ಒನ್‍ಪ್ಲಸ್ 2018ರ ಅತ್ಯುತ್ತಮ ಪ್ರೀಮಿಯಂ ಸ್ಮಾರ್ಟ್‍ಫೋನ್ : ಸಮೀಕ್ಷಾ ವರದಿ

ಬೆಂಗಳೂರು, ಫೆಬ್ರವರಿ 5: ಕೌಂಟರ್ ಪಾಯಿಂಟ್ ಮಾರ್ಕೆಟ್ ಮಾನಿಟರ್ ಸರ್ವೀಸ್ ಸಮೀಕ್ಷಾ ವರದಿ ಪ್ರಕಾರ 2018 ರಲ್ಲಿ ಒನ್‍ಪ್ಲಸ್ ಪ್ರೀಮಿಯಂ ಸ್ಮಾರ್ಟ್‍ಫೋನ್ ವರ್ಗದಲ್ಲಿ ಅತ್ಯುತ್ತಮ ಮಾರಾಟವಾದ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇತ್ತೀಚೆಗೆ ಕೌಂಟರ್ ಪಾಯಿಂಟ್ ಬಿಡುಗಡೆ ಮಾಡಿರುವ 2018 ರ 4ನೇ ತ್ರೈಮಾಸಿಕ ವರದಿಯ ಪ್ರಕಾರ, ಒನ್‍ಪ್ಲಸ್ ಕಂಪನಿ ಸ್ಮಾರ್ಟ್‍ಫೋನ್ ಮಾರುಕಟ್ಟೆಯ ಶೇ.36 ರಷ್ಟು ಪಾಲನ್ನು ಹೊಂದುವ ಮೂಲಕ 3 ನೇ ತ್ರೈಮಾಸಿಕದ ರೀತಿಯಲ್ಲಿಯೇ 4 ನೇ ತ್ರೈಮಾಸಿಕದಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದೇ ಅವಧಿಯಲ್ಲಿ ಆ್ಯಪಲ್ ಮತ್ತು ಸ್ಯಾಮ್ಸಂಗ್ ಭಾರತದಲ್ಲಿ ಕ್ರಮವಾಗಿ ಶೇ. 30 ಮತ್ತು ಶೇ.26 ರಷ್ಟು ಪಾಲನ್ನು ಹೊಂದಿವೆ.

ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯ

2018 ರಲ್ಲಿ ಪ್ರೀಮಿಯಂ ವರ್ಗದಲ್ಲಿ ಅತ್ಯಧಿಕ ಮಾರಾಟವಾದ ಸ್ಮಾರ್ಟ್‍ಫೋನ್ ಎಂದರೆ ಒನ್‍ಪ್ಲಸ್ 6. ಇದರ ನಂತರ ಒನ್‍ಪ್ಲಸ್ 6ಟಿ ಮಾರಾಟವಾಗಿದೆ. ಒನ್‍ಪ್ಲಸ್ ವಾರ್ಷಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಸ್ಮಾರ್ಟ್‍ಫೋನ್ ಬ್ರ್ಯಾಂಡ್ ಎನಿಸಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಶೇ.85 ರಷ್ಟು ಬೆಳವಣಿಗೆ ಕಂಡಿದೆ. 2018 ನೇ ಸಾಲಿನ 4 ನೇ ತ್ರೈಮಾಸಿಕದಲ್ಲಿ ಒನ್‍ಪ್ಲಸ್ 6ಟಿ ಮಾರುಕಟ್ಟೆಯ ಪಾಲನ್ನು ಹೆಚ್ಚಿಸಿಕೊಳ್ಳಲು ನೆರವಾಗಿದ್ದು, ಹತ್ತಿರದ ಪ್ರತಿಸ್ಪರ್ಧಿಯ ನಡುವೆ ಇದ್ದ ಅಂತರವನ್ನು ಕಡಿಮೆ ಮಾಡಿದ್ದು, ಇದೀಗ ಈ ಅಂತರ ಶೇ. 10 ಕ್ಕೆ ಬಂದು ತಲುಪಿದೆ.

ಒನ್‍ಪ್ಲಸ್ 2018ರ ಅತ್ಯುತ್ತಮ ಪ್ರೀಮಿಯಂ ಸ್ಮಾರ್ಟ್‍ಫೋನ್

ಕೌಂಟರ್ ಪಾಯಿಂಟ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕರಾದ ಕಾರ್ನ್ ಚೌಹಾಣ್ ಅವರು ಮಾತನಾಡಿ, "ಹಿಂದೆಂದಿಗಿಂತಲೂ ಅತ್ಯಧಿಕ ಮಾರಾಟವನ್ನು ಕಾಣುವ ಮೂಲಕ ಪ್ರೀಮಿಯಂ ಸ್ಮಾರ್ಟ್‍ಫೋನ್ ವರ್ಗದಲ್ಲಿ ಒನ್‍ಪ್ಲಸ್ ಸತತ ಮೂರು ತ್ರೈಮಾಸಿಕಗಳಲ್ಲಿ ಮೊದಲ ಸ್ಥಾನವನ್ನು ಹೊಂದಿದೆ. ಹೆಚ್ಚುವರಿಯಾಗಿ, ಕೇವಲ ಒಂದು ವರ್ಷದಲ್ಲಿ ಪ್ರೀಮಿಯಂ ಸ್ಮಾರ್ಟ್‍ಫೋನ್ ವಿಭಾಗದಲ್ಲಿ ಒನ್‍ಪ್ಲಸ್ ಒನ್ ಒಟ್ಟಾರೆ ಉತ್ತಮ ಫಲಿತಾಂಶವನ್ನು ಪಡೆದಿದೆ.

ಜಿಯೋ- ಒನ್‍ಪ್ಲಸ್ 6ಟಿ ಅನ್‍ಲಾಕ್ ಅಫರ್ ತಕ್ಷಣವೇ ಕ್ಯಾಶ್ ಬ್ಯಾಕ್

ಹಬ್ಬದ ಸಂದರ್ಭದಲ್ಲಿ ಇತ್ತೀಚಿನ ಒನ್‍ಪ್ಲಸ್ 6ಟಿಗೆ ಭಾರೀ ಬೇಡಿಕೆ ಕಂಡುಬಂದಿದೆ. ಇದೇ ಬೇಡಿಕೆಯ ಸ್ಥಿತಿ ಹಬ್ಬದ ನಂತರವೂ ಮುಂದುವರಿದಿದ್ದು, ಇದೀಗ ಮನೆ ಮಾತಾಗಿದೆ. ಅಲ್ಲದೇ, ಗ್ರಾಹಕರಿಂದ ಅತ್ಯುತ್ತಮವಾದ ಪ್ರತಿಕ್ರಿಯೆಯನ್ನೂ ಪಡೆಯುತ್ತಿದೆ. ಕಂಪನಿಯ ಎಕ್ಸ್‍ಪೀರಿಯನ್ಸ್ ಸ್ಟೋರ್ ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಪರಿಣಾಮ ಮುಂದಿನ ತ್ರೈಮಾಸಿಕಗಳಲ್ಲಿ ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆಗೆ ನೆರವಾಗಲಿದೆ" ಎಂದು ತಿಳಿಸಿದರು.

ಒನ್‍ಪ್ಲಸ್.ಇನ್, ಅಮೆಜಾನ್.ಇನ್, ರಿಲಾಯನ್ಸ್ ಡಿಜಿಟಲ್ ಮಳಿಗೆಗಳು, ಕ್ರೋಮಾ ಮಳಿಗೆಗಳು ಮತ್ತು ಒನ್‍ಪ್ಲಸ್ ಎಕ್ಸ್ ಕ್ಯೂಸಿವ್ ಆಫ್‍ಲೈನ್ ಸ್ಟೋರ್ ಗಳಲ್ಲಿ ಈ ಸ್ಮಾರ್ಟ್‍ಫೋನ್‍ಗಳು ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+