ಟಾಟಾ ಮೋಟಾರ್ಸ್ ಕಂಪನಿ ಷೇರು ಶುಕ್ರವಾರದಂದು ಭಾರೀ ಇಳಿಕೆ ಕಂಡಿದೆ. 30% ತನಕ ಕುಸಿತ ಕಂಡು, ಹೂಡಿಕೆದಾರರು ಭಾರೀ ನಷ್ಟ ಅನುಭವಿಸಿದ್ದಾರೆ. ಟಾಟಾ ಮೋಟಾರ್ಸ್ ಕಂಪನಿ ಡಿಸೆಂಬರ್ ತ್ರೈ ಮಾಸಿಕ ಅಂತ್ಯಕ್ಕೆ 26,961 ಕೋಟಿ ರುಪಾಯಿ ನಷ್ಟ ದಾಖಲಿಸಿದ್ದು, ಫಲಿತಾಂಶ ಬಂದ ಮರುದಿನ ಷೇರು ಮೌಲ್ಯ ಕುಸಿತವಾಗಿದೆ.
3.1 ಬಿಲಿಯನ್ ಪೌಂಡ್ ನಷ್ಟು ಜಾಗ್ವಾರ್ ಲ್ಯಾಂಡ್ ರೋವರ್ ನ ಆಸ್ತಿಗೆ ಸಂಬಂಧಿಸಿದ ಹಾಗೆ ಭಾರೀ ನಷ್ಟವಾಗಿದೆ. ಈ ಕಾರಣಕ್ಕೆ ತಜ್ಞರು ಅಂದಾಜಿಸುವ ಪ್ರಕಾರ, ಕಂಪನಿಯ ಆದಾಯ 25% ತನಕ ಗಳಿಕೆ ಕಡಿಮೆ ಆಗಬಹುದು. ಇಂಥ ಸುದ್ದಿ ಕಂಪನಿ ಷೇರಿನ ಮೇಲೆ ಪರಿಣಾಮ ಬೀರಿದೆ.
ಶುಕ್ರವಾರದಂದು ಟಾಟಾ ಮೋಟಾರ್ಸ್ ಷೇರು ಎನ್ ಎಸ್ ಇಯಲ್ಲಿ 29.45%ನಷ್ಟು ಕುಸಿದು 129 ರುಪಾಯಿ ತಲುಪಿ, ವಾರ್ಷಿಕ ಕನಿಷ್ಠ ಮಟ್ಟವನ್ನು ದಾಖಲಿಸಿತು. ಇನ್ನು ಸೆನ್ಸೆಕ್ಸ್ ನಲ್ಲಿ 22.41% ಕುಸಿದು, 141.90 ರುಪಾಯಿ ತಲುಪಿತ್ತು. 1993ರ ನಂತರ ಟಾಟಾ ಮೋಟಾರ್ಸ್ ಕಂಪನಿಯು ಒಂದೇ ದಿನದಲ್ಲಿ ದಾಖಲಿಸಿದ ಗರಿಷ್ಠ ಕುಸಿತ ಇದು.

1993ರ ಫೆಬ್ರವರಿ 2ನೇ ತಾರೀಕಿನಂದು ಟಾಟಾ ಮೋಟಾರ್ಸ್ ಕಂಪನಿಯು 40.50% ಕುಸಿತ ಕಂಡಿತ್ತು. ಮಧ್ಯಾಹ್ನ ಎರಡು ಗಂಟೆ ವೇಳೆಗೆ ಟಾಟಾ ಮೋಟಾರ್ಸ್ ಕಂಪನಿಯ ಷೇರು ಬಿಎಸ್ ಇಯಲ್ಲಿ 152 ರುಪಾಯಿ ಹಾಗೂ ಎನ್ ಎಸ್ ಇಯಲ್ಲಿ 151.90 ರುಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಷೇರು ಮಾರುಕಟ್ಟೆ ಹೂಡಿಕೆದಾರರೇ, ಈ ವಾರ ಎಚ್ಚರ ತಪ್ಪಿದರೆ ನಷ್ಟ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications