ಕಾಂಗ್ರೆಸ್ - ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಒಂದೇಡೆ ರಾಜಕೀಯ ಅನಿಶ್ಚಿತತೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಬಜೆಟ್ ಮಂಡನೆಗೆ ಸಿದ್ದತೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಒಂದೇಡೆ ರಾಜಕೀಯ ಅನಿಶ್ಚಿತತೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಬಜೆಟ್ ಮಂಡನೆಗೆ ಸಿದ್ದತೆ ಮಾಡಿಕೊಂಡಿದ್ದಾರೆ.
ಸಮ್ಮಿಶ್ರ ಸರ್ಕಾರ ಕೆಡವಬೇಕು ಎಂಬ ಬಿಜೆಪಿಯ ತಂತ್ರಗಾರಿಕೆಗೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ಪ್ರತಿತಂತ್ರ ಹೂಡಿದ್ದಾರೆ ಎನ್ನಲಾಗಿದೆ.
ಬಜೆಟ್ ಲೆಕ್ಕಾಚಾರ ಹಾಗು ಸರ್ಕಾರ ಉಳಿಸುವ/ಉರುಳಿಸುವ ಲೆಕ್ಕಾಚಾರ ಹೇಗಿರುತ್ತದೆ ಕಾದು ನೋಡೋಣ ಎಂಬುದು ರಾಜ್ಯದ ಜನತೆಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅದೇನೆ ಇರಲಿ ಎಚ್.ಡಿ. ಕುಮಾರಸ್ವಾಮಿಯವರು ಬಜೆಟ್ ಮಂಡನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..
ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ
ರೈತರ ಸಾಲಮನ್ನಾ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಈ ಬಜೆಟ್ ನಲ್ಲೂ ಕೂಡ ಕೃಷಿ ವಲಯಕ್ಕೆ ವಿಶೇಷ ಕೊಡುಗೆ ನೀಡುವ ನಿರೀಕ್ಷೆಯನ್ನು ಅಲ್ಲಗಳೆಯುವಂತಿಲ್ಲ.
ಕೇಂದ್ರದ ಫಸಲ್ ವಿಮಾ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ಹೊಸ ವಿಮಾ ಯೋಜನೆಯನ್ನು ಘೋಷಿಸುವ ನಿರೀಕ್ಷೆ ಇದೆ.
ಪೂರ್ವಭಾವಿ ಚರ್ಚೆ
ಕರ್ನಾಟಕ ಬಜೆಟ್ 2019ರ ಪೂರ್ವಭಾವಿಯಾಗಿ ಕುಮಾರಸ್ವಾಮಿಯವರು ರೈತರು ಹಾಗು ವಿವಿಧ ವಲಯಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಬಜೆಟ್ ರೂಪುರೇಷೆಗಳನ್ನು ತಯಾರಿಸಿದ್ದಾರೆ. ಜನಸಾಮಾನ್ಯರು ಒಳಗೊಂಡಂತೆ ಎಲ್ಲಾ ವರ್ಗದವರಿಗೂ ಭರಪೂರ ಕೊಡುಗೆ ನೀಡುವ ನಿರೀಕ್ಷೆ ಇದೆ ಎನ್ನಲಾಗಿದೆ.
ಬಜೆಟ್ ಕುತೂಹಲ
ಸರ್ಕಾರ ಉರುಳಿಸುವ ಹಾಗು ಸರ್ಕಾರ ಉಳಿಸುವ ರಾಜಕೀಯ ಬೆಳವಣಿಗೆಗಳು ಬಜೆಟ್ ಮಂಡನೆಗೆ ಧಕ್ಕೆ ತರಬಹುದೇ ಎಂಬ ಕುತೂಹಲ ತೀವ್ರವಾಗಿದೆ. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಉರುಳಬಹುದು. ಇದಕ್ಕೆ ಪರ್ಯಾಯವಾಗಿ ಸಮ್ಮಿಶ್ರ ಸರ್ಕಾರ ಬಿಜೆಪಿ ಶಾಸಕರಿಂದ ರಾಜೀನಾಮೆ ಕೊಡಿಸಿ ಅವರ ಬಲ ಕುಗ್ಗಿಸಲು ಸಿದ್ದವಾಗಿದೆ.


Click it and Unblock the Notifications