For Quick Alerts
ALLOW NOTIFICATIONS  
For Daily Alerts

ಉಬರ್ ಈಟ್ಸ್ ಇಂಡಿಯಾವನ್ನು ಖರೀದಿಸಲು ಮುಂದಾದ ಸ್ವಿಗ್ಗಿ

|

ಜನಪ್ರಿಯ ಆನ್ ಲೈನ್ ಫುಡ್ ಪೂರೈಕೆ ಜಾಗತಿಕ ಸಂಸ್ಥೆ ಉಬರ್ ನ ಭಾಗವಾದ ಉಬರ್ ಈಟ್ಸ್ ಇಂಡಿಯಾವನ್ನು ಖರೀದಿಸಲು ಸ್ವಿಗ್ಗಿ ಮುಂದಾಗಿರುವ ಸುದ್ದಿ ಬಂದಿದೆ. ಮಾತುಕತೆ ಕೊನೆ ಹಂತದಲ್ಲಿದ್ದು, ಯಾವ ಸಂಸ್ಥೆ ಎಷ್ಟು ಪಾಲು ಹೊಂದಲಿದೆ ಎಂಬುದು ನಂತರ ತಿಳಿಯಲಿದೆ. ಲಭ್ಯ ಮಾಹಿತಿಯಂತೆ ಸ್ವಿಗ್ಗಿಯಲ್ಲಿನ ಶೇ 10 ಪಾಲು ಉಬರ್ ಗೆ ದಕ್ಕಲಿದೆ. ಸ್ವಿಗ್ಗಿ ಅಲ್ಲದೆ ಪ್ರತಿಸ್ಪರ್ಧಿ ಜೊಮಾಟೋ ಜತೆ ಕೂಡಾ ಉಬರ್ ಮಾತುಕತೆ ನಡೆಸಿತ್ತು.

 

ಕಳೆದ ಆರ್ಥಿಕ ವರ್ಷದಲ್ಲಿ 1 ಬಿಲಿಯನ್ ಡಾಲರ್ ಗಳಿಕೆ ಹೆಚ್ಚಳ ಕಂಡಿರುವ ಸ್ವಿಗ್ಗಿ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸ್ವಿಗ್ಗಿ ಹಾಗೂ ಗುರ್ ಗಾಂವ್ ಮೂಲದ ಜೊಮಾಟೋ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದರೂ ಹೆಚ್ಚಿನ ಲಾಭ ಗಳಿಸಿರಲಿಲ್ಲ. ಈ ನಡುವೆ ಉಬರ್ ನ ಪ್ರತಿಸ್ಪರ್ಧಿ ಓಲಾ ಕೂಡಾ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಫುಡ್ ಪಾಂಡ ಜತೆ ಒಪ್ಪಂದ ಮಾಡಿಕೊಂಡಿದೆ.

 
ಉಬರ್ ಈಟ್ಸ್ ಇಂಡಿಯಾವನ್ನು ಖರೀದಿಸಲು ಮುಂದಾದ ಸ್ವಿಗ್ಗಿ

ಸ್ವಿಗ್ಗಿ ಸ್ಟೋರ್ಸ್ ಆರಂಭ; ದೈನಂದಿನ ವಸ್ತುಗಳು ಇದರಲ್ಲಿ ಲಭ್ಯ ಸ್ವಿಗ್ಗಿ ಸ್ಟೋರ್ಸ್ ಆರಂಭ; ದೈನಂದಿನ ವಸ್ತುಗಳು ಇದರಲ್ಲಿ ಲಭ್ಯ

ಈ ಆನ್ ಲೈನ್ ಸೇವೆಯ ಮೂಲಕ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಕ್ಷಿಪ್ರವಾಗಿ ಆಹಾರ ತಲುಪಿಸುವ ಸಲುವಾಗಿ ಉಬರ್ ಡೆಲಿವರಿ ನೆಟ್ ವರ್ಕ್ ಎಂಬ ಪ್ರತ್ಯೇಕ ಪೂರೈಕೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸ್ವಿಗ್ಗಿ ಜತೆ ಒಪ್ಪಂದ ಬಹುತೇಕ ಅಂತಿಮಗೊಳಿಸುವ ಉಬರ್ ಈಟ್ಸ್, ಇದಕ್ಕೂ ಮುನ್ನ ಜೊಮಾಟೋ, ಫುಡ್ ಪಾಂಡಾ ಜತೆ ಕೂಡಾ ಇದೇ ರೀತಿ ಮಾತುಕತೆ ನಡೆಸಿತ್ತು.

English summary

Swiggy Set to Acquire Uber Eats in India: Report

Swiggy is said to be in talks to acquire the food-delivery arm of global ride-hailing firm Uber -- Uber Eats India. According to a recent report on the internet, the deal is in the final stage of negotiations.
Story first published: Friday, February 22, 2019, 14:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X