ಲೋಕಸಭಾ ಚುನಾವಣಾ ಪೂರ್ವದ ಬಜೆಟ್ ಎಂಬ ಕಾರಣಕ್ಕೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಇನ್ನೊಂದೆಡೆ ಸರ್ಕಾರದ ಉಳಿಯುತ್ತಾ ಅಥವಾ ಬೀಳುತ್ತಾ, ಬಜೆಟ್ ಮಂಡನೆ ಯಸಶ್ವಿಯಾಗಿ ನಡೆಯುತ್ತಾ ಇತ್ಯಾದಿ ಪ್ರಶ್ನೆಗಳು ಕಾಡುತ್ತಿವೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಮಂಡಿಸಲಿರುವ ಸಮ್ಮಿಶ್ರ ಸರ್ಕಾರದ ಬಜೆಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ! ಲೋಕಸಭಾ ಚುನಾವಣಾ ಪೂರ್ವದ ಬಜೆಟ್ ಎಂಬ ಕಾರಣಕ್ಕೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಇನ್ನೊಂದೆಡೆ ಸರ್ಕಾರದ ಉಳಿಯುತ್ತಾ ಅಥವಾ ಬೀಳುತ್ತಾ, ಬಜೆಟ್ ಮಂಡನೆ ಯಶಸ್ವಿಯಾಗಿ ನಡೆಯುತ್ತಾ ಇತ್ಯಾದಿ ಪ್ರಶ್ನೆಗಳು ಕಾಡುತ್ತಿವೆ.
ಮೈತ್ರಿ ಸರ್ಕಾರದ ಎರಡನೆ ಬಜೆಟ್ ಮಂಡಿಸುತ್ತಿರುವ ಕುಮಾರಸ್ವಾಮಿಯವರು ಜನಪ್ರಿಯ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಹೆಚ್ಚಾಗಿದ್ದು, ಯಾವ ಯಾವ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಬಹುದು ನೋಡೋಣ ಬನ್ನಿ..
ಇಸ್ರೇಲ್ ಮಾದರಿ ಕೃಷಿ
ಶೂನ್ಯ ಬಂಡವಾಳ ಮತ್ತು ವಿಶೇಷ ಪ್ಯಾಕೇಜ್
ರೈತರಿಗೆ, ಸಣ್ಣ ಹಿಡುವಳಿದರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ. ಶೂನ್ಯ ಬಂಡವಾಳ ಕೃಷಿ ಪದ್ದತಿಗೆ ಉತ್ತೇಜನ ನೀಡಲಾಗುವುದು. ಮಹಿಳಾ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಹಾಗು ಉತ್ತರ ಕರ್ನಾಟಕ, ಕರಾವಳಿ ಭಾಗಕ್ಕೆ ಹೆಚ್ಚಿನ ಕೊಡುಗೆ ಘೋಷಣೆ ಸಾಧ್ಯತೆ.
ಸಂಪನ್ಮೂಲ ಕ್ರೋಢೀಕರಣ
ಕುಮಾರಸ್ವಾಮಿಯವರು ಆಂತರಿಕೆ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ನಿರೀಕ್ಷೆ ಇದೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಅನುದಾನ ಮೀಸಲು.
ಸರ್ಕಾರಿ ನೌಕರರಿಗೆ ಕೊಡುಗೆ
ಪ್ರಸ್ತುತ ಸರ್ಕಾರಿ ನೌಕರರಿಗಿರುವ ಅನುದಾನದಲ್ಲಿ ಹೆಚ್ಚಳ ಸಾಧ್ಯತೆಯಿದ್ದು, ನಿವೃತ್ತಿ ವಯೋಮಿತಿಯನ್ನು 60 ರಿಂದ 65 ವರ್ಷಕ್ಕೆ ಸಾಧ್ಯತೆ. ವೃದ್ದಾಪ್ಯ ಮತ್ತು ವಿಕಲಚೇತನ ಸೇರಿದಂತೆ ವಿವಿಧ ವರ್ಗಗಳಿಗೆ ನೀಡುತ್ತಿರುವ ಪಿಂಚಣಿ ಮೊತ್ತ ಹೆಚ್ಚಿಸುವುದು. ಅಂಗನವಾಡಿ ನೌಕರರ ವೇತನ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
ಶಿಕ್ಷಣ ಮತ್ತು ಆರೋಗ್ಯ
ಶಿಕ್ಷಣ ಕ್ಷೇತ್ರದಲ್ಲಿ ಒಂದು ಸಾವಿರ ಇಂಗ್ಲಿಷ ಶಾಲೆಗಳ ಆರಂಭ. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕಾಗಿ ೫೦೦ ಕೋಟಿ ಮೀಸಲು ಸಾಧ್ಯತೆ. ತಾಲೂಕು ಮಟ್ಟದ ಆಸ್ಪತ್ರೆಗಳ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ.
ಎಸ್ಸಿ, ಎಸ್ಟಿ ವರ್ಗಕ್ಕೆ ಕೊಡುಗೆ
ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ವಿಶೇಷ ಅನುದಾನ ನೀಡುವ ನಿರೀಕ್ಷೆ. ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಗಾಗಿ ಹಲವು ಯೋಜನೆಗಳು.


Click it and Unblock the Notifications