ಜಾಗತಿಕ ಬ್ಯಾಂಕಿಂಗ್ ಹಾಗೂ ಮಾರ್ಕೆಟ್ಸ್ ವ್ಯವಹಾರದಲ್ಲಿ ಡಜನ್ ಗಟ್ಟಲೆ ಸಿಬ್ಬಂದಿಯನ್ನು ಕಡಿತಗೊಳಿಸಲು ಎಚ್ ಎಸ್ ಬಿಸಿ ತಯಾರಿ ನಡೆಸಿದೆ. ಈ ವಿಚಾರದ ಬಗ್ಗೆ ಮಾಹಿತಿ ಇರುವ ಮೂಲವೊಂದು ಮಾಧ್ಯಮ ಸಂಸ್ಥೆಗೆ ತಿಳಿಸಿದೆ. ವೆಚ್ಚ ಕಡಿತಕ್ಕೆ ಮುಂದಾಗಿರುವ ಕ್ರಮ ಇದಾಗಿದ್ದು, ಲಾಭಾಂಶವನ್ನು ಕಾಪಾಡಿಕೊಳ್ಳುವ ಕಾರಣಕ್ಕೆ ಹೀಗೆ ಮಾಡುತ್ತಿದೆ ಎಂಬುದು ತಿಳಿದು ಬಂದಿರುವ ಮಾಹಿತಿ.
ಜಾಗತಿಕ ಬ್ಯಾಂಕಿಂಗ್ ಹಾಗೂ ಮಾರ್ಕೆಟ್ಸ್ ವ್ಯವಹಾರದಲ್ಲಿ ಈ ನಿರ್ಧಾರವು ಮುಖ್ಯವಾಗಿ ಮಾರಾಟ ಹಾಗೂ ಸಲಹಾ ಸಿಬ್ಬಂದಿ ಮೇಲೆ ಪರಿಣಾಮ ಬೀರಲಿದೆ. ಯಾವ ಸಿಬ್ಬಂದಿಯನ್ನು ತೆಗೆಯಲಾಗುವುದು ಎಂಬ ಬಗ್ಗೆ ಈ ವಾರದಲ್ಲೇ ತಿಳಿಸಲಾಗುತ್ತದೆ. ಎಚ್ ಎಸ್ ಬಿಸಿಯ ವಕ್ತಾರರು ಈ ಸುದ್ದಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಬ್ಯಾಂಕ್ ನ ಹಿರಿಯ ನಿರ್ವಹಣಾ ತಂಡವು 2019ರ ಸಾಲಿಗೆ ಬಜೆಟ್ ಪ್ಲಾನಿಂಗ್ ಮಾಡಿದ ನಂತರ ಈ ಸಿಬ್ಬಂದಿ ಕಡಿತದ ಪ್ರಸ್ತಾವನೆ ಬಂದಿದೆ. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ನ ಮಾಜಿ ಅಧಿಕಾರಿ ಎವನ್ ಸ್ಟೀವನ್ಸನ್ ಅವರನ್ನು ಎಚ್ ಎಸ್ ಬಿಸಿಯ ಮುಖ್ಯ ಆರ್ಥಿಕ ಅಧಿಕಾರಿಯಾಗಿ ಈಚೆಗೆ ನೇಮಕ ಮಾಡಲಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications