For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಎಟಿಎಂ ಕಾರ್ಡುದಾರರಿಗೆ ಬ್ಯಾಂಕಿನಿಂದ ಖಡಕ್ ಎಚ್ಚರಿಕೆ!

ಬ್ಯಾಂಕಿಂಗ್ ವಲಯದಲ್ಲಿ ವಂಚನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ.

|

ಬ್ಯಾಂಕಿಂಗ್ ವಲಯದಲ್ಲಿ ವಂಚನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ.

ಡಿಜಿಟಲೀಕರಣ, ಇ-ಕಾಮರ್ಸ್ ಮತ್ತು ಸ್ಮಾರ್ಟ್ ಫೋನ್ ಪ್ರಭಾವದಿಂದಾಗಿ ಆನ್ಲೈನ್ ಬ್ಯಾಂಕಿಂಗ್ ವ್ಯವಹಾರ ಸುಲಭವಾಗಿರುವಂತೆ, ಆನ್ಲೈನ್ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.

ಕಾರ್ಡ್ ಸ್ಕಿಮ್ಮಿಂಗ್

ಕಾರ್ಡ್ ಸ್ಕಿಮ್ಮಿಂಗ್

ರೆಸ್ಟೋರೆಂಟ್, ಬಾರ್, ಕೌಂಟರ್, ಗ್ಯಾಸ್ ಕೇಂದ್ರ, ರಿಟೇಲ್ ಕೌಂಟರ್ ಗಳಲ್ಲಿ ಎಟಿಎಂ ಕಾರ್ಡ್ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳ ಡೇಟಾ ಕದಿಯುವ ಮೂಲಕ ವಂಚಕರು ಗ್ರಾಹಕರ ಹಣ ಲಪಟಾಯಿಸುತ್ತಿದ್ದಾರೆ. ಇದಕ್ಕಾಗಿ ಸ್ಕಿಮ್ಮಿಂಗ್ ವಂಚನೆ ಬಗ್ಗೆ ಎಸ್ಬಿಐ ಎಚ್ಚರಿಕೆ ನೀಡಿದೆ.

ದೂರು ನೀಡಿದರೆ ಹಣ ವಾಪಸ್

ದೂರು ನೀಡಿದರೆ ಹಣ ವಾಪಸ್

ತನ್ನ ಗ್ರಾಹಕರಿಗೆ ಮಹತ್ವದ ಸೂಚನೆ ನಿಡಿರುವ ಎಸ್ಬಿಐ, ಎಟಿಎಂ ಸ್ಕಿಮ್ಮಿಂಗ್ ನಿಂದಾಗಿ ಗ್ರಾಹಕರು ಹಣ ಕಳೆದುಕೊಂಡರೆ ಈ ಬಗ್ಗೆ ದೂರು ನೀಡಿದ ಮೂರು ದಿನಗಳಲ್ಲಿ ಹಣ ವಾಪಸ್ ಮಾಡಲಾಗುತ್ತದೆ ಎಂದು ಹೇಳಿದೆ. ಎಟಿಎಂ ಕಾರಣಕ್ಕಾಗಿ ಹಣ ಕಳೆದುಕೊಂಡರೆ ಎಸ್ಬಿಐ ಪೂರ್ಣ ಹಣ ಪಾವತಿಸಲಿದೆ. ಗ್ರಾಹಕರ ನಿರ್ಲಕ್ಷದಿಂದ ಹಣ ಕಳುವಾದರೆ ಬ್ಯಾಂಕ್ ಹೊಣೆಯಲ್ಲ ಎಂದು ಎಸ್ಬಿಐ ಹೇಳಿದೆ.

ಹಣ ಕಳೆದುಕೊಂಡರೆ ಏನು ಮಾಡಬೇಕು?
 

ಹಣ ಕಳೆದುಕೊಂಡರೆ ಏನು ಮಾಡಬೇಕು?

ವಂಚಕರಿಂದ ಹಣ ಕಳೆದುಕೊಂಡ ಗ್ರಾಹಕರು ನೇರವಿಗಾಗಿ ಕಾಲ್ ಸೆಂಟರ್ ೨೪ ಗಂಟೆಗಲ ಕಾಲ ಕಾರ್ಯನಿರತವಾಗಿರುತ್ತದೆ.
- ಗ್ರಾಹಕರು ಫೋನ್, ಎಸ್ಎಂಎಸ್ ಅಥವಾ ಟ್ವಿಟ್ಟರ್ ಮೂಲಕ ದೂರು ದಾಖಲಿಸಬಹುದಾಗಿದೆ.
- [email protected]ಗೆ ಬರಹದ ಮೂಲಕ ದೂರು ಸಲ್ಲಿಸಬಹುದು.
- ಎಸ್ಎಂಎಸ್ ಮೂಲಕ ದೂರು ದಾಖಲಿಸುವವರು Problem ಎಂದು ಟೈಪ್ ಮಾಡಿ 9212500888 ಗೆ ಕಳುಹಿಸಬೇಕಾಗುತ್ತದೆ.
- ಟ್ವಿಟ್ಟರ್ ಮೂಲಕ ದೂರು ದಾಖಲಿಸುವವರು ಈ ಕುರಿತ ಎಸ್.ಬಿ.ಐ. ಟ್ವಿಟ್ಟರ್ ಹ್ಯಾಂಡಲ್ ಅಕೌಂಟ್ ( Twitter@SBICard_Connect) ಮೂಲಕ ಸಂಪರ್ಕಿಸಬೇಕು.

Read more about: sbi banking frauds money
English summary

SBI Alert! State Bank of India warns Its ATM cardholders

SBI has warned the cardholders of skimming fraud, which is an act of illegally coping data from the magnetic stripe of a credit, debit or ATM card.
Story first published: Monday, February 11, 2019, 12:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X