For Quick Alerts
ALLOW NOTIFICATIONS  
For Daily Alerts

ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?

ಭಾರತ ಪಾಕ್ ನಡುವೆ ಯುದ್ದ ಸಂಭವಿಸಿದರೆ ಪರಿಣಾಮಗಳೇನಾಗಬಹುದು? ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರಬಹುದು?

|

ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ ನಂತರ, ದಾಳಿಗೆ ಕಾರಣರಾದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಆದರೆ ಅದು ಯಾವಾಗ, ಎಲ್ಲಿ, ಹೇಗೆ ಎನ್ನುವ ಆಯ್ಕೆ ನಮ್ಮದಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದೇ ರೀತಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಭಾರತ ಪ್ರತ್ಯುತ್ತರ ನೀಡಿತ್ತು.

 

ಇದೀಗ ಪುಲ್ವಾಮಾ ಮೇಲಿನ ದಾಳಿ ನಂತರ ಪತ್ರಿಕೆಗಳು, ಟಿವಿ ಚರ್ಚೆಗಳು, ಸಂಪಾದಕೀಯ ಹಾಗೂ ಫೇಸ್ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಪಾಕ್ ಯುದ್ದದ ಕುರಿತಾದ ಚರ್ಚೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ನಡೆದಿವೆ.

ಒಂದು ವೇಳೆ ಭಾರತ ಪಾಕ್ ನಡುವೆ ಯುದ್ದ ಸಂಭವಿಸಿದರೆ ಪರಿಣಾಮಗಳೇನಾಗಬಹುದು? ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರಬಹುದು? ಪರಮಾಣು ಯುದ್ದ ಸಂಭವಿಸಿದರೆ ಆಗಬಹುದಾದ ಸಾವು-ನೋವು, ಪ್ರಕೃತಿ ಮೇಲಾಗಬಹುದಾದ ದುಷ್ಪರಿಣಾಮಗಳೇನು? ಅದರ ಬಗೆಗಿನ ಸಂಕ್ಷಿಪ್ತ ನೋಟ ಇಲ್ಲಿದೆ.

1. ದುಪ್ಪಟ್ಟು ಬೆಳವಣಿಗೆ ದರಕ್ಕೆ ಏಟು

1. ದುಪ್ಪಟ್ಟು ಬೆಳವಣಿಗೆ ದರಕ್ಕೆ ಏಟು

ನೀತಿ ಆಯೋಗದ ಪ್ರಕಾರ ಯುದ್ದ ನಡೆಯದೇ ಇದ್ದಲ್ಲಿ 2016-17ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 8ರಷ್ಟು ಇರುತ್ತದೆ. ಜಿಎಸ್ಟಿ ಪರಿಣಾಮಕಾರಿ ಅನುಷ್ಠಾನದಿಂದಾಗಿ ಆರ್ಥಿಕತೆಯಲ್ಲಿ ಸುಸ್ಥಿರತೆ ಸಾಧ್ಯವಾಗುವುದರಿಂದ 2019ರಲ್ಲಿ ಶೇ. 2ರಷ್ಟು ಜಿಡಿಪಿ ಸೇರ್ಪಡೆಯಾಗಲಿದೆ.
ಮುಂದಿನ ಎರಡು ದಶಕಗಳ ಅವಧಿಯಲ್ಲಿ ಭಾರತ ಆರ್ಥಿಕವಾಗಿ 2 ಟ್ರಿಲಿಯನ್ ಹಾಗೂ ಸ್ಟಾಕ್ ಮಾರುಕಟ್ಟೆ ಬಂಡವಾಳದಲ್ಲಿ 2 ಟ್ರಿಲಿಯನ್ ಬೆಳೆವಣಿಗೆಯಾಗಲಿದೆ. ಒಟ್ಟಿನಲ್ಲಿ ಎರಡುಪಟ್ಟು ಬೆಳವಣಿಗೆಯಾಗಲಿದೆ. ಇದು ಭಾರತ ಪಾಕ್ ನಡುವೆ ಯುದ್ದ ಆಗದೆ ಇದ್ದರೆ ಮಾತ್ರ ಸಾಧ್ಯ.

2. ದಶಕದಷ್ಟು ಆರ್ಥಿಕ ಹಿನ್ನಡೆ

2. ದಶಕದಷ್ಟು ಆರ್ಥಿಕ ಹಿನ್ನಡೆ

ಯುದ್ದದ ಹಿನ್ನೆಲೆಯಲ್ಲಿ ಮಿಲಿಟರಿ ಶಕ್ತಿಯನ್ನು ಬಲಿಷ್ಠಗೊಳಿಸ ಬೇಕಾಗುವುದರಿಂದ ಪ್ರಸ್ತುತ ಜಿಡಿಪಿಯಲ್ಲಿ ಶೇ. 1.7ರಷ್ಟು ಮಿಲಿಟರಿಗಾಗಿ ವೆಚ್ಚ ಮಾಡಬೆಕಾಗುತ್ತದೆ. ಜತೆಗೆ ಗಡಿಭಾಗ, ಗಡಿರಾಜ್ಯ ಮತ್ತು ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸಬೇಕಾಗುತ್ತದೆ.
ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್(CPEC) ಯೋಜನೆಯಡಿಯಲ್ಲಿ ಪಾಕಿಸ್ತಾನದ ಆರ್ಥಿಕ ಪುನಶ್ಚೇತನಕ್ಕಾಗಿ ಚೀನಾ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಗಿಲ್ಗಿಟ್/ಬಾಲ್ಟಿಸ್ತಾನ್ ಮೇಲೆ ಪ್ರತಿಭಟನಾಕಾರರು ದಾಳಿ ಮಾಡುತ್ತಿದ್ದಾರೆ. ಬಲೂಚಿಸ್ಥಾನದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗುತ್ತಿದ್ದಾರೆ. ಹೀಗಾಗಿ ಬಲೂಚಿಯ ಸ್ವಾತಂತ್ರ್ಯ ಚಳುವಳಿಗಾಗಿ ಭಾರತ ಬೆಂಬಲವಾಗಿ ನಿಂತಿದೆ. ಜತೆಗೆ ಪಿಒಕೆ ಸಂರಕ್ಷಣೆ ಭಾರತದ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಿಲಿಟರಿ ಶಕ್ತಿ ಬಲಪಡಿಸಬೇಕಾಗುವುದರಿಂದ ಒಂದು ದಶಕದಷ್ಟು ಆರ್ಥಿಕ ಹಿನ್ನಡೆಯಾಗುವ ಸಾಧ್ಯತೆ ಇದೆ.

3. ಇಂಡೊ-ಪಾಕ್ ಯುದ್ದದ ಸಂಭಾವ್ಯ ಪರಿಣಾಮ
 

3. ಇಂಡೊ-ಪಾಕ್ ಯುದ್ದದ ಸಂಭಾವ್ಯ ಪರಿಣಾಮ

ಇಂಡಿಯ-ಪಾಕ್ ಯುದ್ದ ಸಂಭವಿಸಿದಲ್ಲಿ ಆರ್ಥಿಕತೆಯ ಮೇಲೆ ಸಂಭಾವ್ಯವಾಗಿ ಆಗಬಹುದಾದ ಪರಿಣಾಮಗಳು ಇಲ್ಲಿವೆ.
* 1999ರ ಕಾರ್ಗಿಲ್ ಯುದ್ದದ ಒಂದು ವಾರದ ವೆಚ್ಚ ರೂ. 5000 ಕೋಟಿ ಎಂದು ಅಂದಾಜಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈಗ ಪಾಕ್ ಜತೆ ಯುದ್ದ ಸಂಭವಿಸಿದರೆ ಪ್ರತಿ ದಿನ ರೂ. 5000 ಕೋಟಿ ವೆಚ್ಚವಾಗಲಿದೆ.
* ಒಂದು ವೇಳೆ ಎರಡು ವಾರಗಳ ಕಾಲ ಯುದ್ದ ನಡೆದರೂ ಕನಿಷ್ಟ ರೂ. 2,50,000 ಕೋಟಿ ವೆಚ್ಚವಾಗಲಿದೆ.
* ಇಂಡೋ-ಪಾಕ್ ಯುದ್ದದಿಂದಾಗಿ ಶೇ. 50ರಷ್ಟು ಅಂದರೆ 8 ಲಕ್ಷ ಕೋಟಿಯಷ್ಟು ವಿತ್ತೀಯ ಕೊರತೆ ಎದುರಾಗಲಿದೆ.
* ಯುದ್ದದಿಂದಾಗಿ FDI/FII ಹೂಡಿಕೆ ಮೇಲೆ ತೀವ್ರ ಪೆಟ್ಟು ಬೀಳಲಿದೆ. ರೂಪಾಯಿ ಮೌಲ್ಯ ಒಂದು ಯುಎಸ್ ಡಾಲರ್ ಗೆ 100 ರೂ. ಆಗಬಹುದು.

4. ಮಾರುಕಟ್ಟೆ ಮೇಲೆ ಪರಿಣಾಮ

4. ಮಾರುಕಟ್ಟೆ ಮೇಲೆ ಪರಿಣಾಮ

ಇಂಡೋ-ಪಾಕ್ ನಡುವೆ ಯುದ್ ಸಂಭವಿಸಿದಲ್ಲಿ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ ನಿನ್ನೆಯ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಪರಿಣಾಮದಿಂದಾಗಿ ಸೆನ್ಸೆಕ್ಸ್ 500 ಅಂಕಗಳ ಭಾರಿ ಕುಸಿತ ಆಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ತೀವ್ರ ಹನ್ನೆಡೆಯಾಗಲಿದೆ. ಈ ಕಾಲ್ಪನಿಕ ಯುದ್ದದ ತೀವ್ರ ಪರಿಣಾಮ ಹಣದುಬ್ಬರದ ಮೇಲೂ ಸಂಭವಿಸಬಹುದು.

5. ಯುದ್ದಕ್ಕೆ ಪರ್ಯಾಯ ಏನು?

5. ಯುದ್ದಕ್ಕೆ ಪರ್ಯಾಯ ಏನು?

ಪಾಕಿಸ್ತಾನದೊಂದಿಗೆ ಯುದ್ದ ನಡೆದರೆ ಅದರ ಹೆಚ್ಚಿನ ಲಾಭ ಚೀನಾ ಪಡೆಯಲಿದೆ. ಆರ್ಥಿಕವಾಗಿ ಚೀನಾಕ್ಕೆ ಪ್ರಬಲ ಸ್ಫರ್ಧಿಯಾಗಿರುವ ಭಾರತದ ಆರ್ಥಿಕತೆಯನ್ನು ಹಿನ್ನಡೆಯಾಗುವಂತೆ ಮಾಡುವುದು ಅದರ ಕುತಂತ್ರ. ಅದಕ್ಕಾಗಿ ಪಾಕಿಸ್ತಾನವನ್ನು ಪ್ರಚೋದಿಸಿ ಛೂ ಬಿಟ್ಟು, ಹಿಂದೆ ನಿಂತು ಎಲ್ಲ ದೃಷ್ಟಿಯಿಂದಲೂ ಪಾಕ್ ಗೆ ಸಹಾಯ ಮಾಡಬಹುದು.
ಯುದ್ದದ ಹಿನ್ನೆಲೆಯಲ್ಲಿ ನ್ಯೂಕ್ಲಿಯರ್ ಸಪ್ಲೈಯರ್ ಗ್ರೂಪ್ ನಿಂದ ಭಾರತವನ್ನು ಹೊರಗಿಡುವುದು, ಅಣುಶಕ್ತಿ ಕೇಂದ್ರಗಳ ಪ್ರದರ್ಶನ, ಮಿಲಿಟರಿ ಉಪಕರಣ ರಕ್ಷಣೆಗೆ ಚೀನಾದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಪಾಕಿಸ್ತಾನದ ರಕ್ಷಣೆ ಪರವಾಗಿ ನಿಲ್ಲಬಹುದು.
ಸಾಂಪ್ರದಾಯಿಕ ಎದುರಾಳಿಯ ವಿರುದ್ದ ಭಾರತ ಸಮರ್ಥವಾಗಿ ಯುದ್ದ ನಿಭಾಯಿಸಬಹುದು. ಆದರೂ, ದೇಶ ಆರ್ಥಿಕವಾಗಿ ಬಲಾಢ್ಯವಾಗುತ್ತಾ ಮುನ್ನುಗ್ಗ ಬೇಕಾಗಿರುವುದು ತುಂಬಾ ಮುಖ್ಯವಾಗಿದೆ.

6. ಭಾರತದ ಚಲನಶೀಲ ರಕ್ಷಣೆ

6. ಭಾರತದ ಚಲನಶೀಲ ರಕ್ಷಣೆ

ಭಾರತ ತನ್ನ ರಕ್ಷಣೆಯನ್ನು ಸ್ವಯಂ ಆಗಿ ಮಾಡಬಲ್ಲದು. ಬಾಂಡ್ ಖ್ಯಾತಿಯ ಸ್ಪೈಮಾಸ್ಟರ್ ಅಜಿತ್ ದೋವಲ್ ಮಾರ್ಗದರ್ಶನದಲ್ಲಿ ಪಿಒಕೆ/ಗಿಲ್ಗಿಟ್/ಬಾಲ್ಟಿಸ್ತಾನ್ ಕಾನೂನುಬದ್ದವಾಗಿ ಭಾರತ ತನ್ನ ಸ್ವಾಮ್ಯಕ್ಕೆ ಪಡೆಯಬಹುದು.
ಯುದ್ದಕ್ಕೆ ಬೇಕಾಗಬಹುದಾದ ಯೋಧ ಪಡೆ, ಸಾಮಾಗ್ರಿ ಒದಗಿಸಬಲ್ಲದು. ದೀರ್ಘಕಾಲದ ರಾಜತಾಂತ್ರಿಕತೆ, ಆಂತರಾಷ್ಟ್ರೀಯ ಸಂಬಂಧ ಮತ್ತು ಆರ್ಥಿಕ ಬೆಂಬಲವನ್ನು ಪಡೆಯಬಲ್ಲದು. ಯಾವ ಕ್ಷೇತ್ರದಲ್ಲೂ, ಹಿನ್ನಲೆಯಲ್ಲಾದರೂ ಭಾರತ ತನ್ನ ಸ್ವಯಂ ರಕ್ಷಣೆ ಮಾಡುವ ಸ್ವಸಾಮರ್ಥ್ಯ ಹೊಂದಿದೆ.

7. ರಾಜತಾಂತ್ರಿಕ ಮಾರ್ಗ

7. ರಾಜತಾಂತ್ರಿಕ ಮಾರ್ಗ

ಮುಖ್ಯವಾಗಿ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತದಯೇಕಿಸಲು ರಾಜತಾಂತ್ರಿಕ ಮಾರ್ಗ ಭಾರತ ಕೈಗೊಂಡಿದೆ. ಅದರಲ್ಲಿ ಸಫಲತೆಯನ್ನು ಸಹ ಪಡೆಯುತ್ತಿದೆ. ಯುಎಸ್, ರಷ್ಯಾ, ಬ್ರಿಟನ್, ಫ್ರಾನ್ಸ್, ಜರ್ಮನಿ ಅಷ್ಟೇ ಅಲ್ಲದೇ ಸಾರ್ಕ್ ದೇಶಗಳಾದ ಬಾಂಗ್ಲಾದೇಶ, ಅಪಘಾನಿಸ್ತಾನ ದೇಶಗಳಿಂದ ಪ್ರತ್ಯೇಕಿಸಲು ರಾಜತಾಂತ್ರಿಕ ಸರ್ವಪ್ರಯತ್ನ ಮಾಡಿದೆ.

೮. ಜಲ ಸಮರ

೮. ಜಲ ಸಮರ

ನೀರು ಮತ್ತು ರಕ್ತ ಒಂದಾಗಿ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳುವ ಮೂಲಕ ಸಿಂಧೂ ಜಲ ಒಪ್ಪಂದ ರದ್ದು ಮಾಡುವ ಬಗ್ಗೆ ಸೂಚನೆ ನೀಡಿದರು. ನೆಹರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1960ರ ಸೆಪ್ಟಂಬರ್ 19ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಉಗ್ರರಿಗೆ ಪ್ರಚೋದನೆ ಮತ್ತು ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಪಾಕ್ ಜತೆಗಿನ ಎಲ್ಲ ಒಪ್ಪಂದಗಳನ್ನು ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಪಾಕ್ ಗೆ ಜಲ ಭೀತಿ ಈಗಾಗಲೇ ಪ್ರಾರಂಭವಾಗಿದೆ.

9. ಮಿಲಿಟರಿ ಸಮರ ಅಲ್ಲ, ಇದು ಆರ್ಥಿಕ ಸಮರ

9. ಮಿಲಿಟರಿ ಸಮರ ಅಲ್ಲ, ಇದು ಆರ್ಥಿಕ ಸಮರ

ಉರಿ ಮೇಲಿನ ದಾಳಿಗೆ ಪ್ರತಿಕಾರವಾಗಿ ಪೂರ್ವಸಿದ್ದತೆಯಾಗಿ ಭಾರತ ಪಾಕಿಸ್ತಾನದ ವಿರುದ್ದ ಆರ್ಥಿಕ ಸಮರಕ್ಕೆ ನಾಂದಿ ಹಾಡುತ್ತಿದೆ.
ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಪ್ರದೇಶ (ಸಾಪ್ತಾ) ಮತ್ತು ಸಿಂಧೂ ವಾಟರ್ ಟ್ರೀಟಿ(IWT)ಮೂಲಕ ಎರಡು ದೇಶಗಳ ನಡುವೆ ಮಾಡಲಾದ ಒಪ್ಪಂದ ಹಾಗೂ ನೀಡಲಾದ ರಿಯಾಯಿತಿಗಳನ್ನು ಹಿಂಪಡೆಯಲು ಭಾರತ ನಿರ್ಧರಿಸಿದೆ. ವಿಶ್ವ ವ್ಯಾಪಾರ ಸಂಸ್ಥೆ((WTO)) ಯಿಂದ ಯಾವುದೇ ಪ್ರಯೋಜನಗಳು ಸಿಗದಂತೆ ಹಾಗೂ ವಿಶ್ವ ಮಟ್ಟದಲ್ಲಿ ಪಾಕಿಸ್ತಾನವನ್ನು ಆರ್ಥಿಕವಾಗಿ ಪ್ರತ್ಯೇಕಿಸುವಂತೆ ಮಾಡುತ್ತಿದೆ.
ಅಲ್ಲದೇ ಭಾರತ ಮತ್ತು ಪಾಕ್ ನಡುವಿನ ಅಮದು-ರಪ್ತು ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

10. ಮಿಲಿಟರಿ ಶಕ್ತಿಯಲ್ಲಿ ಯಾರು ಬಲಿಷ್ಟರು?

10. ಮಿಲಿಟರಿ ಶಕ್ತಿಯಲ್ಲಿ ಯಾರು ಬಲಿಷ್ಟರು?

ಭಾರತದ ಒಟ್ಟು ಜನಸಂಖ್ಯೆ 125 ಕೋಟಿ ಇದ್ದರೆ ಪಾಕ್ ಜನಸಂಖ್ಯೆ ಕೇವಲ 20 ಕೋಟಿ.
1. ಏರ್ ಪವರ್
ಭಾರತ 2086 ಒಟ್ಟು ವಿಮಾನ, 679 ಏರ್ ಫೈಟರ್ಸ್, 19 ಅಟ್ಯಾಕ್ ಹೆಲಿಕಾಪ್ಟರ್ ಮತ್ತು 809 ಪಿಕ್ಸ್ಡ್ ವಿಂಗ್ ಅಟ್ಯಾಕ್ ಏರ್ ಕ್ರಾಪ್ಟ್ ಗಳನ್ನು ಹೊಂದಿದೆ.
ಪಾಕಿಸ್ತಾನ ಒಟ್ಟು 923 ವಿಮಾನ, 304 ಫೈಟರ್ಸ್, 394 ನಿಪಿಕ್ಸ್ಡ್ ವಿಂಗ್ ಅಟ್ಯಾಕ್ ಏರ್ ಕ್ರಾಪ್ಟ್ ಮತ್ತು 52 ಅಟ್ಯಾಕ್ ಹೆಲಿಕಾಪ್ಟರ್ ಗಳನ್ನು ಹೊಂದಿದೆ.2.

2. ನೌಕಾ ಸಾಮರ್ಥ್ಯ
ಭಾರತೊಟ್ಟು 295 ನೌಕಾಬಲವನ್ನು ಹೊಂದಿದ್ದು, 2 ಏರ್ ಕ್ರಾಪ್ಟ್ ಕ್ಯಾರಿಯರ್ಸ್, 10 ಡೆಸ್ಟ್ರಾಯರ್ಸ್, 14 ಸಬ್ ಮೇರಿನ್ಸ್(ಜಲಾಂತರ್ಗಾಮಿಗಳು), 6 ಗಣಿ ಯುದ್ದದ ಹಡಗುಗಳನ್ನು ಹೊಂದಿದೆ.

ಪಾಕಿಸ್ತಾನ ಒಟ್ಟು 197 ನೌಕಾಬಲ ಹೊಂದಿದ್ದು, 12 ಕೋಸ್ಟಲ್ ಡಿಫೆನ್ಸ್ ಕ್ರಾಪ್ಟ್ ಗಳಿವೆ

3. ಭೂ ಸೇನೆ
ಭಾರತ ಒಟ್ಟು 6464 ಟ್ಯಾಂಕ್ಗಳಿವೆ. ಜತೆಗೆ 6704 AFVs, 290 SPGs ಮತ್ತು 292 MLRSs ಶಕ್ತಿಯನ್ನು ಹೊಂದಿದೆ.
ಪಾಕಿಸ್ತಾನ 2924 ಟ್ಯಾಂಕ್ ಗಳನ್ನು ಹಾಗೂ 2,828 AFVs, 465 SPGs ಮತ್ತು 134 MLRSs ಸಾಮರ್ಥ ಹೊಂದಿದೆ.

English summary

India Pak War 2017: What are the Impacts On Indian Economy

Twitter and Facebook, in editorials and TV debates, post-Uri massacre at the Indian Army’s brigade head quarters.But let us realise we are not going to fight Pakistan alone this time, their nuclear sabre-rattling notwithstanding. And the first casualty of an all-out war would be India’s ‘fastest growing eco
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X