For Quick Alerts
ALLOW NOTIFICATIONS  
For Daily Alerts

  ಫೆ.1 ರಿಂದ ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಹೆಚ್ ಚಾನೆಲ್ ಹೊಸ ದರದ ಮಾಹಿತಿ ಇಲ್ಲಿದೆ..

  |

  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಡಿಟಿಎಚ್ ಸೇವಾ ಪೂರೈಕೆದಾರರು ಮತ್ತು ಕೇಬಲ್ ಅಪರೇಟರ್ ಗಳಿಗೆ ಹೊಸ ನಿಯಮಾವಳಿ ಅಳವಡಿಸಲು ನೀಡಿದ ಸಮಯ ಕೊನೆ ಹಂತದಲ್ಲಿದೆ.
  ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳು ಜನವರಿ 31, 2019 ರಿಂದ ರದ್ದಾಗಲಿದ್ದು, ಹೊಸ ನಿಯಮಗಳನ್ನು ವೀಕ್ಷಕರು, ಸೇವಾ ಪೂರೈಕೆದಾರರು ಮತ್ತು ಪ್ರಸಾರಕರು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಕಾರ್ಯರೂಪಕ್ಕೆ ತರುವಂತೆ ಟ್ರಾಯ್ ಪ್ರಯತ್ನ ಮಾಡುತ್ತಿದೆ.

  ಹೊಸ ನೀತಿ ಜಾರಿ

  ಹೊಸ ಕೇಬಲ್ ನೀತಿ ಫೆಬ್ರವರಿ 1 ರಿಂದ ಜಾರಿಯಾಗಲಿದ್ದು, ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಟೆಲಿಕಾಂ ಕಂಪನಿಗಳ ಹೊಸ ನಿಯಮ: ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕಿಂಗ್!

  ಚಾನೆಲ್ ಸೆಲೆಕ್ಟರ್ ಆಪ್ (Channel Selector app)

  ಟ್ರಾಯ್ ಚಾನೆಲ್ ಸೆಲೆಕ್ಟರ್ ಆಪ್ ಅನ್ನು ಪರಿಚಯಿಸಿದ್ದು, ಬಳಕೆದಾರರು ತಮ್ಮ ಕೇಬಲ್ ಟಿವಿ ಅಥವಾ ಡಿಟಿಎಚ್ ಅಡಿಯಲ್ಲಿನ 100 ಅಥವಾ ಅದಕ್ಕಿಂತ ಹೆಚ್ಚು ಚಾನೆಲ್ ಗಳ ಲೆಕ್ಕಾಚಾರ ಮಾಡಲು ಸಹಾಯವಾಗುವಂತೆ 'ಚಾನೆಲ್ ಸೆಲೆಕ್ಟರ್ ಅಪ್ಲಿಕೇಶನ್' ಅನ್ನು ಟ್ರಾಯ್ ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಕೇಬಲ್ ಟಿವಿ ಬಿಲ್ ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ. https://channel.trai.gov.in/paychannels.php

  ಬೇಸಿಕ್ ಪ್ಯಾಕೇಜ್

  ಟ್ರಾಯ್ ನಿಯಮದ ಪ್ರಕಾರ ಜನವರಿ 31 ರೊಳಗೆ ಗ್ರಾಹಕರು ತಮಗೆ ಇಷ್ಟವಾದ ಪೇ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬೇಸಿಕ್ ಪ್ಯಾಕೇಜ್ (Base pack) ನಲ್ಲಿ ರೂ. 130 ಕ್ಕೆ 100 ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು. ಇದಕ್ಕೆ ಶೇ. ೧೮ರಷ್ಟು ಜಿಎಸ್ಟಿ ಸೇರಿ ರೂ. 153 ಪಾವತಿಸಬೇಕಿದೆ. ಎಲ್ಲಾ 25 ದೂರದರ್ಶನ ಚಾನೆಲ್ ಗಳು ಬೇಸ್ ಪ್ಯಾಕ್ ನಲ್ಲಿ ಲಭ್ಯವಿರುತ್ತವೆ.

  ಕನ್ನಡದ ಚಾನೆಲ್ ದರ

  ಹೊಸ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳ ಪ್ರಕಾರ, ಕನ್ನಡದ ಪೇಯ್ಡ್ ಚಾನೆಲ್ ಗಳ ದರ ಇಂತಿದೆ.
  ಉದಯ ಕಾಮಿಡಿ ರೂ. 6
  ಉದಯ ಮೂವೀಸ್ ರೂ. 16
  ಉದಯ ಮ್ಯೂಸಿಕ್ ರೂ. 6
  ಉದಯ ಟಿವಿ ರೂ. 17
  ಕಲರ್ಸ್ ಕನ್ನಡ ರೂ. 19
  ಸ್ಟಾರ್ ಸುವರ್ಣ ರೂ. 19
  ನ್ಯೂಸ್ 18 ಕನ್ನಡ 25 ಪೈಸೆ
  ಚಿಂಟು ಟಿವಿ ಕನ್ನಡ ರೂ. 6
  ಜೀ ಕನ್ನಡ ರೂ. 19
  ಸುವರ್ಣ ಪ್ಲಸ್ ಚಾನಲ್ ರೂ. 5

  ಡಿಸ್ಕವರಿ ಚಾನೆಲ್

  ಡಿಸ್ಕವರಿ ಚಾನೆಲ್ ಗೆ ರೂ. 4
  ಡಿಸ್ಕವರಿ ಕಿಡ್ಸ್ ಚಾನೆಲ್ 3 ರೂ.
  ಅನಿಮಲ್ ಪ್ಲಾನೆಟ್ ರೂ. 24

  ಸ್ಪೋರ್ಟ್ಸ್ ಚಾನೆಲ್

  ಸ್ಟಾರ್ ಸ್ಪೋರ್ಟ್ಸ್ ಕನ್ನಡ ರೂ. 19
  ಸೋನಿ ಇ.ಎಸ್.ಪಿ.ಎನ್. ಹೆಚ್ಡಿ ರೂ. 7
  ಸೋನಿ ಇ.ಎಸ್.ಪಿ.ಎನ್ ರೂ. 5
  ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ರೂ. 4

  100 ಉಚಿತ ಚಾನೆಲ್

  100ಉಚಿತ ಚಾನೆಲ್ಗಳೊಂದಿಗೆ, ಪಾವತಿಸಲ್ಪಡುವ ಚಾನೆಲ್ ಗಳನ್ನು ಬೇಕಿದ್ದರೆ ಸೇರಿಸಿಕೊಳ್ಳಬಹುದು. 100 ಕ್ಕಿಂತ ಹೆಚ್ಚು ಚಾನೆಲ್ ವೀಕ್ಷಿಸಲು ರೂ. 20ಕ್ಕೆ 25 ಚಾನೆಲ್ ಗಳ ಸ್ಲ್ಯಾಬ್ ಪಡೆಯಬಹುದು. ಪೇಡ್ ಚಾನೆಲ್ ಗಳ ಆಯ್ಕೆಯೊಂದಿಗೆ ಪಾವತಿಸಬೆಕಾಗುವ ಬಿಲ್ ಕೂಡ ಏರಿಕೆಯಾಗುತ್ತದೆ. ಉಚಿತ ಚಾನೆಲ್ ಗಳ ಸೇವೆ ಹಿಂದಿನಂತೆಯೇ ಮುಂದುವರೆಯಲಿದ್ದು, ಪೇಯ್ಡ್ ಚಾನೆಲ್ ಗಳ ಸೇವೆಯಲ್ಲಿ ಬದಲಾವನೆಯಾಗಲಿದೆ.

  Read more about: trai money telecom business savings
  English summary

  TRAI New Rule Enforcement from Feb 1: Cable TV, DTH's New Prices list

  the existing regulations is till January 31, 2019, TRAI has been trying its best to make sure the new regulations are understood.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more