For Quick Alerts
ALLOW NOTIFICATIONS  
For Daily Alerts

ಬಂಗಾರದತ್ತ ಕೇಂದ್ರೀಯ ಬ್ಯಾಂಕರ್ಸ್ ಚಿತ್ತ! ಯಾಕೆ ಗೊತ್ತಾ?

|

ಪ್ರತಿದಿನ ಏರಿಳಿಕೆಗೆ ಒಳಗಾಗುವ ಚಿನ್ನ ಸದಾ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಿನ್ನ ಹೆಚ್ಚು ಸುದ್ದಿಯಲ್ಲಿದ್ದು, ಕಳೆದ ಸೆಪ್ಟಂಬರ್ ಅಂತ್ಯದಿಂದ ಚಿನ್ನದ ಬೆಲೆ ಶೇ. 11ರಷ್ಟು ಹೆಚ್ಚಿದೆ. ಜಗತ್ತಿನಾದ್ಯಂತ ಇರುವ ಕೇಂದ್ರೀಯ ಬ್ಯಾಂಕರ್ಸ್ ಅಮೂಲ್ಯವಾದ ಈ ಲೋಹವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿವೆ.

2018 ರಲ್ಲಿ 651.5 ಟನ್ ಚಿನ್ನ ಇದಕ್ಕೆ ಸೇರ್ಪಡೆಯಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ. 74ರಷ್ಟು ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC) ವರದಿ ಮಾಡಿದೆ. ಅತಿಹೆಚ್ಚು ಬಂಗಾರ ಹೊಂದಿರುವ ಜಗತ್ತಿನ 10 ದೇಶಗಳು

ಉದಯೋನ್ಮುಖ ಮಾರುಕಟ್ಟೆಯ ಪಾತ್ರ
 

ಉದಯೋನ್ಮುಖ ಮಾರುಕಟ್ಟೆಯ ಪಾತ್ರ

ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿಸಿರುವ ರಷ್ಯಾ, ಟರ್ಕಿ, ಕಝಕಸ್ತಾನ್ ಮತ್ತು ಪೋಲಂಡ್ ಮುಂತಾದ ದೇಶಗಳು ಉದಯೋನ್ಮುಖ ಮಾರುಕಟ್ಟೆಗಳಾಗಿ ಹೊರಹೊಮ್ಮಿವೆ ಎಂದು ಡಬ್ಲುಜಿಸಿ ವರದಿ ತಿಳಿಸಿದೆ. ಉದಯೋನ್ಮುಖ ಮಾರುಕಟ್ಟೆ ದೇಶಗಳು ಇತರ ಆಸ್ತಿಗಳನ್ನು ಹೊಂದಲು ಕೂಡ ಮುಂದಾಗಿವೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ಯುಎಸ್, ಚೀನಾ ವ್ಯಾಪಾರ ಯುದ್ದ

ಕಳೆದ ವರ್ಷದಿಂದ ಚೀನಾ ಮತ್ತು ಯುಎಸ್ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ದವು ಜಾಗತಿಕ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಹೀಗಾಗಿ, ಜಗತ್ತಿನ ಹೆಚ್ಚಿನ ದೇಶಗಳಿಗೆ ಚಿನ್ನ ಉಪಯುಕ್ತ ಲೋಹವಾಗಿದೆ. ಯುಎಸ್ ಆರ್ಥಿಕತೆ ಮತ್ತು ಡಾಲರ್ ಬೆಲೆ ಹೋಲಿಸಿ ನೋಡಿದರೆ ಚಿನ್ನದ ಬೆಲೆಗಳು ವಿರುದ್ದವಾಗಿ ಚಲಿಸಿರುವುದನ್ನು ಗಮನಿಸಬಹುದು.

ಜಾಗತಿಕವಾಗಿ ಚಿನ್ನದ ಪ್ರಭಾವ

ಜಾಗತಿಕವಾಗಿ ಚಿನ್ನದ ವೈವಿಧ್ಯೀಕರಣ ಉತ್ತಮ ಸ್ಥಾನದಲ್ಲಿದ್ದು, ಇದು ಅಮೂಲ್ಯವಾದ ದ್ರವ ಹಾಗು ಒಂದು ಮೌಲ್ಯದ ಜಾಗತಿಕ ಸಂಗ್ರಹವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಕೇಂದ್ರೀಯ ಬ್ಯಾಂಕುಗಳು ಸದಾ ಚಿನ್ನದ ಕಡೆಗೆ ಆಕರ್ಷಿಸಲ್ಪಡುತ್ತವೆ. ಯಾಕೆಂದರೆ ಮುಂದಿನ ದಿನಗಳಲ್ಲಿನ ಚಿನ್ನದ ಮಾರುಕಟ್ಟೆ, ಬೇಡಿಕೆ, ಚಿನ್ನದ ಬೆಲೆ ಹಾಗು ವ್ಯಾಪಾರ ಯುದ್ದ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ವ್ಯಾಪಾರ ಯುದ್ದದಿಂದಾಗಿ ಜಾಗತಿಕ ಮಾರುಕಟ್ಟೆ ಮೇಲೆ ಒತ್ತಡ ಉಂಟಾದರೆ ಡಾಲರ್ ಮೇಲೆ ಪ್ರಭಾವ ಬೀರುತ್ತದೆ.

ಚಿನ್ನ ಸಂಗ್ರಹಕ್ಕೆ ಕಾರಣ
 

ಚಿನ್ನ ಸಂಗ್ರಹಕ್ಕೆ ಕಾರಣ

ವ್ಯಾಪಾರ ಯುದ್ದ ಹಾಗು ಡಾಲರ್ ಪ್ರಭಾವದ ಹೊರತಾಗಿ, ಉದಯೋನ್ಮುಖ ಮಾರುಕಟ್ಟೆ ದೇಶಗಳ ಕರೆನ್ಸಿಗಳು ಅಪಾಯದಲ್ಲಿ ಸಿಲುಕಬಹುದು. ಆದ್ದರಿಂದ, ಕರೆನ್ಸಿ ಚಂಚಲತೆಗೆ ವಿರುದ್ಧವಾಗಿ ಚಿನ್ನವನ್ನು ಸಂಗ್ರಹಿಸಿಡಲು ಕೇಂದ್ರೀಯ ಬ್ಯಾಂಕುಗಳು ಒಳಗೊಂಡಂತೆ ಎಲ್ಲರೂ ಬಯಸುತ್ತಾರೆ ಎಂದು ರಿಲಯನ್ಸ್ ನಿಪ್ಪನ್ ಲೈಫ್ ಅಸೆಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಮುಖ್ಯಸ್ಥ ವಿಕ್ರಮ್ ಧವನ್ ಹೇಳುತ್ತಾರೆ.

ದ್ವಿಪಕ್ಷೀಯ ಕರೆನ್ಸಿ ಆಧಾರಿತ ವಹಿವಾಟು

ಜಾಗತಿಕ ವ್ಯಾಪಾರ ಯುದ್ಧ ಮತ್ತೊಂದು ವಿದ್ಯಮಾನಕ್ಕೆ ಕಾರಣವಾಗಿದ್ದು, ದೇಶಗಳು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಹೆಚ್ಚು ತಮ್ಮನ್ನು ತಾವು ಭದ್ರಪಡಿಸಿಕೊಳ್ಳುತ್ತಿದ್ದು, ಸ್ವಯಂ ವ್ಯಾಪಾರ ಬಿರ್ವಹಿಸುತ್ತಿವೆ. ಇದರ ಪರಿಣಾಮವಾಗಿ, ಡಾಲರ್ ವ್ಯಾಪಾರವು ಈಗ ದ್ವಿಪಕ್ಷೀಯ ಕರೆನ್ಸಿ-ಆಧಾರಿತ ವಹಿವಾಟುಗಳಿಗೆ ಬದಲಾಗುತ್ತಿದೆ. ಇದು ದೇಶಗಳ ಡಾಲರ್ ನಿಕ್ಷೇಪ ಸಂಗ್ರಹಿಸಿಡುವ ಅಗತ್ಯತೆಯನ್ನು ಕಡಿಮೆ ಮಾಡುತ್ತದೆ.

ಡಾಲರ್, ಇಎಂ ಕರೆನ್ಸಿ

ಕಳೆದ ವರ್ಷ ಡಾಲರ್ ವಿರುದ್ಧ ಉದಯೋನ್ಮುಖ ಮಾರುಕಟ್ಟೆ (ಇಎಂ) ಕರೆನ್ಸಿಗಳ ಕುಸಿತವಾಗಿದ್ದರೂ, ಈ ಆರ್ಥಿಕತೆಗಳು ವಿಶೇಷವಾಗಿ ಚಿನ್ನದ ಸಂಗ್ರಹದಿಂದ ಲಾಭದಾಯಕವಾಗಿದ್ದವು. ಕಳೆದ ವರ್ಷ ಟರ್ಕಿ, ಅರ್ಜೆಂಟೈನಾ, ಬ್ರೆಜಿಲ್, ರಷ್ಯಾ ಅಥವಾ ಭಾರತದಲ್ಲಿ ಚಿನ್ನವನ್ನು ಹೊಂದಿದ್ದರೆ, ನೀವು ಸ್ಥಳೀಯ ಕರೆನ್ಸಿ ನಿಯಮಗಳನುಸಾರ ಅದ್ಭುತವಾದ ಆದಾಯವನ್ನು ಪಡೆದಿರುತ್ತಿದ್ದಿರಿ. ಆದ್ದರಿಂದ, ಕೇಂದ್ರೀಯ ಬ್ಯಾಂಕುಗಳಿಗೆ ಸಂಬಂಧಪಟ್ಟಂತೆ ಹೇಳುವುದಾದರೆ ಚಿನ್ನ ಸ್ವಲ್ಪ ಸಿಹಿಯಾದ ಜಾಗದಲ್ಲಿದೆ ಎಂದು ವಿಕ್ರಂ ಧವನ್ ಹೇಳುತ್ತಾರೆ.

Read more about: gold dollar rupee banking money
English summary

Gold is shining once again as central bankers go on a buying spree

Gold has lately been in the spotlight. And how! Its price has risen 11% from the lows of end-September.
Story first published: Thursday, February 7, 2019, 12:54 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more