2019ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಘೋಷಿಸಬಹುದಾದ ವೈಯಕ್ತಿಕ ತೆರಿಗೆ ವಿನಾಯಿತಿ ನಿರೀಕ್ಷೆಗಳ ಪಟ್ಟಿ ಮಾಡಲಾಗಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರ ತನ್ನ ಕೊನೆಯ ಬಜೆಟ್ ಮಂಡನೆ ಮಾಡಲಿದೆ. ವಿಭಿನ್ನ ವಲಯಗಳು ಹೊಂದಿರುವ ನಿರೀಕ್ಷೆಯಂತೆಯೇ ಮಧ್ಯಮ ಮತ್ತು ಕಡಿಮೆ ಆದಾಯದ ಗುಂಪುಗಳು ಸಹ ಸರ್ಕಾರ ಬಜೆಟ್ ನಲ್ಲಿ ಘೋಷಿಸಬಹುದಾದ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದಾರೆ.
ಆದರೆ ತೆರಿಗೆ ವಿಶ್ಲೇಶಕರ ಪ್ರಕಾರ, ನೇರ ತೆರಿಗೆ ಕೋಡ್ ವರದಿ ಬಿಡುಗಡೆಯಾಗುವ ಮುನ್ನ ಆದಾಯ ತೆರಿಗೆಯಲ್ಲಿ ಹೆಚ್ಚು ವಿನಾಯಿತಿ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ. ಅದೇನೆ ಇರಲಿ 2019ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಘೋಷಿಸಬಹುದಾದ ವೈಯಕ್ತಿಕ ತೆರಿಗೆ ವಿನಾಯಿತಿ ನಿರೀಕ್ಷೆಗಳ ಪಟ್ಟಿ ಮಾಡಲಾಗಿದೆ. ಉನ್ನತ ಶಿಕ್ಷಣದ ಬಲವರ್ಧನೆಗೆ 2019ರ ಬಜೆಟ್ ನಲ್ಲಿ ಸರ್ಕಾರ ನೀಡಬೇಕಾದ ಆದ್ಯತೆಗಳೇನು?
ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿ
ಬಜೆಟ್ ನಲ್ಲಿ ಸರ್ಕಾರವು ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ. 60ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ರೂ. 2.5 ಲಕ್ಷದಿಂದ ರೂ. 3 ಲಕ್ಷ ರವರೆಗೆ ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಬಹುದು ಎಂದು ಪಿಡಬ್ಲೂಸಿ ಇಂಡಿಯಾದ ಕುಲದೀಪ್ ಕುಮಾರ್ ಅಭಿಪ್ರಾಯಿಸಿದ್ದಾರೆ.
60 ರಿಂದ 80ರ ವಯಸ್ಸಿನ ವ್ಯಕ್ತಿಗಳ ತೆರಿಗೆ ವಿನಾಯಿತಿ ಮಿತಿ ರೂ. 3 ಲಕ್ಷದಿಂದ ರೂ. 3.5 ಲಕ್ಷಕ್ಕೆ ಏರಬಹುದು. ಮಹಿಳಾ ತೆರಿಗೆದಾರರು ಮತ್ತು ಹಿರಿಯ ನಾಗರಿಕರು ಕೂಡ ಮೂಲ ತೆರಿಗೆ ವಿನಾಯಿತಿ ಪಡೆಯಬಹುದು ಎಂದಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ 2014 ರ ಮೊದಲ ಬಜೆಟ್ ನಲ್ಲಿ ತೆರಿಗೆ ವಿನಾಯತಿ ಮಿತಿಯನ್ನು ರೂ. 2 ಲಕ್ಷದಿಂದ ರೂ. 2.5 ಲಕ್ಷಕ್ಕೆ ಏರಿಸಿದ್ದರು. ಮಧ್ಯಂತರ ಬಜೆಟ್ 2019: ಮಧ್ಯಮ ವರ್ಗ, ರೈತರು, ಸ್ಟಾರ್ಟಅಪ್ ವಲಯಕ್ಕೆ ಬಂಪರ್ ಕೊಡುಗೆ!
80C ಕಡಿತ ಮಿತಿ ಏರಿಕೆ
ಜನರ ಉಳಿತಾಯ ಪ್ರವೃತ್ತಿ ಉತ್ತೇಜಿಸಲು, ಸರ್ಕಾರವು ಸೆಕ್ಷನ್ 80C ಕಡಿತ ಮಿತಿಯನ್ನು ಹೆಚ್ಚಿಸಬಹುದು. 2014-15ರ ಬಜೆಟ್ ನಲ್ಲಿ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷದ ಮಿತಿಯನ್ನು ಕೊನೆಯದಾಗಿ ಪರಿಷ್ಕರಿಸಲಾಗಿದೆ. ಸೆಕ್ಷನ್ 80 ಸಿ ಅಡಿಯ ಮಿತಿಯನ್ನು ಸರ್ಕಾರ ಪರಿಷ್ಕರಿಸಬಹುದೆಂದು ನಿರೀಕ್ಷಿಸಬಹುದು. ಸೆಕ್ಷನ್ 80 ಸಿ ಮಿತಿ ಹೆಚ್ಚಳವು ತೆರಿಗೆ ಉಳಿತಾಯಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಖೈತಾನ್ & ಕಂಪನಿಯ ಪಾಲುದಾರರಾದ ಅಭಿಷೇಕ್ ರಸ್ತೋಗಿ ಹೇಳಿದ್ದಾರೆ. PwC ಯ ಕುಲದೀಪ್ ಕುಮಾರ್ ಸೆಕ್ಷನ್ 80C ಮಿತಿ ರೂ. 2 ಲಕ್ಷಕ್ಕೆ ಏರಿಸಬೇಕೆಂದು ನಿರೀಕ್ಷಿಸಿದ್ದಾರೆ.
ಸಾಧ್ಯವಾಗದ ಆದಾಯ ತೆರಿಗೆ ನಿರೀಕ್ಷೆ!
ಸಾಧ್ಯವಾಗದಿರುವ ಅಥವಾ ಸಾಧ್ಯವಾಗಬಹುದಾದ ತರ್ಕಬದ್ದ ನಿರೀಕ್ಷೆ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಪ್ರಸ್ತುತ ಇರುವ ಶೇ. 30 ರಿಂದ ಶೇ. 25 ರವರೆಗಿನ ಅತಿ ಹೆಚ್ಚಿನ ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿಮೆಗೊಳಿಸುವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ರಸ್ತೋಗಿ ಹೇಳುತ್ತಾರೆ.
ಪ್ರಸ್ತುತ, ರೂ. 2.5 ಲಕ್ಷದವರೆಗಿನ ಆದಾಯವು ವೈಯಕ್ತಿಕ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ.
ರೂ. 2.5 ರಿಂದ ರೂ. 5 ಲಕ್ಷದ ನಡುವಿನ ಆದಾಯಕ್ಕೆ ಶೇ. 5 ರಷ್ಟು ತೆರಿಗೆ ಇದೆ. ರೂ. 5-10 ಲಕ್ಷದ ನಡುವಿನ ಅದಾಯಕ್ಕೆ ಶೇ. 20 ಹಾಗು ರೂ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತದೆ.
ರೂ. 5 ರಿಂದ 10 ಲಕ್ಷದ ನಡುವಿನ ಅದಾಯಕ್ಕೆ ಶೇ. 20ರ ಬದಲು ಶೇ. 10 ರಷ್ಟು ತೆರಿಗೆ ವಿಧಿಸಬೇಕೆಂದು ಕೈಗಾರಿಕ ವಲಯ ಶಿಫಾರಸ್ಸು ಮಾಡಿದೆ.
ರೂ. 10 ಲಕ್ಷದಿಂದ 20 ಲಕ್ಷದ ನಡುವೆ ಆದಾಯ ಹೊಂದಿರುವವರಿಗೆ ಶೇ. 20 ರಷ್ಟು ಹಾಗು ರೂ. 20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಶೇ. 25 ತೆರಿಗೆ ವಿಧಿಸಬೇಕು ಎಂದು ಹೇಳಿದೆ.
ಗೃಹ ಸಾಲ ಪ್ರಯೋಜನ
ಗೃಹ ಸಾಲಗಳ ಮೇಲೆ ಸರ್ಕಾರ ಹೆಚ್ಚಿನ ತೆರಿಗೆ ಪ್ರಯೋಜನಗಳನ್ನು ನೀಡಬಹುದೆಂದು ನಿರೀಕ್ಷಿಸಲಾಗಿದೆ. ಸ್ವ-ಆಕ್ರಮಿತ ಮನೆ ಆಸ್ತಿಗಾಗಿ ವಸತಿ ಸಾಲದ ಮೇಲಿನ ಬಡ್ಡಿದರ ರೂ. 2 ಲಕ್ಷಕ್ಕೆ ಸೀಮಿತವಾಗಿದ್ದು, ಬಹುಶಹ ರೂ. 2.5 ಲಕ್ಷಕ್ಕೆ ಹೆಚ್ಚಾಗಬಹುದು. ಮನೆ ಆಸ್ತಿಯಿಂದ ಉಂಟಾಗಬಹುದಾದ ನಷ್ಟವನ್ನು ಸರಿಹೊಂದಿಸುವ ಸಲುವಾಗಿ ಆದಾಯವನ್ನು ರೂ. 2 ಲಕ್ಷದಿಂದ ರೂ. 2.5 ಲಕ್ಷಕ್ಕೆ ಏರಿಸಬಹುದು ಎಂದು PwC ಯ ಕುಮಾರ್ ಹೇಳುತ್ತಾರೆ
ಎನ್ ಪಿಎಸ್ ವಿನಾಯಿತಿ
ಸರ್ಕಾರ 2019 ರ ಬಜೆಟ್ ನಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ (NPS) ಘೋಷಿಸಲಾದ ಇತ್ತೀಚಿನ ಬದಲಾವಣೆಗಳನ್ನು ಅಳವಡಿಸಬಹುದು ಎಂದು ಡಿಲೊಯಿಟ್ಟೆ ಇಂಡಿಯಾದ ( Deloitte India) ದಿವ್ಯ ಬವೆಜಾ ಹೇಳುತ್ತಾರೆ.
ಈ ಬದಲಾವಣೆಗಳು ಏಪ್ರಿಲ್ ನಿಂದ ಜಾರಿ ಬರಬಹುದೆಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ. ಕೇಂದ್ರೀಯ ಕ್ಯಾಬಿನೆಟ್ ಡಿಸೆಂಬರ್ 6 ರಂದು ನಡೆದ ಸಭೆಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications