ಎಸಿಟಚ್ ಟೆಕ್ನಾಲಜೀಸ್ ಪರಿಚಯಿಸುತ್ತಿದೆ ಧಂಧ ಮೊಬೈಲ್ ಆ್ಯಪ್

ಬೆಂಗಳೂರು, ಫೆಬ್ರವರಿ 04: ಭಾರತದ ಪ್ರಮುಖ ಕ್ಲೌಡ್ ಇಆರ್ ಪಿ (ಎಂಟಪ್ರ್ರೈಸ್ ರಿಸೋರ್ಸ್ ಪ್ಲಾನಿಂಗ್) ಕಂಪನಿಗಳಲ್ಲಿ ಒಂದಾಗಿರುವ ಎಸಿಟಚ್ ಟೆಕ್ನಾಲಜಿಸ್ ಧಂಧ ಮೊಬೈಲ್ ಆ್ಯಪ್ ಪರಿಚಯಿಸುತ್ತಿದೆ. ಇದು ಭಾರತದ ಮೊದಲ ಬಹುಭಾಷೆಯ ಫ್ರೀ ಜಿಎಸ್‍ಟಿ ಮೊಬೈಲ್ ಆ್ಯಪ್ ಆಗಿದೆ.

ಬಹು ಭಾಷೆಯಲ್ಲಿ-ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ಗುಜರಾತಿ, ಪಂಜಾಬಿ ಹಾಗು ಮರಾಠಿ-ಲಭ್ಯವಿದೆ. ಬಹು ಭಾಷೆಯ ಸೌಲಭ್ಯ ಬಳಕೆದಾರರು ತಮ್ಮ ಆಯ್ಕೆಯ ಭಾಷೆ ಬಳಸಿಕೊಂಡು ಇನ್ವಾಯ್ಸ್ ಸಿದ್ಧಪಡಿಸಬಹುದಾಗಿದೆ.

ಪ್ಲೇ ಸ್ಟೋರಿನಲ್ಲಿ ಧಂಧ ಆ್ಯಪ್‍ನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅದು ಸರಳ ಹಾಗು ಬಳಕೆದಾರರ ಸ್ನೇಹಿ. ವ್ಯಾಪಾರದ ಮಾಲೀಕರು ಮುಂದನೆ ಕೆಲಸದ ಬಗ್ಗೆ ಚಿಂತಿಸದೆ ಮಾರಾಟ ಹಾಗು ಸಂಪಾದನೆಯತ್ತ ಗಮನ ಹರಿಸಬಹುದಾಗಿದೆ. ಹರಿದು ಬರುವ ನಗದಿನ ಬಗ್ಗೆ, ವೆಚ್ಚಗಳ ಬಗ್ಗೆ ಹಾಗೂ ಆದಾಯ ವರದಿ ಬಗ್ಗೆ ಗಮನ ಹರಿಸಬಹುದು. ಅಲ್ಲದೆ ಆ್ಯಪ್ ಸಮಾಲೋಚನೆ, ಸಣ್ಣ ಪ್ರಮಾಣದಲ್ಲಿ ವ್ಯವಹರಿಸುವ ಅಂಗಡಿ ಮಾಲೀಕರು, ಉದ್ಯೋಗ ಮತ್ತು ಸಣ್ಣ ತಯಾರಿಕಾ ಕಂಪನಿ, ಹವ್ಯಾಸಿ ವೃತ್ತಿಪರರಿಗೆ ಪ್ರಾಮುಖ್ಯತೆಯನ್ನು ಆ್ಯಪ್ ನೀಡುತ್ತದೆ.

ಹತ್ತು ಹಲವು ಕೆಲಸಗಳು ಸುಲಭವಾಗಲಿದೆ

ಹತ್ತು ಹಲವು ಕೆಲಸಗಳು ಸುಲಭವಾಗಲಿದೆ

ಆ್ಯಪ್ ಜಿಎಸ್ ಟಿ ಇನ್ವಾಯ್ಸಿಂಗ್ ಮತ್ತು ಬಿಲ್ಲಿಂಗ್, ಜಿಎಸ್‍ಟಿ ವಿವರ, ಬಿಲ್ಲುಗಳ ನಿರ್ವಹಣೆ ಹಾಗು ಟ್ರಾಕಿಂಗ್, ಪಾವತಿ, ರಸೀತಿ ಹಾಗು ವರದಿಯನ್ನು ಒದಗಿಸುತ್ತಿದೆ. ಅಕೌಂಟಿಂಗ್ ಗೆ ಇಂಟರ್ಫೇಸ್ ಟು ಟ್ಯಾಲಿ ಸಾಫ್ಟ್ ವೇರ್ ಹೊಂದಿರುವುದು ಆ್ಯಪ್‍ನ ಅತ್ಯುತ್ತಮ ಅಂಶ. ಇದು ಎಕ್ಸೆಲ್‍ನಲ್ಲಿ ಬಿಲ್ ಹಾಗೂ ಇನ್ವಾಯ್ಸ್ ಪಡೆಯಲು ಹಾಗು ತೆರಿಗೆ ಪಾವತಿಗೆ ಅದನ್ನು ಸಿಎ ಜತೆ ಹಂಚಿಕೊಳ್ಳಲು ನೆರವಾಗುತ್ತದೆ.

ಬ್ಯಾಂಕ್ ಲೆವೆಲ್ ಡಾಟಾ ಭದ್ರತೆಯನ್ನೂ ಆಪ್ ನೀಡುತ್ತದೆ

ಬ್ಯಾಂಕ್ ಲೆವೆಲ್ ಡಾಟಾ ಭದ್ರತೆಯನ್ನೂ ಆಪ್ ನೀಡುತ್ತದೆ

ಬ್ಯಾಂಕ್ ಲೆವೆಲ್ ಡಾಟಾ ಭದ್ರತೆಯನ್ನೂ ಆಪ್ ನೀಡುತ್ತದೆ. ಅದರಿಂದಾಗಿ ಮೊಬೈಲಿನಲ್ಲಿರುವ ಡಾಟಾ ಕಳೆದು ಹೋಗುವುದಿಲ್ಲ. ಎಸಿಟಚ್ ಸಿಇಒ ನಿತ್ಯಾನಂದ ರಾವ್ ಹೇಳುತ್ತಾರೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟಿನ ಕಾರ್ಯಾಚರಣೆ ಸರಳ ಪಡಿಸುವುದು ನಮ್ಮ ಗುರಿ. 50 ಮಿಲಿಯನ್ ಗಿಂತ ಹೆಚ್ಚಿನ ವ್ಯಾಪಾರಸ್ಥರ ಬಳಿ ಕಂಪ್ಯೂಟರ್ ಇಲ್ಲ ಎಂಬುದನ್ನು ತಿಳಿದೆವು. ವ್ಯವಹಾರದ ಅವಕಾಶ ಗುರುತಿಸಿದೆವು ಅದರಿಂದ ಧಂಧ ರಿಯಾಲಿಟಿಯಾಗಿ ಹೊಮ್ಮಿತು. ಅದೇ ರೀತಿ ಬಹುಭಾಷೆಯನ್ನು ಅಳವಡಿಸಲಾಯಿತು. ಬೇಡಿಕೆ ಹಾಗೂ ಪ್ರತಿಕ್ರಿಯೆ ನೋಡಿಕೊಂಡು ಶೀಘ್ರವೆ ಮತ್ತಷ್ಟು ಭಾಷೆ ಸೇರಿಸುತ್ತೇವೆ ಎಂದು ಹೇಳಿದರು.

ಎಸಿ ಟಚ್ ಕುರಿತು:

ಎಸಿ ಟಚ್ ಕುರಿತು:

ಎಸಿ ಟಚ್ ಟೆಕ್ನಾಲಜೀಸ್ ಭಾರತದ ಪ್ರಮುಖ ಸಂಪೂರ್ಣ ಕ್ಲೌಡ್ ಇಆರ್ ಪಿ(ಎಂಟರ್ ಪ್ರೈಸರ್ ರಿಸೋರ್ಸ್ ಪ್ಲಾನಿಂಗ್) ವೇದಿಕೆ. ಬೆಂಗಳೂರಿನಲ್ಲಿ ನೆಲೆಯೂರಿರುವ ಎಸಿಟಚ್ ಸಂಸ್ಥೆಯನ್ನು ನಿತ್ಯಾನಂದ ರಾವ್‍ರವರ ಎರಡು ದಶಕದ ಅನುಭವ ಹಾಗೂ ಸುನಿಶ್ ಅಂಕೋಲೆಕರ್ ಅವರ ವ್ಯಾಪಾರ ತಂತ್ರಗಾರಿಯೊಂದಿಗೆ ಜತೆಗೂಡಿ ಸ್ಥಾಪಿಸಿದ್ದಾರೆ.

ಇಆರ್‍ಪಿ ಮಾರುಕಟ್ಟೆಯಲ್ಲಿ ಕೇವಲ ಅಕೌಂಟಿಂಗ್ ಸಲ್ಯೂಷನ್ಸ್ ಸೇವಗಳಿದ್ದು, ಮಾಲಿಕರ ಅವಶ್ಯಕತೆಗಳಿಗೆ ಸ್ವಂದಿಸುವ ಯಾವುದೇ ಸೇವೆಗಳು ಇರಲಿಲ್ಲ. ಮಾರುಕಟ್ಟೆಯ ಈ ಅಂತರವನ್ನು ಕಡಿತಗೊಳಿಸಲು ಎಸಿ ಟಚ್ 2014ರಲ್ಲಿ ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ನೈಜ ಮೌಲ್ಯ ನೀಡಲು ತನ್ನ ಇಆರ್‍ಪಿ ಸಾಫ್ಟ್‍ವೇರ್ ಬಿಡುಗಡೆ ಮಾಡಿತು.

 

200ಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ.

200ಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ.

ಎಸಿ ಟಚ್ ಸಂಸ್ಥೆ ಉತ್ಪನ್ನ ಹಾಗೂ ಸೇವೆಯ ಪಟ್ಟಿಯಲ್ಲಿ ಇನ್ವೆಂಟರಿ ಮ್ಯಾನೇಜ್‍ಮೆಂಟ್, ಆಮದು-ರಫ್ತು, ಬಿಲ್ಲಿಂಗ್ ಮತ್ತು ಇನ್‍ವಾಯ್ಸಿಂಗ್ ತಯಾರಿಗೆ - ಉತ್ಪಾದನೆ, ಉಪ ಗುತ್ತಿಗೆ ಮತ್ತು ಜಾಬ್ ವರ್ಕ್ಸ್ - ಪೇಮೆಂಟ್ ಮತ್ತು ರಸೀದಿ ಹಾಗೂ ಇನ್ನೂ ಅನೇಕ ಸೇವೆಗಳು. ಮೊಬೈಲ್ ಆ್ಯಪ್ಸ್ ಫಾರ್ ಸೇಲ್ಸ್ ಫೋರ್ಸ್ ಮತ್ತು ಡೀಲರ್ ಮ್ಯಾನೇಜ್‍ಮೆಂಟ್ ಪ್ರೋಗ್ರಾಮ್ಸ್ ಸೇವೆಗಳನ್ನು ಇತ್ತೀಚಿಗೆ ಸೇರಿಸಲಾಗಿದೆ.

ಕಂಪನಿಯ ಗ್ರಾಹಕರ ಪಟ್ಟಿಯಲ್ಲಿ ಇ ಕಾಮರ್ಸ್, ನ್ಯೂ ಏಜ್ ಟೆಕ್ಯಾಲಜಿಯಿಂದ ಹಿಡಿದು ಮ್ಯಾನುಫ್ಯಾಕ್ಟರಿಂಗ್ ಕಂಪನಿಗಳ ವರಗೆ ವ್ಯಾಪರಸ್ಥರಿಂದ ಸಲಹೆಗಾರರ ತನಕ ಸೇರಿದ 200ಕ್ಕೂ ಅಧಿಕ ಗ್ರಾಹಕರನ್ನು ಎಸಿ ಟಚ್ ಹೊಂದಿದೆ. ಅದರಲ್ಲಿ IIM Bangalore (MARS Team), URDoorstep.com, Magiccrate.com RenewIT, Energy Efficient Lights, AdPac ಮೊದಲಾದ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+