ಪುಲ್ವಾಮಾ ಸಿ.ಆರ್.ಪಿ.ಎಫ್ ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ.
ಪುಲ್ವಾಮಾ ಸಿ.ಆರ್.ಪಿ.ಎಫ್ ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಪುಲ್ವಾಮ ಉಗ್ರರ ದಾಳಿ ಖಂಡಿಸಿ ಹಾಗು ಮೃತ ಯೋಧರ ಶೃದ್ಧಾಂಜಲಿ ಸಲ್ಲಿಸುವ ಸಲುವಾಗಿ ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಮಾರುಕಟ್ಟೆ ಬಂದ್ ಗೆ ದೇಶವ್ಯಾಪಿ ಕರೆ ನೀಡಿದೆ.
ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ವಾಣಿಜ್ಯ ಮಾರುಕಟ್ಟೆಗಳು, ದೆಹಲಿಯ ಎಲ್ಲ ಸಗಟು ಹಾಗೂ ರಿಟೇಲ್ ಮಾರುಕಟ್ಟೆ ಹಾಗು ಯಾವುದೇ ವಹಿವಾಟು ಚಟುವಟಿಕೆಗಳು ಸೋಮವಾರ ನಡೆಯುವುದಿಲ್ಲ ಎಂದು ಸಿಎಐಟಿ ಹೇಳಿದೆ.
ಇದೇ ಸಂದರ್ಭದಲ್ಲಿ ವ್ಯಾಪಾರಿಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಶೃದ್ಧಾಂಜಲಿ ಮೆರವಣಿಗೆಗಳನ್ನು ನಡೆಸಲಿದ್ದಾರೆ. ಮಡಿದ ಯೋಧರಿಗೆ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಲು ಒಕ್ಕೂಟ ಆಲೋಚಿಸಿದೆ. ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ
ದೇಶವ್ಯಾಪಿ ಸೋಮವಾರದ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದ್ದು, ಶಾಂತಿಯುತವಾಗಿರಲಿದೆ. ಜನಜೀವನಕ್ಕೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು. ಕೇವಲ ಅಂಗಡಿ ಮಳಿಗೆಗಳು ಮುಚ್ಚಲಾಗುವುದೇ ಹೊರತು, ಬಸ್ ಸಂಚಾರಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ.
ಬಂದ್ ಗೆ ಬೆಂಬಲ
ದೇಶವ್ಯಾಪಿ ಬಂದ್ ಗೆ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಉತ್ತರಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಲ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರದ ವರ್ತಕರು ಬೆಂಬಲಿಸಿದ್ದಾರೆ.
ಚೀನಾ ಸರಕುಗಳಿಗೆ ಬಹಿಷ್ಕಾರ
ಭಯೋತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸುವ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಚೀನಾ ದೇಶದ ವಸ್ತುಗಳನ್ನು ನಿಷೇಧಿಬೇಕು ಎನ್ನುವ ರಾಷ್ಟ್ರವ್ಯಾಪಿ ಆಂದೋಲನವನ್ನು ಸಿಎಐಟಿ ಹಮ್ಮಿಕೊಳ್ಳಲಿದೆ ಎಂದು ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.


Click it and Unblock the Notifications