For Quick Alerts
ALLOW NOTIFICATIONS  
For Daily Alerts

12 ಬ್ಯಾಂಕುಗಳಿಗೆ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರು

|

ಸರ್ಕಾರಿ ಸ್ವಾಮ್ಯದ 12 ಬ್ಯಾಂಕುಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಬಲ ತುಂಬಲು ಮುಂದಾಗಿದೆ. ಸಾರ್ವಜನಿಕ ವಲಯದ 12 ಬ್ಯಾಂಕುಗಳಿಗೆ 48,239 ಕೋಟಿ ರು ನೀಡಿರುವುದಾಗಿ ಕೇಂದ್ರ ಸರ್ಕಾರವು ಬುಧವಾರ(ಫೆ.20)ದಂದು ಘೋಷಿಸಿದೆ.

 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕ ನಿಯಂತ್ರಣ ಹಾಗೂ ವಾಣಿಜ್ಯ ಪ್ರಗತಿ ಯೋಜನೆಗಳಲ್ಲಿ ಬಳಸಲು ಬ್ಯಾಂಕುಗಳಿಗೆ ಬೇಕಾದ ಮೊತ್ತವನ್ನು 12 ಬ್ಯಾಂಕುಗಳ ಖಜಾನೆಯಲ್ಲಿ ತುಂಬಿಸಲಾಗುತ್ತದೆ ಎಂದು ವಿತ್ತ ಸೇವಾ ವಿಭಾಗದ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ.

 

ಸರ್ಕಾರಿ ನೌಕರರ ಸಂಬಳ ಏರಿಕೆ, ಬಿಜೆಪಿಯ 'ಮಹಾ' ರಣತಂತ್ರ!

ಕಳೆದ ಜನವರಿ ತಿಂಗಳಿನಲ್ಲಿ ಸರಿ ಸುಮಾರು ಆರು ಬ್ಯಾಂಕುಗಳಿಗೆ 28,615 ಕೋಟಿ ರು ಹೂಡಿಕೆ ಮಾಡಲಾಗಿತ್ತು. ಈಗ ಕಾರ್ಪೊರೇಷನ್ ಬ್ಯಾಂಕಿಗೆ 9,086 ಕೋಟಿ ರು, ಅಲಹಾಬಾದ್ ಬ್ಯಾಂಕಿಗೆ 6,896 ಕೋಟಿ ರುಗೆ ಸಿಗಲಿದೆ. ಈ ಬ್ಯಾಂಕುಗಳು ಉತ್ತಮ ಕಾರ್ಯ ನಿರ್ವಹಣೆಯ ಸ್ತರದಲ್ಲಿವೆ.

12 ಬ್ಯಾಂಕುಗಳಿಗೆ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರು

ಉಳಿದಂತೆ ಬ್ಯಾಂಕ್ ಆಫ್ ಇಂಡಿಯಾಕ್ಕೆ 4,638 ಕೋಟಿ ರು, ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ 205 ಕೋಟಿ ರು, ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 5,908 ಕೋಟಿ ರು, ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾಕ್ಕೆ 4,112 ಕೋಟಿ ರು, ಆಂಧ್ರಬ್ಯಾಂಕ್ 3,256 ಕೋಟಿ ರು ಹಾಗೂ ಸಿಂಡಿಕೇಟ್ ಬ್ಯಾಂಕಿಗೆ 1,603 ಕೋಟಿ ರು ಲಭಿಸಲಿದೆ.

ಆರ್ ಬಿಐ ಕಣ್ಗಾವಲಿನಲ್ಲಿ Prompt Corrective Action (PCA) ವ್ಯವಸ್ಥೆಯಡಿಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್, ಯುಕೋ ಬ್ಯಾಂಕ್ ಹಾಗೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗಳಿಗೆ 12,535 ಕೋಟಿ ರು ನೀಡಲಾಗುತ್ತಿದ್ದೆ.

2018-19ನೇ ಸಾಲಿನಲ್ಲಿ ಪಿಎಸ್ ಬಿ ಗಳಿಗೆ 65,000ಕೋಟಿರು ಘೋಷಿಸಲಾಗಿತ್ತು. ಈ ಪೈಕಿ 23000 ಕೋಟಿ ರು ಮೊದಲ ಹಂತದಲ್ಲಿ ನೀಡಲಾಗಿದೆ. ಬಾಕಿ ಮೊತ್ತವನ್ನು ಈಗ ಹೂಡಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. (ಪಿಟಿಐ)

English summary

Govt announces ₹48,239 crore recapitalisation plan for 12 banks

The government on Wednesday announced it would pump in ₹48,239 crore in 12 public sector banks in the current fiscal year to help them maintain regulatory capital requirement and finance growth plans.
Story first published: Wednesday, February 20, 2019, 19:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X