ವಾಣಿಜ್ಯ, ಕೈಗಾರಿಕೆ ಮತ್ತು ತಂತ್ರಜ್ಞಾನ ವಲಯಕ್ಕೆ ಕುಮಾರಸ್ವಾಮಿ ಘೋಷಣೆಗಳೇನು?

ಬೆಂಗಳೂರು, ಫೆಬ್ರವರಿ 8: ನೂತನ ಕೈಗಾರಿಕಾ ನೀತಿ, ಕಾಂಪೀಟ್ ವಿತ್ ಚೈನಾ ಯೋಜನೆ, ಎಂ.ಎಸ್.ಎಂ.ಇ. - ಸಾರ್ಥಕ್, ಕಲ್ಪವೃಕ್ಷ ಕಾಯಕ - ಸಮಗ್ರ ತೆಂಗಿನ ನಾರಿನ ನೀತಿ ಯೋಜನೆ ಸೇರಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿವಿಧ ಘೋಷಣೆಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಮುಂದಿನ ವರ್ಷದ ಜನವರಿಯಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಪ್ರಗತಿ ತರಲು ಅವರು ಉದ್ದೇಶಿಸಿದ್ದು, ಮಾಹಿತಿ ತಂತ್ರಜ್ಞಾನ ಪಾಲಿಸಿಯಲ್ಲಿ ಬದಲಾವಣೆ ಮಾಡಲು ಬಯಸಿದ್ದಾರೆ. ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕೆ ತುಮಕೂರಿನಲ್ಲಿ ನಾವೀನ್ಯತೆ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದಾರೆ.

ಮೈಸೂರ್ ಶುಗರ್ ಕಾರ್ಖಾನೆಯನ್ನು ನವೀಕರಿಸಲು 100 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಮಂಡ್ಯ ಜಿಲ್ಲೆಯ ಸಮಗ್ರ ಕೈಗಾರಿಕಾ ಅಭಿವೃದ್ಧಿ ಹಾಗೂ ಜಿಲ್ಲೆಯ ಸುತ್ತಮುತ್ತ ಉದ್ಯೋಗಾವಕಾಶ ಸೃಜಿಸಲು 50 ಕೋಟಿ ರೂ.ಗಳ ಪ್ಯಾಕೇಜ್ ಅನ್ನು ಘೋಷಣೆ ಮಾಡಲಾಗಿದೆ.

ಬಜೆಟ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ, ಗಣಿ ಮತ್ತು ಭೂವಿಜ್ಞಾನ ಹಾಗೂ ಮಾಹಿತಿ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಿಗೆ ಅವರು ಮಾಡಿರುವ ಘೋಷಣೆಗಳ ವಿವರ ಇಲ್ಲಿದೆ.

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್

ತುಮಕೂರು ಜಿಲ್ಲೆಯ ವಸಂತನರಸಾಪುರದ 9,629 ಎಕರೆ ಪ್ರದೇಶದಲ್ಲಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯಡಿ "ತುಮಕೂರು ಕೈಗಾರಿಕಾ ನೋಡ್"ನ್ನು ಅಭಿವೃದ್ಧಿಗೆ ಕ್ರಮ. ಇದರಿಂದ ಪ್ರಸ್ತಾವಿತ 50,000 ಕೋಟಿ ರೂ.ವರೆಗೆ ಬಂಡವಾಳ ಹೂಡಿಕೆಯಾಗಲಿದ್ದು, 2 ಲಕ್ಷ ಜನರಿಗೆ ಉದ್ಯೋಗಾವಕಾಶದ ನಿರೀಕ್ಷೆ. ವಸಂತನರಸಾಪುರ, ತುಮಕೂರು ಹಾಗೂ ರಾಮನಗರ ಮತ್ತು ಬೆಂಗಳೂರು ನಡುವೆ ಪ್ರತ್ಯೇಕ ಟ್ರಾಕ್‌ಗಳ ಮೇಲೆ ರೇಲ್ ಆಧಾರಿತ ಸಮರ್ಥ ಮತ್ತು ಅನುಕೂಲಕರ ಸಾಮೂಹಿಕ ಸಾಗಾಣಿಕೆ ವ್ಯವಸ್ಥೆ ಸ್ಥಾಪನೆಗೆ ಕ್ರಮ.

ನೂತನ ಕೈಗಾರಿಕಾ ನೀತಿ

ನೂತನ ಕೈಗಾರಿಕಾ ನೀತಿ

ನೂತನ ಕೈಗಾರಿಕಾ ನೀತಿ ಜಾರಿ; ಹಿಂದುಳಿದ ಪ್ರದೇಶಗಳು ಮತ್ತು ಟೈರ್ 2 ಮತ್ತು 3 ಕೇಂದ್ರಗಳಿಗೆ ಬಂಡವಾಳ ಆಕರ್ಷಣೆ, ವಿನೂತನ ತಂತ್ರಜ್ಞಾನ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶವಿರುವ ವಲಯಗಳಿಗೆ ಆದ್ಯತೆ.

ಕಾಂಪೀಟ್ ವಿತ್ ಚೈನಾ ಯೋಜನೆ ಅನುಷ್ಠಾನಕ್ಕೆ 2019-20ರಲ್ಲಿ 110 ಕೋಟಿ ರೂ. ಅನುದಾನ.

ಜನವರಿ-2020ರಲ್ಲಿ ಬೆಂಗಳೂರಿನಲ್ಲಿ "ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ" ಆಯೋಜಿಸಲು ಕ್ರಮ.

ಕೈಗಾರಿಕಾ ಪ್ರದೇಶ ಅಭಿವೃದ್ಧಿ

ಕೈಗಾರಿಕಾ ಪ್ರದೇಶ ಅಭಿವೃದ್ಧಿ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಹಾಸನ ಜಿಲ್ಲೆಯ ಅರಸೀಕೆರೆ, ಮಂಡ್ಯ ಜಿಲ್ಲೆಯ ನಾಗಮಂಗಲ, ಕಲಬುರಗಿ ಜಿಲ್ಲೆಯ ಚಿತ್ತಾಪುರ, ವಿಜಯಪುರ ಜಿಲ್ಲೆಯ ಮುಳವಾಡ, ಬೆಳಗಾವಿ ಜಿಲ್ಲೆಯ ಕಣಗಲಾ ಮತ್ತು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಲ್ಲಿ ಎದುರಾಗುವ ತೊಂದರೆ ನಿವಾರಣೆಗೆ "ಎಂ.ಎಸ್.ಎಂ.ಇ. - ಸಾರ್ಥಕ್" ಯೋಜನೆ ಜಾರಿಗೆ 5 ಕೋಟಿ
ರೂ. ಅನುದಾನ.

ಕಲ್ಪವೃಕ್ಷ ಕಾಯಕ ನೀತಿ

ಕಲ್ಪವೃಕ್ಷ ಕಾಯಕ ನೀತಿ

ತೆಂಗಿನ ನಾರಿನ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ‘ಕಲ್ಪವೃಕ್ಷ ಕಾಯಕ - ಸಮಗ್ರ ತೆಂಗಿನ ನಾರಿನ ನೀತಿ' ಜಾರಿಗೆ ಕ್ರಮ; ಇದಕ್ಕಾಗಿ 80 ಕೋಟಿ ರೂ. ಅನುದಾನ.

ರಾಷ್ಟ್ರ ಮಟ್ಟದ ಡಿಸೈನ್ ಸಂಸ್ಥೆಗಳ ಸಹಯೋಗದೊಂದಿಗೆ ಡಿಸೈನ್ ಕ್ಲಿನಿಕ್‌ಗಳನ್ನು ಸ್ಥಾಪಿಸಲು 2 ಕೋಟಿ ರೂ. ಅನುದಾನ.

ವಿದ್ಯುತ್ ಮಗ್ಗಗಳ ಘಟಕಕ್ಕೆ ಅಕೋಸ್ಟಿಕ್ ಉಪಕರಣಗಳ ಅಳವಡಿಕೆಗೆ ಶೇ.75ರಷ್ಟು ಸಹಾಯಧನ ನೀಡಲು 5 ಕೋಟಿ ರೂ. ಅನುದಾನ.

ಸೀವಿಂಗ್ ಮೆಷಿನ್ ಅಪರೇಟರ್ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಖರೀದಿಗೆ ಶೇ 50ರಷ್ಟು ಸಹಾಯಧನ ನೀಡಲು 2 ಕೋಟಿ ರೂ. ಅನುದಾನ.

ಮೈಸೂರ್ ಶುಗರ್ ಕಾರ್ಖಾನೆ ನಿರ್ಮಾಣ

ಮೈಸೂರ್ ಶುಗರ್ ಕಾರ್ಖಾನೆ ನಿರ್ಮಾಣ

ಮಂಡ್ಯದ ಮೈಸೂರ್ ಶುಗರ್ ಕಾರ್ಖಾನೆಯನ್ನು ಹೊಸದಾಗಿ ನಿರ್ಮಿಸಿ, ಡಿಸ್ಟಿಲರಿ ಘಟಕ, ಸಕ್ಕರೆ ಘಟಕ, ಬಾಯ್ಲಿಂಗ್ ಹೌಸ್‌ನ ದುರಸ್ತಿ ಮತ್ತು ಎಥನಾಲ್ ಯಂತ್ರೋಪಕರಣಗಳು ಹಾಗೂ ಮೊಲಾಸಸ್ ಟ್ಯಾಂಕ್ ಅಳವಡಿಸಲು 100 ಕೋಟಿ ರೂ. ಅನುದಾನ.

ಕೈಗಾರಿಕಾ ಶೆಡ್‍ಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಪ್ರೋತ್ಸಾಹಧನ ನೀಡಲು 50 ಕೋಟಿ ರೂ. ಅನುದಾನ.

ಮಂಡ್ಯ ಜಿಲ್ಲೆಯ ಸಮಗ್ರ ಕೈಗಾರಿಕಾ ಅಭಿವೃದ್ಧಿ ಹಾಗೂ ಜಿಲ್ಲೆಯ ಸುತ್ತಮುತ್ತ ಉದ್ಯೋಗಾವಕಾಶ ಸೃಜಿಸಲು 50 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ.

ಬೆಂಗಳೂರಿನ ದೊಡ್ಡಬಿದರಕಲ್ಲು ಬಳಿ ಕಾವೇರಿ ಎಂಪೋರಿಯಂ ಒಡೆತನದ ಜಾಗದಲ್ಲಿ ಕಲಾಗ್ರಾಮ ನಿರ್ಮಿಸಿ, ಕರಕುಶಲಕರ್ಮಿಗಳಿಗೆ ಉತ್ತೇಜನ ನೀಡಲು ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು 10 ಕೋಟಿ ರೂ. ಅನುದಾನ.

ಗಣಿ ಮತ್ತು ಭೂವಿಜ್ಞಾನ ಕ್ಷೇತ್ರ

ಗಣಿ ಮತ್ತು ಭೂವಿಜ್ಞಾನ ಕ್ಷೇತ್ರ

ದೇಶದಲ್ಲೇ ಮೊದಲ ಬಾರಿಗೆ, ರಾಜ್ಯದ ಗಣಿ ಗುತ್ತಿಗೆಗಳಲ್ಲಿ 82 ಕೋಟಿ ರೂ. ಗಳಲ್ಲಿ ನೂತನ ಡ್ರೋನ್ ತಂತ್ರಜ್ಞಾನ ಮತ್ತು ಡಿಜಿಪಿಎಸ್ ತಂತ್ರಜ್ಞಾನ ಬಳಸಿ ಸಮೀಕ್ಷೆ ಕೈಗೊಳ್ಳಲು ಕ್ರಮ.

ಮಾಹಿತಿ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

ಮಾಹಿತಿ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

ರಾಜ್ಯದ "ಮಾಹಿತಿ ತಂತ್ರಜ್ಞಾನ ಪಾಲಿಸಿ" ಯ ಪರಿಷ್ಕರಣೆ; ದ್ವಿತೀಯ, ತೃತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಅವಕಾಶ.

ಸ್ಟಾರ್ಟ್‍ಅಪ್‌ಗಳಿಗೆ ಬೆಂಬಲ ಒದಗಿಸಲು ಪರಿಪೋಷಣಾ ಕೇಂದ್ರ (Incubation Centres) ಬಲಪಡಿಸುವುದು ಹಾಗೂ ಹೊಸ ಪರಿಪೋಷಣಾ ಕೇಂದ್ರಗಳ ಸ್ಥಾಪನೆ

ತುಮಕೂರಿನಲ್ಲಿ ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕೆ 7 ಕೋಟಿ ರೂ. ವೆಚ್ಚದಲ್ಲಿ ‘K-Tech ನಾವೀನ್ಯತೆ ಕೇಂದ್ರ (Innovation Hub) ಸ್ಥಾಪನೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+