For Quick Alerts
ALLOW NOTIFICATIONS  
For Daily Alerts

ರೆಪೋ ದರ ಎಫೆಕ್ಟ್: ಗೃಹ, ವಾಹನ, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೊನೆಗೂ 17 ತಿಂಗಳ ನಂತರ ಮೊದಲ ಬಾರಿಗೆ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಇಳಿಸಿದ್ದು, ಹೊಸ ರೆಪೋ ದರ ಶೆ. 6.25 ರಷ್ಟಿದೆ. ರೆಪೋ ದರ ಇಳಿಯುತ್ತಿದ್ದಂತೆ ರಿವರ್ಸ್ ರೆಪೋ ದರ ಕೂಡ ಶೇ. 6.25 ರಿಂದ ಶೇ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೊನೆಗೂ 17 ತಿಂಗಳ ನಂತರ ಮೊದಲ ಬಾರಿಗೆ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಇಳಿಸಿದ್ದು, ಹೊಸ ರೆಪೋ ದರ ಶೆ. 6.25 ರಷ್ಟಿದೆ. ರೆಪೋ ದರ ಇಳಿಯುತ್ತಿದ್ದಂತೆ ರಿವರ್ಸ್ ರೆಪೋ ದರ ಕೂಡ ಶೇ. 6.25 ರಿಂದ ಶೇ. 6ಕ್ಕೆ ಇಳಿದಿದೆ.

 

ಆರ್ಬಿಐ ರೆಪೋ ದರ ಕಡಿಮೆಗೊಳಿಸಿರುವುದು ಜನಸಾಮಾನ್ಯರಿಗೆ ಸಂತಸದ ಸಂಗತಿಯಾಗಿದೆ. ಇದರಿಂದಾಗಿ ಗೃಹ, ವಾಹನ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿದರದಲ್ಲೂ ಇಳಿಕೆ ಆಗಲಿದೆ.

ಇಎಂಐ ಇಳಿಕೆ

ಇಎಂಐ ಇಳಿಕೆ

ರೆಪೋ ದರ ಕಡಿತ ಗೃಹ, ವಾಹನ, ಕಾರು ಮತ್ತು ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಇಳಿಕೆಗೆ ಕಾರಣವಾಗುತ್ತದೆ. ಏಕೆಂದರೆ ಬ್ಯಾಂಕುಗಳು ಬಡ್ಡಿದರವನ್ನು ಕಡಿಮೆಗೊಳಿಸುವುದರಿಂದ ಸಾಲಗಾರರು ಪಾವತಿಸಬೇಕಾಗುವ ಇಎಂಐ ಇಳಿಕೆಯಾಗುತ್ತದೆ.

ಸಾಲಗಾರರಿಗೆ ಲಾಭ

ಸಾಲಗಾರರಿಗೆ ಲಾಭ

ಗೃಹ ಮತ್ತು ವಾಹನ ಸಾಲಗಳು ಆರ್ಬಿಐನ ರೆಪೋ ದರಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಆರ್ಬಿಐ ರೆಪೋ ದರ ಕಡಿಮೆಯಾದಾಗ ಬ್ಯಾಂಕುಗಳು ಸಾಲಗಾರರಿಗೆ ಕಡಿಮೆ ಬಡ್ಡಿದರ ವಿಧಿಸುತ್ತವೆ. ರೆಪೋ ದರ ಇಳಿಯುತ್ತಿದ್ದಂತೆ ಬ್ಯಾಂಕುಗಳ ಎಂಸಿಎಲ್ಆರ್ ಕೂಡ ಕಡಿಮೆಯಾಗುತ್ತದೆ. ಅಂತಿಮವಾಗಿ ಇದರ ಲಾಭ ಸಾಲಗಾರರಿಗೆ ಲಭಿಸುತ್ತದೆ.

ರೆಪೋ ದರ ಕಡಿತದ ಪರಿಣಾಮ
 

ರೆಪೋ ದರ ಕಡಿತದ ಪರಿಣಾಮ

ಆರ್ಬಿಐ ರೆಪೋ ದರ ಕಡಿತಗೊಳಿಸಿದ್ದರಿಂದ ಬ್ಯಾಂಕುಗಳು ಕೂಡ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಲಿವೆ. ರೆಪೋ ದರ ಇಳಿಕೆ ಹೇಗೆ ಸಾಲದ ಇಎಂಐ ಮೇಲೆ ಪರಿಣಾಮ ಬೀರುತ್ತದೆ ನೋಡೋಣ ಬನ್ನಿ..
ಗೃಹ ಸಾಲದ ಮೊತ್ತ: 3000000
ಅವಧಿ (ವರ್ಷಗಳಲ್ಲಿ): 20
ಪ್ರಸ್ತುತ ಬಡ್ಡಿದರ (ಶೇಕಡಾ) : 8.8
ಪ್ರಸ್ತುತ ಇಎಂಐ(ರೂ.): 26607.10
ಹೊಸ ಬಡ್ಡಿದರ (ಶೇಕಡಾ) : 8.55
ಹೊಸ ಇಎಂಐ (ರೂ.) : 26129.71
ಇಎಂಐನಲ್ಲಿ ಕಡಿತ (ರೂ.) : 477.39

English summary

RBI Repo Rate Effect: Home Loan, Car Loan, Personal Loan EMIs to cost less

RBI Repo Rate Cut: After months of maintaining status quo over the key lending rate, the RBI today finally announced a Repo Rate Cut by 0.25%.
Story first published: Thursday, February 7, 2019, 14:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X