ಕೇಂದ್ರ ಸರಕಾರಕ್ಕೆ ಆರ್ ಬಿಐನಿಂದ 69 ಸಾವಿರ ಕೋಟಿ ರುಪಾಯಿ ಲಾಭಾಂಶದ ನಿರೀಕ್ಷೆ

ಕೇಂದ್ರ ಸರಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 2019-20ರ ಆರ್ಥಿಕ ವರ್ಷಕ್ಕೆ 69 ಸಾವಿರ ಕೋಟಿ ರುಪಾಯಿ ಲಾಭಾಂಶದ ನಿರೀಕ್ಷೆಯಲ್ಲಿದೆ. ಅಂದರೆ ಒಟ್ಟಾರೆಯಾಗಿ ಆರ್ ಬಿಐ ಮತ್ತು ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಬರಬಹುದಾದ ಅಂದಾಜು ಲಾಭಾಂಶ ಮೊತ್ತ 82,911.56 ಕೋಟಿ ರುಪಾಯಿ ಎಂಬುದು ಬಜೆಟ್ ಲೆಕ್ಕಾಚಾರ.

ಅದರಲ್ಲಿ ಶೇಕಡಾ 83ರಷ್ಟು ಮೊತ್ತ ಆರ್ ಬಿಐನಿಂದಲೇ ಬರುವ ಅಂದಾಜು ಹಾಕಿಕೊಳ್ಳಲಾಗಿದೆ ಎಂದು ಸರಕಾರದ ಹಿರಿಯ ಅಧಿಕಾರಿಗಳೇ ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ ಬಿಐ 40 ಸಾವಿರ ಕೋಟಿ ಲಾಭಾಂಶ ಈಗಾಗಲೇ ನೀಡೀದೆ. ಮತ್ತು ಸರಕಾರವು ಮಧ್ಯಂತರ ಲಾಭಾಂಶವಾಗಿ 28 ಸಾವಿರ ಕೋಟಿ ರುಪಾಯಿ ಕೇಳುತ್ತಿದೆ.

ನಮ್ಮ ಪರಿಷ್ಕೃತ ಅಂದಾಜು ಪ್ರಕಾರ 28 ಸಾವಿರ ಕೋಟಿ ಬಜೆಟ್ ಮಾಡಿದ್ದೀವಿ. ಅಂತಿಮವಾಗಿ ಎಷ್ಟು ಮೊತ್ತ ವರ್ಗಾವಣೆ ಮಾಡಬೇಕು ಎಂಬುದು ಆರ್ ಬಿಐ ಮಂಡಳಿಯ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ. 2018-19ನೇ ಪರಿಷ್ಕೃತ ಅಂದಾಜಿನ ಪ್ರಕಾರ ಆರ್ ಬಿಐ, ಬಾಂಕ್ ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ಸೇರಿ 74,140 ಕೋಟಿ ಎಂದು ಅಂದುಕೊಳ್ಳಲಾಗಿದೆ. ಬಜೆಟ್ ನಲ್ಲಿ 54,817 ಕೋಟಿ ಎಂದು ಅಂದಾಜಿಸಲಾಗಿತ್ತು.

ಕೇಂದ್ರ ಸರಕಾರಕ್ಕೆ ಆರ್ ಬಿಐನಿಂದ 69 ಸಾವಿರ ಕೋಟಿ ಲಾಭಾಂಶದ ನಿರೀಕ್ಷೆ

ಈಗ ಕೇಳಲಾದ ಹೆಚ್ಚುವರಿ 28 ಸಾವಿರ ಕೋಟಿ ಮಧ್ಯಂತರ ಬಜೆಟ್ ನಲ್ಲಿ 13 ಸಾವಿರ ಕೋಟಿಯಷ್ಟನ್ನು 2017-18ರಿಂದ ಕೇಳುತ್ತಿದ್ದು, ಆಗಿಂದ ಬಾಕಿ ಉಳಿದಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಗರ್ಗ್ ಸಾರ್ವಜನಿಕವಾಗಿಯೇ ಕೇಂದ್ರ ಬ್ಯಾಂಕ್ ಕಂಟಿಜೆನ್ಸಿ ರಿಸರ್ವ್ ಕೇಳಿದ್ದಾರೆ.

ಇದರರ್ಥ 15 ಸಾವಿರ ಕೋಟಿ ರುಪಾಯಿ ಹೊಸದಾಗಿ ಮಧ್ಯಂತರ ಲಾಭಾಂಶಕ್ಕಾಗಿ ಮನವಿ ಮಾಡಿದೆ. ಪ್ರತಿ ವರ್ಷದ ಜುಲೈನಿಂದ-ಜೂನ್ ತನಕ ಆರ್ ಬಿಐಗೆ ಆರ್ಥಿಕ ವರ್ಷ. ಈಗ ಯಾವುದೇ ಮಧ್ಯಂತರ ಲಾಭಾಂಶ ಪಾವತಿಸಿದರೆ ಅದು ಜುಲೈ 2018 ಹಾಗೂ ಜೂನ್ 2019ರ ಆರ್ಥಿಕ ವರ್ಷಕ್ಕೆ ಸೇರಿದ್ದಾಗಿರುತ್ತದೆ.

2017 ಜುಲೈ- 2018ರ ಜೂನ್ ಅವಧಿಗೆ ಆರ್ ಬಿಐ 50 ಸಾವಿರ ಕೋಟಿ ಲಾಭಾಂಶ ಪಾವತಿಸಿದೆ. ಅದರಲ್ಲಿ 10 ಸಾವಿರ ಕೋಟಿ ರುಪಾಯಿ ಮಾರ್ಚ್ 27ರಂದು ಸರಕಾರಕ್ಕೆ ವರ್ಗಾವಣೆ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+