Q3: ಕುಂಭಮೇಳ ಮತ್ತು ಮಹಾಶಿವರಾತ್ರಿಯಿಂದ ಅಗರಬತ್ತಿಗೆ ಹೆಚ್ಚಿನ ಬೇಡಿಕೆ

ಬೆಂಗಳೂರು, ಫೆಬ್ರವರಿ 19: ಮಹಾಶಿವರಾತ್ರಿ ಹಬ್ಬವನ್ನು ದೇಶದ ಎಲ್ಲೆಡೆ ಧಾರ್ಮಿಕ ಭಾವನೆಯಿಂದ ಆಚರಿಸಲಿದ್ದು, ಶಿವನನ್ನು ಆರಾಧಿಸುತ್ತಾರೆ. ಈ ವರ್ಷ ಕುಂಭಮೇಳವೂ ನಡೆಯಲಿದ್ದು, ದೇಶ ಮತ್ತು ವಿಶ್ವದ ವಿವಿಧೆಡೆಯಿಂದ ಭಕ್ತರನ್ನು ಆಕರ್ಷಿಸಲಿದೆ. ಅಗರಬತ್ತಿ ಈ ಅವಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದು, ಪ್ರೀಮಿಯಂ ಮತ್ತು ದೀರ್ಘಾವಧಿ ಬಾಳಿಕೆಯ ಅಗರಬತ್ತಿಗಳಿಗೆ ಹೆಚ್ಚಿನ ಬೇಡಿಕೆಯು ಇರಲಿದೆ.

ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘದ ಅಧ್ಯಕ್ಷ ಶರತ್ ಬಾಬು ಅವರು, "ದೇಶಾದ್ಯಂತ ಎಲ್ಲ ದೇವಸ್ಥಾನಗಳು, ಭಕ್ತರು ಭಕ್ತಿ ಅಭಿವ್ಯಕ್ತಿಪಡಿಸುವ, ದಿನಪೂರ್ತಿ ಜಾಗರಣೆ ಮಾಡಿ, ಆಪ್ತರ ಶ್ರೇಯೋಭಿವೃದ್ಧಿಗಾಗಿ ಉಪವಾಸ ಆಚರಿಸುವ ಕಾಲ ಅಗರಬತ್ತಿ ಮತ್ತು ಧೂಪಬತ್ತಿಯು ಪೂಜಾ ಕಾರ್ಯಕ್ರಮಗಳಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.

ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ಚಾಲನೆ, ಕಣ್ಮನ ಸೆಳೆದ ಗಂಗಾರತಿ

ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಒಡಿಶಾ, ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಇವುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರಲಿದೆ. ದೀರ್ಘ ಕಾಲ ಉರಿಯುವ ಅಗರಬತ್ತಿಗಳಿಗೆ ದೇವಸ್ಥಾನಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ದೇವಸ್ಥಾನಗಳಲ್ಲಿ ದಿನಪೂರಾ, ರಾತ್ರೀಯಿಡಿ ಪೂಜೆ ನಡೆಯಲಿದ್ದು, ದೇವರನ್ನು ಆರಾಧಿಸಲಾಗುತ್ತದೆ" ಎಂದು ತಿಳಿಸಿದರು.

Q3: ಕುಂಭಮೇಳ ಮತ್ತು ಮಹಾಶಿವರಾತ್ರಿಯಿಂದ ಅಗರಬತ್ತಿಗೆ ಹೆಚ್ಚಿನ ಬೇಡಿಕೆ

ಸ್ಯಾಂಡಲ್‍ವುಡ್(ಶ್ರೀಗಂಧ) ಮತ್ತು ಚಂಪಾ ಅಗರಬತ್ತಿಗೆ ಕರ್ನಾಟಕದಲ್ಲಿ ಹೆಚ್ಚಿನ ಬೇಡಿಕೆ ಇದ್ದರೆ; ಮಹಾರಾಷ್ಟ್ರ, ಗುಜರಾತ್, ಕೋಲ್ಕೊತ್ತಾದ ಸಿಟ್ರಸ್‍ನಲ್ಲಿ ಮೋಗ್ರಾ ಅಗರಬತ್ತಿಗೆ ಬೇಡಿಕೆ ಇದೆ. ಗುಲಾಬಿ ಮತ್ತು ಸುಗಂಧದ್ರವ್ಯಗಳಿಗೆ ಬೇಡಿಕೆಯು ಉತ್ತರ ಮತ್ತು ಕೇಂದ್ರ ಭಾಗಗಳಾದ ದೆಹಲಿ ಎನ್‍ಸಿಆರ್., ಚಂಡೀಗಡ, ಭೋಪಾಲ್, ಇಂದೋರ್ ನಲ್ಲಿ ಬೇಡಿಕೆ ಇದೆ.

'ಭಾರತವು ವಿಶ್ವದ ಅತಿದೊಡ್ಡ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ, ಆಧ್ಯಾತ್ಮಿಕ ಹಿನ್ನೆಲೆಯ ಕುಂಭಮೇಳಕ್ಕೆ ಆತಿಥ್ಯ ವಹಿಸಲಿದೆ. ಅಗರಬತ್ತಿಯು ದಿನಪೂರ್ತಿ ನಡೆಯುವ ಪ್ರಾರ್ಥನೆ, ಪೂಜೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ವಿವಿಧ ಸುಗಂಧದ್ರವ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸಲಿವೆ. ಅಗರಬತ್ತಿಗೆ ಹೆಚ್ಚಿನ ಬೇಡಿಕೆ ಇದ್ದು, ಉತ್ತರ ಪ್ರದೇಶದಲ್ಲಿ ಎರಡು ತಿಂಗಳ ಕಾಲ ನಡೆಯುವ ಕುಂಭಮೇಳದ ಪೂಜಾ ಸಂದರ್ಭದಲ್ಲಿ ಬೇಡಿಕೆ ಬಹುತೇಕ ದ್ವಿಗುಣಗೊಂಡಿತ್ತು' ಎಂದು ಶರತ್‍ಬಾಬು ಹೇಳಿದರು.

ತಿ ನರಸೀಪುರದ ಕುಂಭಮೇಳಕ್ಕೆ ಹರಿದು ಬಂದ ಜನಸಾಗರ

ಕುಂಭಮೇಳದ ಜೊತೆಗೆ ಪ್ರಮುಖ ಹಬ್ಬಗಳು ಇರುವ ಸಂದರ್ಭದಲ್ಲಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬೇಡಿಕೆಯು ಅಗರಬತ್ತಿ ಹಾಗೂ ಸಂಬಂಧಿತ ಉತ್ಪನ್ನಗಳಿಗೆ ಬೇಡಿಕೆಯು ಶೇ 8 ರಿಂದ 10ರಷ್ಟು ಏರಿಕೆಯಾಗಿದೆ. ತೇವದ ಧೂಪಬತ್ತಿಗೆ ಬೇಡಿಕೆ ಜಮ್ಮು, ಪಂಜಾಬ್, ಹರಿಯಾಣ, ಯುಪಿ., ಎಂಪಿ., ಬಿಹಾರ, ಹಿಮಾಚಲ ಪ್ರದೇಶ, ಮತ್ತು ರಾಜಸ್ತಾನ ವಲಯದಲ್ಲಿ ಹೆಚ್ಚಿನದಾಗಿದೆ. ಬೇರೆಡೆ ಒಣ ಧೂಪ, ಅಗರಬತ್ತಿಗೆ ಬೇಡಿಕೆ ಹೆಚ್ಚು ವ್ಯಕ್ತವಾಗುತ್ತಿದೆ.

ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ ಕುರಿತು (ಎಐಎಎಂಎ)
1949ರಲ್ಲಿ ಮೈಸೂರು ಊದುಬತ್ತಿ ಉತ್ಪಾದಕರ ಸಂಘ ಎಂಬ ಹೆಸರಿನಲ್ಲಿ ಏಳು ಜನರು ಸಂಘವನ್ನು ಸ್ಥಾಪಿಸಿದರು. ಅಂದಿನಿಂದ ಎಐಎಎಂಎ ಅನಿಯಮಿತವಾಗಿ ಅಗರಬತ್ತಿ ಉತ್ಪಾದನೆಗೆ ಪ್ರೋತ್ಸಾಹಿಸಲು ಶ್ರಮಿಸುತ್ತಿದೆ. 1982ರಲ್ಲಿ ಹೆಚ್ಚಿನ ಸಂಖ್ಯೆಯ ಉತ್ಪಾದಕರು ಉದ್ಯಮದತ್ತ ಆಸಕ್ತಿ ತೋರಿದ್ದು, ಎಂಒಎಂಎ ಅನ್ನು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಎಂದು ಮರುನಾಮಕರಣ ಮಾಡಲಾಯಿತು.

ಉದ್ಯಮ ಅನಿಯಮಿತವಾಗಿ ಉದ್ಯಮದ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದೇಶದಾದ್ಯಂತ ಒಟ್ಟು 700 ಜನರು ಅಜೀವ ಸದಸ್ಯರಿದ್ದಾರೆ. ಸಂಸ್ಥೆ ಸಹಯೋಗವು ಕೇವಲ ಉದ್ಯಮವನ್ನು ದೇಶಿಯವಾಗಿ ಅಲ್ಲದೆ, ಅಂತರರಾಷ್ಟ್ರೀಯವಾಗಿಯೂ ಉದ್ಯಮವನ್ನು ಬೆಳೆಸಲು ಕಾರಣವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+