ಜಿಯೋ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ ಸರಣಿ ಆಫರ್ರಿಲಯನ್ಸ್ ಜಿಯೋ ಈ ಎರಡೂ ಸ್ಮಾರ್ಟ್ಫೋನ್ ಮೇಲೆ ವಿಶೇಷ 'ಜಿಯೋ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ ಸರಣಿ ಆಫರ್' ನೀಡುತ್ತಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ10 ಹಾಗೂ ಗ್ಯಾಲಕ್ಸಿ ಎಂ20 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ್ದು, ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಕೆಲವೇ ನಿಮಿಷದಲ್ಲಿ ಎಲ್ಲ ಫೋನ್ ಮಾರಾಟವಾಗಿದ್ದು, ಫೆ. 7 ರಂದು ಎರಡನೇ ಬಾರಿ ಸೇಲ್ ನಡೆಯಲಿದೆ. ಜಿಯೋ ಹೊಸ ಗ್ರಾಹಕರನ್ನು ಸೆಳೆಯಲು ಹಲವು ಕಸರತ್ತುಗಳನ್ನು ಮಾಡುತ್ತಲೇ ಇದ್ದು, ಇದೀಗ ಸ್ಯಾಮ್ಸಂಗ್ ಗ್ಯಾಲಕ್ಸಿ ಜೊತೆಗೆ ಕೈಜೋಡಿಸಿದೆ. ಜಿಯೋ ತಕಧಿಮಿತ! ಈ ಮೂರು ಪ್ಲಾನ್ ಗಳು ಗ್ರಾಹಕರನ್ನು ಸೆಳೆಯುತ್ತಿವೆ.
ಜಿಯೋ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ ಸರಣಿ ಆಫರ್
ರಿಲಯನ್ಸ್ ಜಿಯೋ ಈ ಎರಡೂ ಸ್ಮಾರ್ಟ್ಫೋನ್ ಮೇಲೆ ವಿಶೇಷ 'ಜಿಯೋ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ ಸರಣಿ ಆಫರ್' ನೀಡುತ್ತಿದೆ. ಸ್ಯಾಮ್ಸಂಗ್ ಸಹಯೋಗದೊಂದಿಗೆ ರಿಲಯನ್ಸ್ ಜಿಯೋ 'ಜಿಯೋ ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್ ಸರಣಿ ಆಫರ್' ಅನ್ನು ಘೋಷಿಸಿದೆ.
ಡಬಲ್ ಡೇಟಾ
ಈ ಯೋಜನೆಯಡಿ ಗ್ಯಾಲಕ್ಸಿ M10 ಅಥವಾ ಗ್ಯಾಲಕ್ಸಿ M20 ಅನ್ನು ಖರೀದಿಸುವ ಜಿಯೋ ಪ್ರಿಪೇಡ್ ಗ್ರಾಹಕರು ಡಬಲ್ ಡೇಟಾ ಪ್ರಯೋಜನ ಪಡೆಯಲಿದ್ದಾರೆ. ಗ್ರಾಹಕರು ರೂ. 198 ಹಾಗೂ ರೂ. 299 ರೀಚಾರ್ಜ್ ಮಾಡಿಸಿದರೆ ಡಬಲ್ ಡೇಟಾ ಸಿಗಲಿದೆ. ರೂ. 198 ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 2ಜಿಬಿ ಡೇಟಾ ಹಾಗು ರೂ. 299 ಪ್ಲಾನ್ ನಲ್ಲಿ 3ಜಿಬಿ ಡೇಟಾ ಸಿಗಲಿದೆ. ವೋಚರ್ ರೀತಿಯಲ್ಲಿ ಗ್ರಾಹಕರಿಗೆ ಡೇಟಾ ಸಿಗಲಿದೆ.
ಫೋನ್ ಎಲ್ಲಿ ಲಭ್ಯ
ಗ್ಯಾಲಕ್ಸಿ M10 ಹಾಗು ಗ್ಯಾಲಕ್ಸಿ M20 ಸ್ಮಾರ್ಟಫೋನ್ Amazon.in ಮತ್ತು Samsung.com ನಲ್ಲಿ ಲಭ್ಯವಿವೆ. ಹೊಸದಾಗಿ ಬಿಡುಗಡೆ ಮಾಡಲಾದ M - ಸರಣಿ ಫೋನ್ ಗಳು ಡ್ಯುಯಲ್ ಕ್ಯಾಮರಾ, ಅಲ್ಟ್ರಾ-ವೈಡ್ ಲೆನ್ಸ್, ದೀರ್ಘಕಾಲೀನ ಬ್ಯಾಟರಿ, ಉನ್ನತ-ಕಾರ್ಯಕ್ಷಮತೆ ಪ್ರೊಸೆಸರ್ ಮತ್ತು ಹೊಸ ಸ್ಯಾಮ್ಸಂಗ್ ಎಕ್ಸ್ಪೀರಿಯೆನ್ಸ್ UX ವೈಶಿಷ್ಟ್ಯತೆ ಹೊಂದಿದೆ.
ಫೋನ್ ಬೆಲೆ
ಗ್ಯಾಲಕ್ಸಿ ಎಂ 20: ರೂ. 12,990 (4GB+64GB variant)
ಗ್ಯಾಲಕ್ಸಿ ಎಂ 20: ರೂ. 10,990 (3GB+32GB variant)
ಗ್ಯಾಲಕ್ಸಿ ಎಂ 10: ರೂ. 8,990 (3GB+32GB)
ಗ್ಯಾಲಕ್ಸಿ ಎಂ 10: ರೂ. 7,990 (2GB+16GB)


Click it and Unblock the Notifications