ಆಹಾರ ಪದಾರ್ಥಗಳ ಆರ್ಡರ್ ತೆಗೆದುಕೊಂಡು, ಡೆಲಿವರಿ ಮಾಡುವ ಸ್ವಿಗ್ಗಿ ಹೊಸದಾಗಿ ಸ್ವಿಗ್ಗಿ ಸ್ಟೋರ್ಸ್ ಆರಂಭಿಸಿದೆ ಎಂದು ಮಂಗಳವಾರ ಹೇಳಿದೆ. ಇಷ್ಟು ಕಾಲ ಆಹಾರ ಪದಾರ್ಥಗಳ ಡೆಲಿವರಿ ಮಾತ್ರ ಅದರ ಮುಖ್ಯ ವ್ಯವಹಾರ ಆಗಿತ್ತು. ವಿವಿಧ ವಿಭಾಗಗಳಲ್ಲಿನ್ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ ಅವುಗಳನ್ನು ತಲುಪಿಸುವ ಕೆಲಸವನ್ನಷ್ಟೇ ಸ್ವಿಗ್ಗಿ ಮಾಡುತ್ತಿತ್ತು.
ಇದೀಗ ಸ್ವತಃ ಸ್ವಿಗ್ಗಿಯೇ ಸ್ಟೋರ್ ಗಳನ್ನು ತೆರೆದು, ಹಣ್ಣು, ತರಕಾರಿ ದಿನಸಿ ವಸ್ತುಗಳು, ಬೇಬಿ ಕೇರ್, ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳು ಸೇರಿ ನಾನಾ ಬಗೆಯ ವಸ್ತುಗಳ ಮಾರಾಟ ಮಾಡಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ವಿಗ್ಗಿ ಹೇಳಿದೆ.
ಈ ರೀತಿಯ ಸ್ಟೋರ್ಸ್ ಆರಂಭಿಸುವ ಮೂಲಕ ನಗರದಲ್ಲಿನ ಎಲ್ಲ ಮಳಿಗೆಗಳ ವಸ್ತುಗಳು ಒಂದೇ ಕಡೆ ಸಿಗುವಂಥ ಅಪ್ಲಿಕೇಷನ್ ಇದಾಗಲಿದೆ. "ಇಂದಿನ ಘೋಷಣೆ ಮೂಲಕ ಸ್ವಿಗ್ಗಿಯನ್ನು ಆಹಾರ ಪದಾರ್ಥಗಳ ಆಚೆಗೂ ವ್ಯಾಪಿಸುವಂತೆ ಮಾಡಲಿದೆ. ಈಗ ಹೇಗೆ ಗ್ರಾಹಕರಿಗೆ ಅದ್ಭುತವಾದ ಸೇವೆ ಒದಗಿಸುತ್ತಿದ್ದೇವೋ ಅದೇ ರೀತಿಯಲ್ಲಿ ಅವರ ದೈನಂದಿನ ಅಗತ್ಯಗಳಿಗೆ ಸ್ಪಂದಿಸುತ್ತೇವೆ" ಎಂದು ಸ್ವಿಗ್ಗಿಯ ಸಿಇಒ ಶ್ರೀಹರ್ಷ ಮಜೇಟಿ ಹೇಳಿದ್ದಾರೆ.

ಸ್ವಿಗ್ಗಿಯ ದೂರದರ್ಶಿತ್ವಕ್ಕೆ ಇದೊಂದು ಮೈಲುಗಲ್ಲು. ನಗರವಾಸಿ ಗ್ರಾಹಕರಿಗೆ ರಾಜಿಯಾಗದಂಥ ಸೇವೆ ಒದಗಿಸಲಿದೆ ಎಂದು ಅವರು ಸೇರಿಸಿದ್ದಾರೆ. ಈಗಾಗಲೇ ಸ್ವಿಗ್ಗಿ ಜತೆಗೆ ಭಾಗೀದಾರರಾಗಿರುವವರಿಗೆ ಆದಾಯಕ್ಕೆ ಇನ್ನೂ ಹೆಚ್ಚಿನ ಅವಕಾಶ ದೊರೆತಂತಾಗುತ್ತದೆ ಎಂದು ಸೇರಿಸಿದ್ದಾರೆ. 2014ರಲ್ಲಿ ಆರಂಭವಾದ ಸ್ವಿಗ್ಗಿ ಜತೆಗೆ 80ಕ್ಕೂ ಹೆಚ್ಚು ನಗರಗಳಲ್ಲಿ 60 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್ ಗಳು ಗ್ರಾಹಕರಿಗೆ ಸೇವೆ ನೀಡುತ್ತಿವೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications