For Quick Alerts
ALLOW NOTIFICATIONS  
For Daily Alerts

ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

ಕೇಂದ್ರ ಸರ್ಕಾರ ತನ್ನ ಮದ್ಯಂತರ ಬಜೆಟ್ ನಲ್ಲಿ ರೈತರಿಗಾಗಿ ವಾರ್ಷಿಕ ನೇರ ಆದಾಯ ಬೆಂಬಲ ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪರಿಚಯಿಸಿದೆ.

|

ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ನಲ್ಲಿ ರೈತರಿಗೆ ವಾರ್ಷಿಕ ರೂ. 6,000 ಸಹಾಯ ಧನ ನೀಡುವುದಾಗಿ ಘೋಷಿಸಿರುವುದು ಪರ-ವಿರೋಧ ಚರ್ಚೆಗೆ ಹಾಗು ಟೀಕೆಗೆ ಗುರಿಯಾಗಿದೆ. ಪಿಯೂಷ್ ಗೋಯಲ್ ಅವರು ಪಿಎಂ ಕಿಸಾನ್ ಯೋಜನೆಯನ್ನು ಪರಿಚಯಿಸಿದ್ದು, ವಾರ್ಷಿಕವಾಗಿ ಮೂರು ಕಂತುಗಳಲ್ಲಿ ಹಣ ಪಡೆಯಬಹುದು. ಈ ಯೋಜನೆ ಮಾಹಿತಿ, ಸಹಾಯ ಧನ, ಬೇಕಾಗುವ ದಾಖಲಾತಿ, ಹಣ ಪಡೆಯಲು ರೈತರು ಏನು ಮಾಡಬೇಕು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

ಪಿಎಂ ಕಿಸಾನ್ ಯೋಜನೆ

ಪಿಎಂ ಕಿಸಾನ್ ಯೋಜನೆ

ಕೇಂದ್ರ ಸರ್ಕಾರ ತನ್ನ ಮದ್ಯಂತರ ಬಜೆಟ್ ನಲ್ಲಿ ರೈತರಿಗಾಗಿ ವಾರ್ಷಿಕ ನೇರ ಆದಾಯ ಬೆಂಬಲ ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪರಿಚಯಿಸಿದೆ. ಪಿಎಂ ಕಿಸಾನ್ ಯೋಜನೆಗಾಗಿ ರೂ. 75 ಸಾವಿರ ಕೋಟಿ ಮೀಸಲಿಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ ರೂ. 2000 ಸಹಾಯಧನ ನೀಡಲಾಗುತ್ತದೆ.

ಗುರುತಿನ ದಾಖಲಾತಿ

ಗುರುತಿನ ದಾಖಲಾತಿ

ಪಿಎಂ ಕಿಸಾನ್ ಯೋಜನೆಯಡಿ ಸಹಾಯ ಧನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಇಲ್ಲದ ರೈತರು ತಾತ್ಕಾಲಿಕವಾಗಿ ಬೇರೆ ಗುರುತಿನ ದಾಖಲೆ ಒದಗಿಸಬೇಕಿದೆ. ಮೊದಲನೇ ಕಂತಿನ ಸಹಾಯ ಧನ ಪಡೆಯಲುವ ಆಧಾರ್ ಇಲ್ಲದ ರೈತರು ಮತದಾರರ ಗುರುತಿನ ಚೀಟಿ, ಡಿಎಲ್ ಇಲ್ಲವೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಿರುವ ಫೋಟೋ ಸಹಿತ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ.

ಆಧಾರ್ ಕಡ್ಡಾಯ

ಆಧಾರ್ ಕಡ್ಡಾಯ

ರೈತರು 2 ನೇ ಕಂತಿನಿಂದ ಸಹಾಯ ಧನ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಒದಗಿಸಬೇಕೆಂದು ತಿಳಿಸಲಾಗಿದೆ. ರೈತರಿಗೆ ನೀಡಲಾಗುವ ನೇರ ಆದಾಯ ಬೆಂಬಲ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಸಣ್ಣ ಹಿಡುವಳಿದಾರರು

ಸಣ್ಣ ಹಿಡುವಳಿದಾರರು

ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿರುವಂತೆ 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರ ರೈತರಿಗೆ ವಾರ್ಷಿಕ ರೂ. 6,000 ಸಹಾಯ ಧನ ನೀಡಲಾಗುವುದು. ಅಂದರೆ ತಿಂಗಳಿಗೆ ರೂ. 500 ಸಿಗಲಿದೆ. ಪ್ರತಿ 4 ತಿಂಗಳಿಗೊಮ್ಮೆ ರೂ. 2000 ಸಹಾಯ ಧನ ನೀಡಲಾಗುವುದು. ಮೂರು ಕಂತುಗಳಲ್ಲಿ ತಲಾ ರೂ. 2000 ಸಹಾಯಧನ ನೀಡಲಾಗುತ್ತದೆ.

ರಾಜ್ಯ ಸರ್ಕಾರಗಳಿಗೆ ಕೋರಿಕೆ

ರಾಜ್ಯ ಸರ್ಕಾರಗಳಿಗೆ ಕೋರಿಕೆ

ಕೇಂದ್ರ ಸರ್ಕಾರವು ಹಳ್ಳಿಗಳಲ್ಲಿನ ಸಣ್ಣ ಹಿಡುವಳಿದಾರ ರೈತರ ಫಲಾನುಭವಿಗಳ ಅಂಕಿಅಂಶಗಳನ್ನು ತಯಾರಿಸಲು ರಾಜ್ಯ ಸರ್ಕಾರಗಳಿಗೆ ಕೋರಿದೆ.
ಹೆಸರು, ಲಿಂಗ, ಎಸ್ಸಿ / ಎಸ್ಟಿ ಪಂಗಡಕ್ಕೆಸೇರಿದವರಾಗಿದ್ದಾರೆಯೇ, ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಫಲಾನುಭವಿಗಳ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಸಂಗ್ರಹಿಸಲು ಹೇಳಿದೆ.

ಭೂ ದಾಖಲೆ ನವೀಕರಣ

ಭೂ ದಾಖಲೆ ನವೀಕರಣ

ರೈತರ ಅಂಕಿಅಂಶಗಳನ್ನು ತಯಾರಿಸಲು ಹೇಳಿರುವಂತೆ, ಕೃಷಿ ಭೂಮಿ ಹೊಂದಿರುವ ಆಧಾರದ ಮೇಲೆ ಫಲಾನುಭವಿಗಳ ಭೂ ದಾಖಲೆಗಳನ್ನು ನವೀಕರಿಸುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ.

ಯಾರು ಫಲಾನುಭವಿಗಳು?

ಯಾರು ಫಲಾನುಭವಿಗಳು?

- ಗಂಡ, ಹೆಂಡತಿ ಹಾಗು ೧೮ ವರ್ಷದೊಳಗಿನ ಮಕ್ಕಳು ಇರು ಕುಟುಂಬ ಇರಬೇಕು.
- ಎರಡು ಹೆಕ್ಟೇರ್ ಜಮೀನು ಇರಬೇಕು.
- ಫೆಬ್ರವರಿ ೧, ೨೦೧೯ರ ಕ್ಕಿಂತ ಮೊದಲಿನ ಭೂ ದಾಖಲೆಗಳಲ್ಲಿ ಹೆಸರು ಇರುವ ರೈತರನ್ನು ಮಾತ್ರ ಪರಿಗಣಿಸಲಾಗುತ್ತದೆ. ಫೆಬ್ರವರಿ ೧ರ ನಂತರ ಬದಲಾವಣೆ ಮಾಡಲಾದ ಭೂ ದಾಖಲಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
- ಕುಟುಂಬವೊಂದಕ್ಕೆ ಸೇರಿದ ಜಮೀನು ವಿವಿಧ ಹಳ್ಳಿಗಳಲ್ಲಿ ಅಥವಾ ಕಂದಾಯ ದಾಖಲೆಗಳಲ್ಲಿ ಹಂಚಿ ಹೋಗಿದ್ದರೂ ಪರಿಗಣಿಸಲಾಗುತ್ತದೆ.

ಟೀಕೆ! ಕಡಿಮೆ ಪ್ರಮಾಣದ ವಾರ್ಷಿಕ ನಗದು

ಟೀಕೆ! ಕಡಿಮೆ ಪ್ರಮಾಣದ ವಾರ್ಷಿಕ ನಗದು

ಸಣ್ಣ ಹಿಡುವಳಿ ರೈತರಿಗೆ ಪ್ರತಿ ವರ್ಷಕ್ಕೆ ರೂ. 6,000 ನೇರ ನಗದು ಮೊತ್ತ ಘೋಷಿಸಿದೆ. ಅಂದರೆ ತಿಂಗಳಿಗೆ ರೂ. 500, ದಿನಕ್ಕೆ ರೂ. 17 ಆಗುತ್ತದೆ.
ರೈತರು ಕೇವಲ ರೂ. ೫೦೦ ರಲ್ಲಿ ಜೀವನ ನಿರ್ವಹಿಸಲು ಸಾಧ್ಯವೆ ಎಂದು ಶಶಿ ತರೂರ್ ಟೀಕಿಸಿದ್ದರೆ, ದಿನಕ್ಕೆ ಕೇವಲ ರೂ. ೧೭ ನಿಗದಿಪಡಿಸಿ ರೈತರನ್ನು ಅವಮಾನಿಸಿದ್ದಿರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮುಖ್ಯವಾಗಿ ಈ ಯೋಜನೆ ಭೂರಹಿತ ರೈತರನ್ನು ಹಾಗು ನಗರದ ಬಡವರನ್ನು ಕೈಬಿಟ್ಟಿದೆ.

English summary

PM Kisan scheme: Farmers How to get 6,000 rupees

Agriculture Ministry prescribes rules to avail the recently-launched Pradhan Mantri Kisan Samman Nidhi, where a beneficiary would get ₹6,000 per year in three installments.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X