ತನ್ನ ಅಗ್ಗದ ಮತ್ತು ಉಚಿತ ಪ್ಲಾನ್ ಗಳೊಂದಿಗೆ ಎಂಟ್ರಿ ಕೊಟ್ಟ ಜಿಯೋ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜಿಯೋದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಸಂಪತ್ತಿನಲ್ಲೂ ಗಣನೀಯ ಏರಿಕೆಯಾಗಿದೆ.
ಜಿಯೋ ಪ್ರವೇಶಾತಿ ಟೆಲಿಕಾಂ ಕಂಪನಿಗಳಿಗೆ ನುಂಗಲಾರದ ತುತ್ತಾಗಿರುವುದಂತು ಸತ್ಯ! ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಓಡುವ ಕುದುರೆ.. ತನ್ನ ಅಗ್ಗದ ಮತ್ತು ಉಚಿತ ಪ್ಲಾನ್ ಗಳೊಂದಿಗೆ ಎಂಟ್ರಿ ಕೊಟ್ಟ ಜಿಯೋ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜಿಯೋದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಸಂಪತ್ತಿನಲ್ಲೂ ಗಣನೀಯ ಏರಿಕೆಯಾಗಿದೆ.
ಪ್ರಸ್ತುತ ಹೆಚ್ಚಿನ ಗ್ರಾಹಕರು ಬಳಸುವ/ಇಷ್ಟಪಡುವ ಕೆಲ ಪ್ರಮುಖ ಜಿಯೋ ಪ್ರಿಪೇಡ್ ಪ್ಲಾನ್ ಗಳ ಸೌಲಭ್ಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?
ಪ್ಲಾನ್ ಗಳ ವಿಶೇಷತೆ!
ಹೆಚ್ಚಿನ ವ್ಯಾಲಿಡಿಟಿ, ಎಸ್ಎಂಎಸ್ ಸೌಲಭ್ಯ, ಹೆಚ್ಚು ಡೇಟಾ, ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆ ಹಾಗು ಇನ್ನಿತರ ಪ್ರಯೋಜನಗಳಿಂದಾಗಿ ಗ್ರಾಹಕರು ಈ ಪ್ಲಾನ್ ಗಳನ್ನು ಇಷ್ಟಪಡುತ್ತಾರೆ.
ರೂ. 398 ಪ್ಲಾನ್
ಹೆಚ್ಚು ಡೇಟಾ ಬಯಸುವ ಅತೀ ಹೆಚ್ಚಿನ ಗ್ರಾಹಕರು ರೂ. 398 ಪ್ಲಾನ್ ನ್ನು ಬಳಸುತ್ತಿದ್ದಾರೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2ಜಿಬಿ ಡೇಟಾ ಸಿಗುತ್ತದೆ. ಇದು 70 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಗ್ರಾಹಕರಿಗೆ ಒಟ್ಟು 140 ಜಿಬಿ ಡೇಟಾ ಸಿಗಲಿದೆ. ಸ್ಥಳೀಯ, ರೋಮಿಂಗ್ ಮತ್ತು ಎಸ್ಟಿಡಿ ಅನಿಯಮಿತ ಕರೆ, ೧೦೦ ಎಸ್ಎಂಎಸ್ ಲಭ್ಯವಿರುತ್ತದೆ.
ರೂ. 399 ಪ್ಲಾನ್
ಹೆಚ್ಚು ವ್ಯಾಲಿಡಿಟಿ ಬಯಸುವ ಗ್ರಾಹಕರು ರೂ. 399 ಪ್ಲಾನ್ ಬಯಸುತ್ತಾರೆ. ಈ ಯೋಜನೆ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿ ದಿನ 1.5 ಜಿಬಿ ಡೇಟಾದಂತೆ ಒಟ್ಟು 126 ಜಿಬಿ ಡೇಟಾ ಲಭ್ಯವಿದೆ. ಈ ಹಿಂದೆ ಕೇವಲ 84 ಜಿಬಿ ಡೇಟಾ ಮಾತ್ರ ಸಿಗುತ್ತಿತ್ತು. ಸ್ಥಳೀಯ ಮತ್ತು ಎಸ್ಟಿಡಿ ಅನಿಯಮಿತ ಕರೆ, ೧೦೦ ಎಸ್ಎಂಎಸ್ ಲಭ್ಯವಿರುತ್ತದೆ.
ರೂ. 149 ಪ್ಲಾನ್
ಒಂದು ತಿಂಗಳ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಇದು ಸೂಕ್ತ ಯೋಜನೆ.
ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿ ದಿನ 1.5 ಜಿಬಿ ಡೇಟಾದೊಂದಿಗೆ ಒಟ್ಟು 42 ಜಿಬಿ ಲಭ್ಯವಿದೆ. ಈ ಪ್ರಿಪೇಡ್ ಪ್ಲಾನ್ ಮೂಲಕ ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳು ಆನಂದಿಸಬಹುದು. ಉಚಿತ ೧೦೦ ಎಸ್ಎಂಎಸ್ ಲಭ್ಯವಿರುತ್ತದೆ.


Click it and Unblock the Notifications