ಸ್ಪೈಸ್ ಜೆಟ್ ನಾಲ್ಕು ದಿನಗಳ ಭರ್ಜರಿ ಟಿಕೆಟ್ ಮಾರಾಟ ಆರಂಭ ಮಾಡಿದೆ. ಈ ರಿಯಾಯಿತಿ ದರದ ಮಾರಾಟದಲ್ಲಿ ಪ್ರಯಾಣಿಕರಿಗೆ ಕೇವಲ 899 ರೂಪಾಯಿಗೆ ವಿಮಾನಯಾನ ಸಾಧ್ಯವಾಗಲಿದೆ.
ದೇಶಿ ವಿಮಾನ ಪ್ರಯಾಣವು 899 ರೂಪಾಯಿಗಳಿಗೆ ಸಾಧ್ಯವಾದರೆ, ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ದರ 3699 ರೂಪಾಯಿಯಿಂದ ಆರಂಭವಾಗಲಿದೆ.
ಸ್ಪೈಸ್ ಜೆಟ್ ಪ್ರಕಟಣೆ ಪ್ರಕಾರ, ದೇಶಿ ವಿಮಾನ ಪ್ರಯಾಣಿಕರಿಗೆ ಪ್ರತಿ ಕಿ.ಮೀ. ಗೆ 1.75 ರೂಪಾಯಿನಂತೆ ವೆಚ್ಚವಾಗಲಿದೆಹಾಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ 2.5 ರೂಪಾಯಿ ಪ್ರತಿ ಕಿಲೋಮೀಟರ್ ನಂತೆ ಶುಲ್ಕ ವಿಧಿಸಲಾಗಿದೆ.

ಫೆಬ್ರವರಿ 5 ರಿಂದ ಶುರುವಾಗಿರುವ ಮಾರಾಟವು ಫೆಬ್ರವರಿ 9 ರವರೆಗೆ ನಡೆಯಲಿದೆ. ಸೆಪ್ಟೆಂಬರ್ 25,2019 ರವರೆಗೆ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಈ ಸೌಲಭ್ಯದಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ದೆಹಲಿ-ಕೊಯಮತ್ತೂರಿಗೆ ತೆರಿಗೆ ಸೇರಿದಂತೆ 2,899ರುಗಳಿಗೆ ಪ್ರಯಾಣಿಸಬಹುದು. ಮುಂಬೈ -ಕೊಚ್ಚಿ ನಡುವೆ ದರ 1,849 ರು ನಷ್ಟಿದೆ. ಇದೇ ರೀತಿ ದೆಹಲಿ-ಗುವಾಹಟಿ ಟಿಕೆಟ್ 2,499 ರು ಹಾಗೂ ಬೆಂಗಳೂರು -ದೆಹಲಿ 2,649 ರು ಮಾತ್ರ ಆಗಲಿದೆ.
899 ರು ಪ್ರಯಾಣ ದರ ಅಡಿಯಲ್ಲಿ ಜಮ್ಮು-ಶ್ರೀನಗರ, ಚೆನ್ನೈ-ಬೆಂಗಳೂರು, ಕೊಚ್ಚಿ ಬೆಂಗಳೂರು, ಹುಬ್ಬಳ್ಳಿ-ಬೆಂಗಳೂರು ಏಕಮುಖ ವಿಮಾನಯಾನ ಸಾಧ್ಯವಿದೆ.
ಎಸ್.ಬಿ.ಐ. ಕ್ರೆಡಿಟ್ ಕಾರ್ಡ್ ನಲ್ಲಿ ಟಿಕೆಟ್ ಖರೀದಿ ಮಾಡಿದ್ರೆ ಶೇಕಡಾ 10ರಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಇದ್ರ ಜೊತೆ ಚೆಕ್-ಇನ್ ಉಚಿತವಾಗಿ ಸಿಗಲಿದೆ. ಇದಲ್ಲದೆ, ಆಯ್ಕೆ ಸೀಟ್ ಹಾಗೂ ಊಟಕ್ಕೆ ಪ್ರತ್ಯೇಕ ಶೇಕಡಾ 25 ರಷ್ಟು ರಿಯಾಯಿತಿ ಸಿಗಲಿದೆ.


Click it and Unblock the Notifications