ಭಾರತದ ವಾಯುಸೇನೆ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದರಿಂದ ಷೇರುಪೇಟೆ ಒತ್ತಡಕ್ಕೆ ಒಳಗಾಗಿತ್ತು. ನಿನ್ನೆಯ ದಿನದ ಅಂತ್ಯಕ್ಕೆ ಸಂವೇದಿ ಸೂಚ್ಯಂಕ 240 ಅಂಕ ಕುಸಿತದೊಂದಿಗೆ 35973 ಅಂಶಗಳಿಗೆ ಇಳಿದಿತ್ತು. ನಿಪ್ಟಿ ಸೂಚ್
ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಬುಧವಾರದ ವಹಿವಾಟನ್ನು ಧನಾತ್ಮಕವಾಗಿ ಆರಂಭಿಸಿವೆ.
ಭಾರತದ ವಾಯುಸೇನೆ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದರಿಂದ ಷೇರುಪೇಟೆ ಒತ್ತಡಕ್ಕೆ ಒಳಗಾಗಿತ್ತು. ನಿನ್ನೆಯ ದಿನದ ಅಂತ್ಯಕ್ಕೆ ಸಂವೇದಿ ಸೂಚ್ಯಂಕ 240 ಅಂಕ ಕುಸಿತದೊಂದಿಗೆ 35973 ಅಂಶಗಳಿಗೆ ಇಳಿದಿತ್ತು. ನಿಪ್ಟಿ ಸೂಚ್ಯಂಕ 44 ಅಂಕಗಳೊಂದಿಗೆ 10835 ಅಂಶಗಳಲ್ಲಿ ಕೊನೆಯಾಗಿತ್ತು.
ಬೆಳಿಗ್ಗೆ 10.52 ಗಂಟೆಗೆ ಸೆನ್ಸೆಕ್ಸ್ 381 ಪಾಯಿಂಟ್ ನೊಂದಿಗೆ 36336 ಅಂಶ ಏರಿಕೆ ಕಂಡಿದ್ದು, ನಿಫ್ಟಿ 97 ಅಂಕಗಳೊಂದಿಗೆ 10,930 ಅಂಶಕ್ಕೆ ಏರಿದೆ.