರಣವಾಗಲಿದೆ.

 

ಒಪೆಕ್ ನಿಂದ ಕಚ್ಚಾತೈಲ ಉತ್ಪಾದನೆ ಹಾಗೂ ಪೂರೈಕೆ ಮೇಲೆ ಕಡಿವಾಣ ಹಾಕಲಾಗಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 61.58 ಯುಎಸ್ ಡಾಲರ್ ನಷ್ಟಿದೆ.

 

ಕಚ್ಚಾತೈಲ ಬೆಲೆ ಏರಿಕೆ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ದುಬಾರಿ

ಪ್ರತಿ ಬ್ಯಾರೆಲ್ ಗೆ 80 ಯುಎಸ್ ಡಾಲರ್ ಗೇರಿದ್ದ ಕಚ್ಚಾತೈಲ ಬೆಲೆ ಇತ್ತೀಚಿನ ತಿಂಗಳುಗಳಲ್ಲಿ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡಿದ್ದರಿಂದ ಡಿಸೇಲ್, ಪೆಟ್ರೋಲ್ ಬೆಲೆಯೂ ಶೇಕಡಾ 20ರಷ್ಟು ಇಳಿಕೆಯಾಗಿದೆ. ಶೇ 80ರಷ್ಟು ಇಂಧನವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ.

6 ದಿನಗಳ ಕಾಲ ಏರಿಳಿತ ನಂತರ ಪೆಟ್ರೋಲ್, ಡೀಸೆಲ್ ದರ ಸ್ಥಿರ!

ಕರ್ನಾಟಕದಲ್ಲಿ ಜನವರಿ 01ರಿಂದ ಸೆಸ್ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1.30 ರೂ.ನಷ್ಟು ಹೆಚ್ಚಳವಾಗಿದೆ.ಇದರಿಂದ ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71.27 ರೂ. ಇದೆ. ಡೀಸೆಲ್ ಬೆಲೆ 65.90 ರೂ. ಆಗಿದೆ.

ನಿಮ್ಮ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಎಂದು ತಿಳಿಯಿರಿ

English summary

No change in petrol, diesel prices on Wednesday. Check rates here

It is welcome news that after six consecutive days of rate revision, state-controlled oil marketing companies on Wednesday left prices of retail petrol and diesel unchanged. In the National capital Delhi, petrol is sold at Rs 71.27 and diesel is sold at Rs 65.90, no change compared to Tuesday’s price.
Story first published: Wednesday, January 23, 2019, 18:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X