ಜನೆವರಿ 31 ರಿಂದ ಫೆಬ್ರವರಿ 13ರ ವರೆಗೆ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದ್ದು, ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಮಧ್ಯಂತರ ಬಜೆಟ್ ಎನ್ನುವುದು ಸಾಮಾನ್ಯ ಕೇಂದ್ರ ಬಜೆಟ್ ನಂತೆ ಇರುವುದಿಲ್ಲ.
ಜನೆವರಿ 31 ರಿಂದ ಫೆಬ್ರವರಿ 13ರ ವರೆಗೆ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದ್ದು, ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಮಧ್ಯಂತರ ಬಜೆಟ್ ಎನ್ನುವುದು ಸಾಮಾನ್ಯ ಕೇಂದ್ರ ಬಜೆಟ್ ನಂತೆ ಇರುವುದಿಲ್ಲ.

ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಫೆ. 1ಕ್ಕೆ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಚುನಾವಣೆಯ ನಂತರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ.
ಕೇಂದ್ರದಲ್ಲಿರುವ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಕಾಲಾವಕಾಶದ ಕೊರತೆ ಇದ್ದರೆ ಅಥವಾ ಸಾರ್ವತ್ರಿಕ ಚುನಾವಣೆ ಹತ್ತಿರ ಇದ್ದರೆ ಮಧ್ಯಂತರ ಬಜೆಟ್ ಮಂಡನೆ ಮಾಡಲಾಗುತ್ತದೆ. ಚುನಾವಣೆಯ ನಂತರದಲ್ಲಿ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತದೆ.
ಆಡಳಿತದಲ್ಲಿರುವ ಸರ್ಕಾರ ಮಧ್ಯಂತರ ಬಜೆಟ್ ಮೂಲಕ ತನ್ನ ಸಾಧನೆಗಳನ್ನು ಎತ್ತಿ ಹಿಡಿದು ಮತದಾರರನ್ನು ಸೆಳೆಯಲು ಕೊನೆಯ ಅವಕಾಶವಾಗಿದೆ ಎಂದು ನಂಬಲಾಗಿದೆ. ಆದಾಗ್ಯೂ, ಚುನಾವಣಾ ಆಯೋಗದ ನೀತಿ ಸಂಹಿತೆಯ ಪ್ರಕಾರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಯಾವುದೇ ಪ್ರಮುಖ ಕಲ್ಯಾಣ ಯೋಜನೆಗಳನ್ನು ಘೋಷಿಸಲು ಮಾಡುವಂತಿಲ್ಲ. ಸ್ವಾತಂತ್ರ್ಯಾನಂತರದ 12 ಮಧ್ಯಂತರ ಬಜೆಟ್ ಗಳಲ್ಲಿ ಸರ್ಕಾರಗಳು ದೊಡ್ಡ ಮಟ್ಟದ ಬದಲಾವಣೆ, ಹೊಸ ಯೋಜನೆಗಳನ್ನಾಗಲಿ ಘೋಷಣೆ ಮಾಡಿಲ್ಲ.
ಮಧ್ಯಂತರ ಬಜೆಟ್ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಅರುಣ್ ಜೇಟ್ಲಿಯವರು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ಮಧ್ಯಂತರ ಬಜೆಟ್ ಮಂಡನೆಯ ಹಣಕಾಸು ಸಚಿವರಾಗಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ ಬಜೆಟ್ 2019: ಮೋದಿ ಸರ್ಕಾರ ಬಜೆಟ್‌ನಲ್ಲಿ ಏನೇನೆಲ್ಲ ಘೋಷಿಸಬಹುದು?


Click it and Unblock the Notifications