For Quick Alerts
ALLOW NOTIFICATIONS  
For Daily Alerts

50 ಕೋಟಿಯಲ್ಲಿ 6 ರೋಲ್ಸ್ ರಾಯ್ಸ್ ಕಾರು ಖರೀದಿಸಿದ 'ಬ್ರಿಟನ್ ನ ಬಿಲ್ ಗೇಟ್ಸ್'

|

ಲಂಡನ್, ಫೆಬ್ರವರಿ 6: ಬ್ರಿಟನ್ ನ ಬಿಲ್ ಗೇಟ್ಸ್ ಅಂತಲೇ ಹೆಸರಾದ ಉದ್ಯಮಿ ರುಬೇನ್ ಸಿಂಗ್ ಇಂಟರ್ ನೆಟ್ ನಲ್ಲಿ ವಿಪರೀತ ಸುದ್ದಿಯಲ್ಲಿದ್ದಾರೆ. ಈಚೆಗೆ ಹೊಸದಾಗಿ ಆರು ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿ, ತಮ್ಮ ವೈಯಕ್ತಿಕ ಜುವೆಲ್ ಕಲೆಕ್ಷನ್ ಗೆ ಸೇರಿಸಿಕೊಂಡಿದ್ದಾರೆ ಸಿಂಗ್. ಅದಕ್ಕಾಗಿ ಅವರಿಗೆ ಆದ ಖರ್ಚು ಜಸ್ಟ್ 50 ಕೋಟಿ ರುಪಾಯಿ.

 

ರುಬೇನ್ ಸಿಂಗ್ ಅವರು ಆಲ್ ಡೇ ಪಿಎ ಕಾಂಟ್ಯಾಕ್ಟ್ ಸೆಂಟರ್ ಕಂಪನಿಯ ಸಿಇಒ ಹಾಗೂ ಸ್ಥಾಪಕರು. ಹೊಸದಾಗಿ ರೋಲ್ಸ್ ರಾಯ್ಸ್ ಸಂಗ್ರಹದಲ್ಲಿ ಮೂರು ಫ್ಯಾಂಟಮ್ ವಿಲಾಸಿ ಸೆಡಾನ್ ಮತ್ತು ಮೂರು ಕಲಿನನ್ ವಿಲಾಸಿ ಎಸ್ ಯುವಿ ಇದೆ. ಅವುಗಳಿಗೆ ರೂಬೀಸ್, ಸಫೈರ್ಸ್ ಮತ್ತು ಎಮರಾಲ್ಡ್ಸ್ ಎಂದು ಹೆಸರಿಡಲಾಗಿದೆ.

 

ಜಗತ್ತಿನಲ್ಲಿ ರೂಪಾಯಿಗೆ ಅತಿಹೆಚ್ಚು ಬೆಲೆ ಇರುವ 14 ದೇಶಗಳು ನಿಮಗೆ ಗೊತ್ತೆ?ಜಗತ್ತಿನಲ್ಲಿ ರೂಪಾಯಿಗೆ ಅತಿಹೆಚ್ಚು ಬೆಲೆ ಇರುವ 14 ದೇಶಗಳು ನಿಮಗೆ ಗೊತ್ತೆ?

ಫ್ಯಾಂಟಮ್ ಅಂತೂ ಸದ್ಯದ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಸೆಡಾನ್ ಕಾರು. ಇನ್ನು ಕಲಿನನ್ ಎಂಬುದು ರೋಲ್ಸ್ ರಾಯ್ಸ್ ತಯಾರಿಸುವ ಏಕೈಕ ಎಸ್ ಯುವಿ. ಈ ಕಾರುಗಳನ್ನು ರೋಲ್ಸ್ ರಾಯ್ಸ್ ಕಂಪನಿಯ ಸಿಇಒ ಸ್ವತಃ ಬಂದು ಸಿಂಗ್ ಗೆ ಡೆಲಿವರಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಕೂಡ ಆಗಿದೆ.

50 ಕೋಟಿಯಲ್ಲಿ 6 ರೋಲ್ಸ್ ರಾಯ್ಸ್ ಖರೀದಿಸಿದ 'ಬ್ರಿಟನ್ ಬಿಲ್ ಗೇಟ್ಸ್'

ಈ ಕಾರುಗಳ ಫೋಟೋವನ್ನು ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಸಿಂಗ್ ಹಾಕಿಕೊಂಡಿದ್ದಾರೆ. ವರ್ಷದ ಹಿಂದೆ ಬ್ರಿಟಿಷ್ ವ್ಯಕ್ತಿಯೊಬ್ಬ ಸಿಂಗ್ ಅವರ ಟರ್ಬನ್ ಬಗ್ಗೆ ಹೀಯಾಳಿಸಿದ್ದ. ಇದನ್ನೇ ಸವಾಲಾಗಿ ಸ್ವೀಕರಿಸಿದ ಸಿಂಗ್, ಏಳು ದಿನಗಳ ಕಾಲ ತಾವು ಧರಿಸುವ ಟರ್ಬನ್ ನ ಬಣ್ಣಕ್ಕೆ ಹೊಂದಿಕೆ ಆಗುವಂತೆ ಏಳು ರೋಲ್ಸ್ ರಾಯ್ಸ್ ಕಾರು ಖರೀದಿಸಿ ಸುದ್ದಿಯಾಗಿದ್ದರು.

ಇದೀಗ ಆರು ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ. ಅವರ ಬಳಿ ಇರುವ ಇದೇ ಕಂಪನಿಯ ಕಾರುಗಳ ಸಂಖ್ಯೆ ಇಪ್ಪತ್ತು ಮುಟ್ಟಿದೆ. ಇದರ ಜತೆಗೆ ಬುಗಾಟಿ ವೆರಾನ್, ಪೋರ್ಷೆ ಸ್ಪೈಡರ್, ಪಗನಿ ಹ್ಯುಯರಾ, ಲಂಬೋರ್ಗಿನಿ ಹರಕಾನ್ ಮತ್ತು ಫೆರಾರಿ ಬರ್ಲಿನೆಟ್ಟ ಕಾರುಗಳ ಸಹ ಇವೆ.

Read more about: business ವಾಣಿಜ್ಯ
English summary

'Britain Bill Gates' spend Rs 50 Crore to buy Rolls Royce cars

Reuben Singh also known as the Bill Gates of Britain recently purchased six new Rolls-Royce cars and added them to his personal "Jewels Collection by Singh" fleet. It cost him just Rs. 50 crore.
Story first published: Wednesday, February 6, 2019, 17:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X