ಗೆಲಾಕ್ಸಿ ಎಂ ಸರಣಿಯ ಸ್ಮಾರ್ಟ್‌ಫೋನು ಜಿಯೋ ಬಳಕೆದಾರರಿಗೆ ಲಭ್ಯ

ಮತ್ತೊಂದು ಹೊಸ ಉಪಕ್ರಮದಲ್ಲಿ, ಜಿಯೋ ತನ್ನ ಗ್ರಾಹಕರಿಗಾಗಿ ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್‌ಫೋನುಗಳಾದ ಗೆಲಾಕ್ಸಿ ಎಂ20 ಹಾಗೂ ಗೆಲಾಕ್ಸಿ ಎಂ10 ಮಾದರಿಗಳ ವಿಶೇಷ ಮಾರಾಟ ವ್ಯವಸ್ಥೆಯನ್ನು ಘೋಷಿಸುವ ಮೂಲಕ ಡಿಜಿಟಲ್ ಜೀವನಶೈಲಿಯ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ. ಎಂ ಸೀರೀಸ್ ಸಾಧನಗಳಲ್ಲಿ ಜಿಯೋ ಸಂಪರ್ಕ ಬಳಸುವ ಗ್ರಾಹಕರಿಗೆ ವಿಶೇಷ ಡಬಲ್ ಡೇಟಾ ಕೊಡುಗೆಯನ್ನೂ ಜಿಯೋ ಪರಿಚಯಿಸಿದೆ.

ಸ್ಯಾಮ್ ಸಂಗ್.ಕಾಂ ಜಾಲತಾಣದಲ್ಲಿನ ಪ್ರತ್ಯೇಕ ಕಿಟಕಿಯ ಮೂಲಕ ಹೊಚ್ಚಹೊಸ ಎಂ ಸೀರೀಸ್ ಸಾಧನಗಳನ್ನು ಇತರರಿಗಿಂತ ಮೊದಲು ಖರೀದಿಸುವ ಅವಕಾಶವನ್ನು ಈ ಮಾರಾಟ ವ್ಯವಸ್ಥೆ ಜಿಯೋ ಗ್ರಾಹಕರಿಗೆ ನೀಡಿದೆ. ಗ್ರಾಹಕರು ಈ ಮಾರಾಟ ವ್ಯವಸ್ಥೆಯನ್ನು ಜಿಯೋ.ಕಾಂ ಹಾಗೂ ಮೈಜಿಯೋ ಮೂಲಕ ಮಾತ್ರವೇ ಬಳಸಬಹುದು.

ಗೆಲಾಕ್ಸಿ ಎಂ ಸರಣಿಯ ಸಾಧನಗಳಿಗೆ ನೀಡಲಾಗುತ್ತಿರುವ ಜಿಯೋ ಡಬಲ್ ಡೇಟಾ ಕೊಡುಗೆ, ಉಳಿತಾಯದ ಜೊತೆಗೆ ಅಪರಿಮಿತ ವೀಡಿಯೋ, ಸಂಗೀತ, ಕ್ರಿಕೆಟ್ ಹಾಗೂ ಇನ್ನೂ ಅನೇಕ ಸೌಲಭ್ಯಗಳನ್ನು ಆನಂದಿಸುವ ಅವಕಾಶ ಒದಗಿಸುತ್ತಿದೆ. ಸಾಟಿಯಿಲ್ಲದ ಡಿಜಿಟಲ್ ಜೀವನಶೈಲಿಯನ್ನು ಅನುಭವಿಸಲು ಬಯಸುವ ಟೆಕ್ ಆಸಕ್ತ ಯುವ ಜನತೆಯನ್ನು ಜಿಯೋ-ಗೆಲಾಕ್ಸಿ ಎಂ ಸರಣಿಯ ಈ ಡಿಜಿಟಲ್ ಜೀವನಶೈಲಿ ಪ್ರಸ್ತಾಪ ತನ್ನತ್ತ ಸೆಳೆಯಲಿದೆ.

ವಿಶೇಷ ಮಾರಾಟದ ಬಗ್ಗೆ ವಿವರಣೆ

ವಿಶೇಷ ಮಾರಾಟದ ಬಗ್ಗೆ ವಿವರಣೆ

1. ಗೆಲಾಕ್ಸಿ ಎಂ10 ಹಾಗೂ ಎಂ20 ಸ್ಮಾರ್ಟ್‌ಫೋನುಗಳನ್ನು ಫೆಬ್ರುವರಿ 22ರ ಮಧ್ಯಾಹ್ನ 12ರಿಂದ 1ರವರೆಗೆ ಜಿಯೋ ಗ್ರಾಹಕರಿಗಾಗಿ ಆಯೋಜಿಸಿರುವ ವಿಶೇಷ ಮಾರಾಟದಲ್ಲಿ ಗ್ರಾಹಕರು ಕೊಳ್ಳಬಹುದು.

2. ಮಾರಾಟದ ದಿನದಂದು, ಜಿಯೋ ಗ್ರಾಹಕರು ಜಿಯೋ.ಕಾಂ ಹಾಗೂ ಮೈಜಿಯೋ ಆಪ್‌ನಲ್ಲಿರುವ ಸೇಲ್ ಬ್ಯಾನರ್ ಮೇಲೆ ಕ್ಲಿಕ್ ಮಾಡಬೇಕು. ಅವರ ಜಿಯೋ ಸಂಖ್ಯೆಯನ್ನು ದೃಢೀಕರಿಸಿದ ನಂತರ, ಅವರು ಮುಂದುವರೆದು ಈ ಮಾರಾಟದಲ್ಲಿ ಪಾಲ್ಗೊಳ್ಳಬಹುದು.

3. ಹೊಸದಾಗಿ ಪರಿಚಯಿಸಲಾದ ಗೆಲಾಕ್ಸಿ ಎಂ20 ಹಾಗೂ ಎಂ10 ಮಾದರಿಗಳು ಈ ಮಾರಾಟದಲ್ಲಿ ದೊರಕಲಿವೆ. ಗೆಲಾಕ್ಸಿ ಎಂ20ರ ಬೆಲೆ 4GB+64GB ಮಾದರಿಗೆ ರೂ. 12,990 ಹಾಗೂ 3GB+32GB ಮಾದರಿಗೆ ರೂ. 10,990 ಇರಲಿದೆ. ಗೆಲಾಕ್ಸಿ ಎಂ10ರ ಬೆಲೆ 3GB+32GB ಮಾದರಿಗೆ ರೂ. 8,990 ಹಾಗೂ 2GB+16GB ಮಾದರಿಗೆ ರೂ. 7,990 ಇದೆ.

ಡಬಲ್ ಡೇಟಾ ಕೊಡುಗೆ

ಡಬಲ್ ಡೇಟಾ ಕೊಡುಗೆ

1. ಡಬಲ್ ಡಾಟಾ ಕೊಡುಗೆಯು ರೂ. 3,110ವರೆಗಿನ ಮೌಲ್ಯದ ಉಳಿತಾಯವನ್ನು ನೀಡಲಿದೆ.

2. ಫೆಬ್ರುವರಿ 5, 2019ರಂದು ಅಥವಾ ಆನಂತರ ಸ್ಯಾಮ್‌ಸಂಗ್ ಗೆಲಾಕ್ಸಿ ಎಂ20 ಅಥವಾ ಎಂ10 ಖರೀದಿಸುವ ಜಿಯೋ ಸೇವೆಗಳ ಸಕ್ರಿಯ ಪ್ರಿಪೇಡ್ ಚಂದಾದಾರರು ಈ ಕೊಡುಗೆಯನ್ನು ಪಡೆಯಬಹುದಾಗಿದೆ.

3. ಈ ಕೊಡುಗೆಯನ್ನು ಪಡೆಯಲು, ಗೆಲಾಕ್ಸಿ ಎಂ ಸರಣಿಯ ಬಳಕೆದಾರರು ಫೆಬ್ರವರಿ 5, 2019ರಂದು ಅಥವಾ ಆನಂತರ ರೂ. 198 ಅಥವಾ ರೂ. 299 ಮೌಲ್ಯದ ರೀಚಾರ್ಜ್ ಮಾಡಿಸಬೇಕು.

4. ಈ ಕೊಡುಗೆಯು ಫೆಬ್ರವರಿ 5, 2019 ರಿಂದ ಮೇ 5, 2019ರವರೆಗೆ ಲಭ್ಯವಿರಲಿದೆ.

5. ಡಬಲ್ ಡೇಟಾವನ್ನು 10 ಡಬಲ್ ಡಾಟಾ ವೋಚರ್‌ಗಳ ರೂಪದಲ್ಲಿ ಅರ್ಹ ಬಳಕೆದಾರರಿಗೆ ನೀಡಲಾಗುವುದು. ಆ ವೋಚರ್‌ಗಳನ್ನು ಫೆಬ್ರವರಿ 5, 2019 ಮತ್ತು ಜೂನ್ 30, 2020ರ ನಡುವೆ ಬಳಸಿಕೊಳ್ಳಬಹುದು.

6. ಪ್ರತಿ ರೀಚಾರ್ಜ್‌ಗೆ ಒಂದು ಡಬಲ್ ಡೇಟಾ ವೋಚರಿನಂತೆ ನಿಗದಿತ ಅವಧಿಯಲ್ಲಿ ಗರಿಷ್ಠ 10 ರೀಚಾರ್ಜುಗಳಿಗೆ ಬಳಕೆದಾರರು ಈ ವೋಚರುಗಳನ್ನು ಬಳಸಬಹುದು.

7. ಎಂ ಸರಣಿಯ ಸಾಧನಗಳ ಎಲ್ಲ ಭಾರತೀಯ ಆವೃತ್ತಿಗಳ ಮೇಲೆ ಈ ಕೊಡುಗೆ ಲಭ್ಯ.

ಸಾಧನದ ವಿವರಗಳು

ಸಾಧನದ ವಿವರಗಳು

ಗೆಲಾಕ್ಸಿ ಎಂ20 ನೈಜ FHD+ ಗುಣಮಟ್ಟದ 6.3" FHD+ ಇನ್‌ಫಿನಿಟಿ-ವಿ ಡಿಸ್‌ಪ್ಲೇ ಹೊಂದಿದ್ದು, ಗೆಲಾಕ್ಸಿ ಎಂ10 ಮಾದರಿಯಲ್ಲಿ ಊಆ ಗುಣಮಟ್ಟದ 6.2" ಊಆ+ ಇನ್‌ಫಿನಿಟಿ-ವಿ ಡಿಸ್‌ಪ್ಲೇ ಇದೆ. ಈ ಪರದೆಗಳು ನಿಜಕ್ಕೂ ಆವರಿಸಿಕೊಳ್ಳುವಂತಹ ವೀಕ್ಷಣೆಯ ಅನುಭವ ನೀಡುತ್ತವೆ. ಗೆಲಾಕ್ಸಿ ಎಂ20 ಹಾಗೂ ಎಂ10 ಎರಡೂ ಮಾದರಿಗಳು ಜನಪ್ರಿಯ ಆಪ್‌ಗಳ ಮೂಲಕ ಎಚ್‌ಡಿ ಕಂಟೆಂಟ್‌ನ ಅಡೆತಡೆಗಳಿಲ್ಲದ ಪ್ರಸಾರಕ್ಕೆ Widevine L1 ಪ್ರಮಾಣೀಕೃತವಾಗಿವೆ

ಗೆಲಾಕ್ಸಿ ಎಂ20 ಹಾಗೂ ಎಂ10 ಎರಡರಲ್ಲೂ ಅತ್ಯುತ್ತಮ ಲೋ-ಅಪರ್ಚರ್ ಲೆನ್ಸ್‌ಗಳಿದ್ದು, ಗ್ರಾಹಕರು ಕಡಿಮೆ ಬೆಳಕಿನಲ್ಲೂ ಉತ್ತಮ ಹಾಗೂ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯುವುದನ್ನು ಸಾಧ್ಯವಾಗುಸುತ್ತವೆ. ಜೋಡಿ ಪ್ರಾಥಮಿಕ ಕ್ಯಾಮೆರಾ ವ್ಯವಸ್ಥೆ ಅತ್ಯುತ್ತಮ ಲೈವ್ ಫೋಕಸ್ ಪೋರ್ಟ್‌ರೇಟ್ ಚಿತ್ರಗಳನ್ನೂ ಸಾಧ್ಯವಾಗಿಸುತ್ತದೆ. ಜೊತೆಗೆ, ವೇಗದ ಹಾಗೂ ಸರಾಗವಾದ ಬಳಕೆಗೆ ಸೂಕ್ತವಾದ ಹೊಸ ಸ್ಯಾಮ್‌ಸಂಗ್ ಎಕ್ಸ್‌ಪೀರಿಯೆನ್ಸ್ 9.5 ಆವೃತ್ತಿಯ UI ಕೂಡ ಗೆಲಾಕ್ಸಿ ಎಂ ಸರಣಿಯ ಸಾಧನಗಳಲ್ಲಿದೆ.

ಎರಡೂ ಮಾದರಿಗಳಲ್ಲಿ ಡ್ಯುಯಲ್ ಸಿಮ್ ವಿಓಎಲ್‌ಟಿಇ ಇದೆ

ಎರಡೂ ಮಾದರಿಗಳಲ್ಲಿ ಡ್ಯುಯಲ್ ಸಿಮ್ ವಿಓಎಲ್‌ಟಿಇ ಇದೆ

ಗೆಲಾಕ್ಸಿ ಎಂ20 ಹಾಗೂ ಎಂ10 ಎರಡೂ ಮಾದರಿಗಳು 512 ಜಿಬಿಗೆ ವಿಸ್ತರಿಸಬಹುದಾದ ಪ್ರತ್ಯೇಕ ಸ್ಟೋರೇಜ್ ಸ್ಲಾಟ್ ಹೊಂದಿವೆ. ಎರಡೂ ಮಾದರಿಗಳಲ್ಲಿ ಡ್ಯುಯಲ್ ಸಿಮ್ ವಿಓಎಲ್‌ಟಿಇ ಬೆಂಬಲ ಇದೆ.

ಸಂಗೀತ ಮತ್ತು ವಿಡಿಯೋದ ತಡೆರಹಿತ ಸ್ಟ್ರೀಮಿಂಗ್‌ಗಾಗಿ ಗೆಲಾಕ್ಸಿ ಎಂ20 ಮಾದರಿಯಲ್ಲಿ ಸ್ಯಾಮ್‌ಸಂಗ್ ಶಕ್ತಿಶಾಲಿಯಾದ 5000 mAh ಬ್ಯಾಟರಿಯನ್ನು ನೀಡಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಪವರ್ ಮ್ಯಾನೇಜ್‌ಮೆಂಟ್ ಸೌಲಭ್ಯ ಹಲವು ಹಂತಗಳ ತಂತ್ರಜ್ಞಾನ ವ್ಯವಸ್ಥೆಯಿಂದ ಕೂಡಿದ್ದು ಕಡಿಮೆ ವಿದ್ಯುತ್ ಬಳಕೆಯನ್ನು ಸಾಧ್ಯವಾಗಿಸುತ್ತದೆ. ಬಾಕ್ಸ್‌ನಲ್ಲೇ ಬರುವ 15W ಚಾರ್ಜರ್ ಹಾಗೂ ಟೈಪ್ ಸಿ ಫಾಸ್ಟ್ ಚಾರ್ಜಿಂಗ್ ಸಹಾಯದಿಂದ ಸಾಮಾನ್ಯ ಚಾರ್ಜಿಂಗ್‌ಗಿಂತ ಮೂರು ಪಟ್ಟು ಬೇಗನೆ ಚಾರ್ಜ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+