For Quick Alerts
ALLOW NOTIFICATIONS  
For Daily Alerts

ಆರ್ಬಿಐ ರೆಪೋ ದರ ಶೇ. 6.25ಕ್ಕೆ ಇಳಿಕೆ

|

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಿಂದ ಶೇ. 6.25ಕ್ಕೆ ಕಡಿತಗೊಳಿಸಿದೆ. ಇದು ತಟಸ್ಥತೆಯ ನಿಲುವನ್ನು ಕೂಡ ಬದಲಾಯಿಸಿದೆ.

ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ವಿತ್ತೀಯ ನೀತಿ ಸಮಿತಿಯು ತನ್ನ ಆರನೇ ದ್ವೆಮಾಸಿಕ ವಿತ್ತೀಯ ಸಭೆಯಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ. ಪರಿಣಾಮವಾಗಿ, ರಿವರ್ಸ್ ರೆಪೋ ದರ ಶೇ. 6.25 ರಿಂದ ಶೇ. 6ಕ್ಕೆ ಇಳಿದಿದೆ.

ಹೆಚ್ಚುವರಿಯಾಗಿ, ಆರ್ಬಿಐ 2019-20 ಕ್ಕೆ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ. 7.4 ಅಂದಾಜಿಸಿದೆ. 2019-20 ರ ವರ್ಷದ ಮೊದಲಾರ್ಧದಲ್ಲಿ ಹಣದುಬ್ಬರ ದರವು ಶೇ. 3.2-3.4 ಎಂದು ಅಂದಾಜಿಸಿದ್ದು, 2019-20 ರ ಮೂರನೇ ತ್ರೈಮಾಸಿಕದಲ್ಲಿ ಶೇ. 3.9ರಷ್ಟು ಹಣದುಬ್ಬರ ಅಂದಾಜಿಸಿದೆ.

ಆರ್ಬಿಐ ರೆಪೋ ದರ ಶೇ. 6.25ಕ್ಕೆ ಇಳಿಕೆ

 

17 ತಿಂಗಳಲ್ಲೇ ಆರ್ಬಿಐ ಮೊದಲ ಬಾರಿಗೆ ದರವನ್ನು ಕಡಿತಗೊಳಿಸಿದೆ. ಕೊನೆಯ ಬಾರಿ ರೆಪೋ ದರ ಕಡಿತ 2017 ರ ಆಗಸ್ಟ್ ತಿಂಗಳಲ್ಲಿ ನಡೆದಿತ್ತು.

ಎಂಎಸ್ಎಫ್ (marginal standing facility) ದರ ಮತ್ತು ಬ್ಯಾಂಕ್ ದರವು 6.5 ಪ್ರತಿಶತಕ್ಕೆ ಇಳಿದಿದೆ.

ಹಣಕಾಸು ನೀತಿ ಸಮಿತಿಯು (ಎಂಪಿಸಿ) ಲಿಕ್ವಿಡಿಟಿ ಅಡ್ಜಸ್ಟ್‍ಮೆಂಟ್ ಫೆಸಿಲಿಟಿ (ಎಲ್ಎಫ್ಎಫ್) ಅಡಿಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ನಲ್ಲಿ 6 ಶೇ. 6.5 ರಿಂದ ಶೇ. 6.25 ಕ್ಕೆ ಇಳಿಸಿದೆ.

English summary

RBI cuts repo rate by 25 bps to 6.25%

The monetary policy committee cut repo rates by 25 basis points to 6.25 percent in its sixth bi-monthly monetary policy.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more