ಸಿಮ್ ಪೋರ್ಟ್ ಮಾಡುವುದರ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ನಿಮ್ಮ ಮೊಬೈಲ್ ಸಿಮ್ ಅನ್ನು ಒಂದು ಕಂಪನಿಯಿಂದ ಇನ್ನೊಂದು ಟೆಲಿಕಾಂ ಕಂಪನಿಗೆ ಬದಲಿಸುವ ಅವಕಾಶವಿರುತ್ತದೆ.
ಸಿಮ್ ಪೋರ್ಟ್ ಮಾಡುವುದರ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ನಿಮ್ಮ ಮೊಬೈಲ್ ಸಿಮ್ ಅನ್ನು ಒಂದು ಕಂಪನಿಯಿಂದ ಇನ್ನೊಂದು ಟೆಲಿಕಾಂ ಕಂಪನಿಗೆ ಬದಲಿಸುವ ಅವಕಾಶವಿರುತ್ತದೆ. ಅದೇ ರೀತಿ ಒಂದು ಟಿವಿಯ ಸೆಟ್ ಟಾಪ್ ಬಾಕ್ಸ್ ಅನ್ನು ಇನ್ನೊಂದು ಟಿವಿಯ ಸೆಟ್ ಟಾಪ್ ಬಾಕ್ಸ್ ಗೆ ಪೋರ್ಟೆಬಿಲಿಟಿ ಮಾಡಬಹುದಾಗಿದೆ.
ಪೋರ್ಟೆಬಿಲಿಟಿ ಪೂರಕ ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸ ನಡೆಯುವುದರ ಜೊತೆಗೆ, ಡಿಟಿಎಚ್ ಹಾಗೂ ಕೇಬಲ್ ಆಪರೇಟರ್ಗಳೊಂದಿಗೂ ಮಾತುಕತೆ ನಡೆಯುತ್ತಿರುವುದರ ಬಗ್ಗೆ ಟ್ರಾಯ್ ಸುಳಿವು ನಿಡಿದೆ. ಫೆ.1 ರಿಂದ ಹೊಸ ಜಾರಿ: ಕೇಬಲ್ ಟಿವಿ, ಡಿಟಿಹೆಚ್ ಚಾನೆಲ್ ಹೊಸ ದರದ ಮಾಹಿತಿ ಇಲ್ಲಿದೆ..
ಟ್ರಾಯ್ ಮಹತ್ವದ ಹೆಜ್ಜೆ
ಇದರ ಮಧ್ಯೆ ಮತ್ತೊಂದು ಪ್ರಮುಖ ಕಾರ್ಯಕ್ಕೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು, ಸಿಮ್ ಪೋರ್ಟ್ ಸೇವೆಗಳಂತೆ ಡಿಟಿಎಚ್ ಸೇವೆಗಳನ್ನು ತಮಗೆ ಬೇಕಾದ ಸಂಸ್ಥೆಯಿಂದ ಪಡೆಯುವ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ.
ಡಿಟಿಎಚ್ ಪೋರ್ಟೆಬಿಲಿಟಿ ಸೇವೆ
ಗ್ರಾಹಕರಿಗೆ ಡಿಟಿಎಚ್ ಸೇವೆಯನ್ನು ಪೋರ್ಟೆಬಿಲಿಟಿ ಮುಖಾಂತರ ಬದಲಿಸಿಕೊಳ್ಳುವ ಅವಕಾಶ ಕಲ್ಪಿಸಲು ಟ್ರಾಯ್ ಮುಂದಾಗಿದೆ. ಈಗ ಪ್ರತಿ ಆಪರೇಟರ್ ಗಳ ಸೆಟ್ ಟಾಪ್ ಬಾಕ್ಸ್ ತಂತ್ರಜ್ಞಾನ ವಿಭಿನ್ನವಾಗಿದ್ದು, ಒಂದೇ ತೆರನಾಗಿಲ್ಲ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಏಜೆನ್ಸಿಗಳು ಹೊಸ ತಂತ್ರಜ್ಞಾನದ ಸೆಟ್ ಟಾಪ್ ಬಾಕ್ಸ್ ಅಭಿವೃದ್ಧಿಪಡಿಸುತ್ತಿದ್ದಾರೆ.
ಸೆಟ್ಟಾಪ್ ಬಾಕ್ಸ್ ಸಮಸ್ಯೆ ಏನು?
ಪ್ರಸ್ತುತ ಮೊಬೈಲ್ ಸಿಮ್ ರೀತಿಯಲ್ಲಿ ಸೆಟ್ಟಾಪ್ ಬಾಕ್ಸ್ ಪೋರ್ಟೆಬಿಲಿಟಿ ಅಸಾಧ್ಯ. ಏಕೆಂದರೆ ಈಗಿರುವ ಸೆಟ್ ಟಾಪ್ ಬಾಕ್ಸ್ಗಳು ಎಲ್ಲ ಆಪರೇಟರ್ಗಳಿಗೂ ಸಹಕರಿಸುವ ರೀತಿಯ ತಂತ್ರಜ್ಞಾನ ಹೊಂದಿಲ್ಲ. ಹೀಗಾಗಿ ಪೋರ್ಟೆಬಿಲಿಟಿ ಪೂರಕ ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿ ನಡೆಯುತ್ತಿದ್ದು, ಎಲ್ಲ ಆಪರೇಟರ್ಗಳ ಸೇವೆಗೂ ಸಹಕರಿಸುವ ಸೆಟ್ ಟಾಪ್ ಬಾಕ್ಸ್ನ್ನು ನಿರ್ವಿುಸಲಾಗುವುದು.
ಟ್ರಾಯ್ ಹೊಸ ನಿಯಮ
ಕೇಬಲ್ ಟಿವಿ ಹಾಗೂ ಡಿಟಿಎಚ್ ಹೊಸ ನೀತಿ ಫೆಬ್ರವರಿ 1 ರಿಂದ ಜಾರಿಯಾಗಲಿದ್ದು, ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಇದರಿಂದಾಗಿ ಗ್ರಾಹಕರು ತಮಗೆ ಬೇಕಾದ ಚಾನೆಲ್ ಗಳಿಗೆ ಮಾತ್ರ ಹಣ ಪಾವತಿಸಿದರೆ ಸಾಕು. ಈ ಹಿಂದೆ ಚಾನೆಲ್ ಗಳನ್ನು ಬಳಸದಿದ್ದರು ಹಣ ಪಾವತಿಸಬೇಕಾಗುತ್ತಿತ್ತು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications