ಹೌಸಿಂಗ್ ಫೈನಾನ್ಸ್ ಕಂಪನಿ ಎಚ್ ಡಿ ಎಫ್ ಸಿ ಲಿಮಿಟೆಡ್ ಮಂಗಳವಾರ (ಜನವರಿ 29)ದಂದು ತನ್ನ ಮೂರನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಡಿಸೆಂಬರ್ 31, 2018ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ 2,113.80 ಕೋಟಿ ರು ಲಾಭ ಗಳಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ ಅಕ್ಟೋಬರ್ -ಡಿಸೆಂಬರ್ 2018ರ ತ್ರೈಮಾಸಿಕದಂತೆ 5,300 ಕೋಟಿ ರು ನಿವ್ವಳ ಲಾಭ ಗಳಿಸಿತ್ತು.
ಈ ತ್ರೈಮಾಸಿಕದಲ್ಲಿ ಸರಿ ಸುಮಾರು 5,250 ಕೋಟಿ ರು ಗಳಿಗೆ ಎಚ್ ಡಿ ಎಫ್ ಸಿ ಲೈಫ್ ಇನ್ಸುರೇನ್ಸ್ ಕಂಪನಿ ಲಿಮೆಟೆಡ್ ನ ಷೇರುಗಳನ್ನು ಐಪಿಒ ಆಗಿ ಮಾರಾಟ ಮಾಡಿತ್ತು.

ಡಿಸೆಂಬರ್ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ಆದಾಯ 10,569 ಕೋಟಿ ರು ಗಳಿಕೆಯಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 8,824 ಕೋಟಿ ರು ಗಳಿಕೆಯಾಗಿತ್ತು.
ಸಂಸ್ಥೆಯ non-performing assets ಶೇ 1.22ರಷ್ಟು ಏರಿಕೆ ಕಂಡು 4,731 ಕೋಟಿ ರು ಗೇರಿದೆ. ತೆರಿಗೆ ಕಳೆದುಕೊಂಡು ಸಂಸ್ಥೆಯ ನಿವ್ವಳ ಲಾಭ 6,771 ಕೋಟಿ ರು ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 8,703 ಕೋಟಿ ರು ದಾಖಲಾಗಿತ್ತು.
ಈ ತ್ರೈಮಾಸಿಕ ಅವಧಿಯಲ್ಲಿ ಇರೀನಾ ವಿಠಲ್ ಅವರನ್ನು ಸಂಸ್ಥೆಯ ಸ್ವತಂತ್ರ ನಿರ್ದೇಶಕಿಯಾಗಿ 5 ವರ್ಷಗಳ ಅವಧಿಗೆ ನೇಮಿಸಲಾಗಿದೆ. ಜನವರಿ 30, 2019ರಿಂದ ಅಧಿಕಾರ ಅವಧಿ ಆರಂಭವಾಗಲಿದೆ.


Click it and Unblock the Notifications