ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಫೆಬ್ರವರಿ 24 ರಂದು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಚಾಲನೆ ನೀಡಲಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಫೆಬ್ರವರಿ 24 ರಂದು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಚಾಲನೆ ನೀಡಲಿದ್ದಾರೆ.
ಗೋರಕ್ ಪುರ ಮತ್ತು ಪ್ರಯಾಗರಾಜ್ ಭೇಟಿ ಸಂದರ್ಭದಲ್ಲಿ ರೂ. 2,000 ಮೊದಲ ಕಂತಿನ ಚೆಕ್ ವಿತರಿಸಲಿದ್ದಾರೆ. ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಘೋಷಿಸಿದ್ದರು.
ಫೆಬ್ರವರಿ 24 ರಂದು ರೈತರು ರೂ. 2,000 ಮೊದಲ ಕಂತಿನ ಮೊತ್ತ ಸ್ವೀಕರಿಸುವ ಸಾಧ್ಯತೆಯಿದೆ. ಈ ಯೋಜನೆ 2 ಹೆಕ್ಟೇರ್ ವರೆಗೆ ಕೃಷಿ ಭೂಮಿಯನ್ನು ಹೊಂದಿರುವ 120 ದಶಲಕ್ಷ ರೈತರಿಗೆ ಪ್ರಯೋಜನ ಒದಗಿಸುವ ಗುರಿ ಹೊಂದಿದೆ. ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಮೊದಲ ಕಂತಿನಲ್ಲಿ 2.5 ಕೋಟಿ ರೈತರಿಗೆ ಲಾಭ!
ಮಾರ್ಚ್ 31 ರ ವೇಳೆಗೆ ಸುಮಾರು 2.5 ಕೋಟಿ ರೈತರು ಮೊದಲ ಕಂತಿನ ಮೊತ್ತ ಪಡೆಯಲಿದ್ದಾರೆಂದು ನಿರೀಕ್ಷಿಸಲಾಗಿದೆ. ಈ ಯೋಜನೆಯ ವ್ಯಾಪ್ತಿಯಡಿಯಲ್ಲಿ ಬರುವ ರೈತರ ವಿವರಗಳನ್ನು ನೀಡುವಂತೆ ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಬರೆದಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ಮುಂತಾದ ರಾಜ್ಯಗಳು ಈ ಪಟ್ಟಿಯನ್ನು ಕಳುಹಿಸಲು ಸಕ್ರಿಯ ಆಸಕ್ತಿಯನ್ನು ತೋರಿಸಿವೆ.
ಫಲಾನುಭವಿಗಳ ಅರ್ಹತೆ
ಗಂಡ, ಹೆಂಡತಿ ಹಾಗು ೧೮ ವರ್ಷದೊಳಗಿನ ಮಕ್ಕಳು ಇರು ಕುಟುಂಬ ಇರಬೇಕು.
- ಎರಡು ಹೆಕ್ಟೇರ್ ಜಮೀನು ಇರಬೇಕು.
- ಫೆಬ್ರವರಿ ೧, ೨೦೧೯ರ ಕ್ಕಿಂತ ಮೊದಲಿನ ಭೂ ದಾಖಲೆಗಳಲ್ಲಿ ಹೆಸರು ಇರುವ ರೈತರನ್ನು ಮಾತ್ರ ಪರಿಗಣಿಸಲಾಗುತ್ತದೆ. ಫೆಬ್ರವರಿ ೧ರ ನಂತರ ಬದಲಾವಣೆ ಮಾಡಲಾದ ಭೂ ದಾಖಲಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
- ಕುಟುಂಬವೊಂದಕ್ಕೆ ಸೇರಿದ ಜಮೀನು ವಿವಿಧ ಹಳ್ಳಿಗಳಲ್ಲಿ ಅಥವಾ ಕಂದಾಯ ದಾಖಲೆಗಳಲ್ಲಿ ಹಂಚಿ ಹೋಗಿದ್ದರೂ ಪರಿಗಣಿಸಲಾಗುತ್ತದೆ.
- 3 ಕಂತುಗಳಲ್ಲಿ ಹಣ ನೀಡಲಿದ್ದು, ಡಿಸೆಂಬರ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಮೊದಲ ಕಂತಿನ ಹಣ ರೈತರ ಖಾತೆಗೆ ಜಮಾ ಆಗಲಿದೆ.
ರೂ. 75 ಸಾವಿರ ಕೋಟಿ ಮೀಸಲು
ಪಿಎಂ ಕಿಸಾನ್ ಯೋಜನೆಗಾಗಿ ರೂ. 75 ಸಾವಿರ ಕೋಟಿ ಮೀಸಲಿಡಲಾಗಿದೆ. ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ ರೂ. 2000 ಸಹಾಯಧನ ನೀಡಲಾಗುತ್ತದೆ. ಲೋಕಸಭೆ ಚುನಾವಣೆ ಸಮೀಪದಲ್ಲಿರುವುದರಿಂದ ರೈತರ ಖಾತೆಗೆ 2 ಕಂತುಗಳ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.


Click it and Unblock the Notifications