ಗ್ರಾಹಕರಿಗೆ ಸಿಹಿಸುದ್ದಿ! ಎಲ್ಪಿಜಿ ಸಿಲಿಂಡರ್ ದರ ಇಳಿಕೆ

ಅಡುಗೆ ಅನಿಲ (ಎಲ್ಪಿಜಿ) ಗ್ರಾಹಕರಿಗೆ ಕೇಂದರ ಸರ್ಕಾರ ಬಜೆಟ್ ಮಂಡನೆ ದಿನವೇ ಸಿಹಿಸುದ್ದಿ ನೀಡಿದೆ. ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರವನ್ನು ಕಡಿತಗೊಳಿಸಲಾಗಿದೆ.

ಅಡುಗೆ ಅನಿಲ (ಎಲ್ಪಿಜಿ) ಗ್ರಾಹಕರಿಗೆ ಕೇಂದರ ಸರ್ಕಾರ ಬಜೆಟ್ ಮಂಡನೆ ದಿನವೇ ಸಿಹಿಸುದ್ದಿ ನೀಡಿದೆ. ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರವನ್ನು ಕಡಿತಗೊಳಿಸಲಾಗಿದೆ. ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಹೊಸ ದರಗಳು ಫೆಬ್ರವರಿ 1ರಿಂದ ಜಾರಿಗೆ ಬಂದಿವೆ. ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ?

ಸಬ್ಸಿಡಿ ಸಹಿತ ಎಲ್ಪಿಜಿ

ಸಬ್ಸಿಡಿ ಸಹಿತ ಎಲ್ಪಿಜಿ

14.2 ಕೆ.ಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ 1.46 ರೂಪಾಯಿ ಇಳಿಕೆಯಾಗಿದ್ದು, ಫೆಬ್ರವರಿ ಒಂದರಿಂದ ಜಾರಿ ಬಂದಿದೆ. ಕಳೆದ ಜನೆವರಿ ತಿಂಗಳಲ್ಲಿ ಎಲ್‌ಪಿಜಿ ಬೆಲೆ ರೂ. 5.91 ಇಳಿಕೆಯಾಗಿತ್ತು. ದೆಹಲಿಯಲ್ಲಿ ಪ್ರತಿ ಸಿಲಿಂಡರ್ ದರ ರೂ. 494.99 ರಿಂದ ರೂ. 493.53ಕ್ಕೆ ಇಳಿಕೆಯಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಸಬ್ಸಿಡಿ ರಹಿತ

ಸಬ್ಸಿಡಿ ರಹಿತ

ಸಬ್ಸಿಡಿ ರಹಿತ 14.2 ಕೆಜಿ ತೂಕದ ಸಿಲಿಂಡರ್ ದರ ರೂ. 30 ಇಳಿಕೆಯಾಗಿದ್ದು, ದೆಹಲಿಯಲ್ಲಿ ರೂ. 689 ಸಿಗುತ್ತಿದ್ದ ಸಿಲಿಂಡರ್ ಈಗ ರೂ. 659ಕ್ಕೆ ಸಿಗಲಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ದರವನ್ನು ಕಳೆದ ತಿಂಗಳು ರೂ. 120.50 ರಂತೆ ಕಡಿಮೆ ಮಾಡಲಾಗಿತ್ತು.

ಪ್ರತಿವರ್ಷ 12 ಸಿಲಿಂಡರ್

ಪ್ರತಿವರ್ಷ 12 ಸಿಲಿಂಡರ್

ದೇಶದ ಕುಟುಂಬಗಳು ಪ್ರತಿವರ್ಷ 12 ಸಬ್ಸಿಡಿ ಸಹಿತ ಸಿಲಿಂಡರ್ ಗಳನ್ನು ವಿಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತ ಖರೀದಿಸಬೇಕಾಗುತ್ತದೆ. ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಎಲ್ಪಿಜಿ ದರ ಕುಸಿತಕ್ಕೆ ಕಾರಣ

ಎಲ್ಪಿಜಿ ದರ ಕುಸಿತಕ್ಕೆ ಕಾರಣ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ದರ ಇಳಿಕೆ ಕಮಡಿರುವುದು ಹಾಗು ಅಮೆರಿಕನ್ ಡಾಲರ್ ಎದುರು ರೂಪಾಯಿ ವಿನಿಮಯ ದರ ಬಲಗೊಂಡ ಕಾರಣ ಎಲ್ಪಿಜಿ ದರ ಇಳಿಕೆಯಾಗಿದೆ ಎಂದು ಐಓಸಿ ತಿಳಿಸಿದೆ.

ಸತತ 6 ಬಾರಿ ಏರಿಕೆ

ಸತತ 6 ಬಾರಿ ಏರಿಕೆ

2018ರ ಜುನ್ ತಿಂಗಳಿನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಸತತ 6 ಬಾರಿ ಸಬ್ಸಿಡಿ ಸಿಲಿಂಡರ್ ಬೆಲೆ ರೂ. 14.13 ಏರಿಕೆಯಾಗಿತ್ತು. 2018ರ ಡಿಸೆಂಬರ್ ತಿಂಗಳಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ ದರವನ್ನು 2 ಬಾರಿ ಇಳಿಕೆ ಮಾಡಲಾಗಿತ್ತು. ಆದರೆ ಕಳೆದ ಎರಡು ತಿಂಗಳಲ್ಲಿ ಎಲ್ಪಿಜಿ ಬೆಲೆ ಇಳಿಕೆ ಕಂಡಿರುವುದು ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.

ಉಜ್ವಲ ಯೋಜನೆ

ಉಜ್ವಲ ಯೋಜನೆ

ಕೇಂದ್ರದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ 10 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸಿದೆ. ಈ ಯೋಜನೆ ಸಾಕಾರಕ್ಕಾಗಿ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೈಜೋಡಿಸಿವೆ. ಕೇಂದ್ರದ ಉಜ್ವಯ ಯೋಜನೆಯಂತೆ ರಾಜ್ಯದಲ್ಲಿ ಅನಿಲಭಾಗ್ಯ ಯೋಜನೆ ಅನುಷ್ಠಾನವಾಗಿದೆ. ಕೇಂದ್ರ ಸರ್ಕಾರ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ರಾಜ್ಯದ ಶೇ. 60ರಷ್ಟು ಕುಟುಂಬಗಳು ಬರುತ್ತಿರಲಿಲ್ಲ. ಹೀಗಾಗಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಅವರೆಲ್ಲರಿಗೂ ಅಡುಗೆ ಅನಿಲ (ಗ್ಯಾಸ್) ನೀಡುವ ಉದ್ದೇಶ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+