ಗುಡ್ ನ್ಯೂಸ್! 97 ಸಾವಿರ ಉದ್ಯೋಗಾವಕಾಶ..

ಕಾರ್ಪೊರೇಟ್ ವಲಯದ ಕಂಪನಿಗಳಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ವಿಜ್ಞಾನಕ್ಕೆ ಸಂಬಂಧಿಸಿದಂತೆ 97,000 ಉದ್ಯೋಗಗಳು ಖಾಲಿ ಇವೆ ಎಂದು ಗ್ರೇಟ್ ಲರ್ನಿಂಗ್ ಕಂಪನಿ ವರದಿ ಮಾಡಿದೆ.

ಅನಾಲಿಟಿಕ್ಸ್ ಹಾಗೂ ಡೇಟಾ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಕಾರ್ಪೊರೇಟ್ ವಲಯದಲ್ಲಿ ವಿಪುಲ ಉದ್ಯೋಗಾವಕಾಶ ಸೃಷ್ಟಿಯಾಗಿದೆ.

ಕಾರ್ಪೊರೇಟ್ ವಲಯದ ಕಂಪನಿಗಳಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ವಿಜ್ಞಾನಕ್ಕೆ ಸಂಬಂಧಿಸಿದಂತೆ 97,000 ಉದ್ಯೋಗಗಳು ಖಾಲಿ ಇವೆ ಎಂದು ಗ್ರೇಟ್ ಲರ್ನಿಂಗ್ ಕಂಪನಿ ವರದಿ ಮಾಡಿದೆ.

ಕೇವಲ ಒಂದು ವರ್ಷದಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವೆ ಶೇ. 45ರಷ್ಟು ಅಂತರ ಉಂಟಾಗಿದ್ದು, ಉದ್ದಿಮೆ ವಲಯ ಡೇಟಾ ಆಧಾರಿತ ನಿರ್ಣಯ ತೆಗೆದುಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಬೇಡಿಕೆ ಇನ್ನೂ ಹೆಚ್ಚಲಿದೆ ಎಂದು ಗ್ರೇಟ್ ಲರ್ನಿಂಗ್ ಸಹ ಸಂಸ್ಥಾಪಕ ಹರಿ ಕೃಷ್ಣನ್‌ ನಾಯರ್‌ ಹೇಳಿದ್ದಾರೆ. ಮನೆಯಿಂದ ನಡೆಸಬಹುದಾದ 18 ಲಾಭದಾಯಕ ಉದ್ಯಮಗಳು

ಏನಿದು ದತ್ತಾಂಶ ವಿಜ್ಞಾನ?

ಏನಿದು ದತ್ತಾಂಶ ವಿಜ್ಞಾನ?

ವಿವಿಧ ಬಗೆಯ ಮಾಹಿತಿ, ದತ್ತಾಂಶಗಳನ್ನು ಸಂಗ್ರಹಿಸಿ ಅದನ್ನು ವಿಶ್ಲೇಷಿಸುವ ಪ್ರಕ್ರಿಯೆ ದತ್ತಾಂಶ ವಿಜ್ಞಾನ ನಿರ್ವಹಿಸುತ್ತದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಭವಿಷ್ಯದ ವಹಿವಾಟು ಸುಧಾರಣೆ, ಹೊಸ ಕಾರ್ಯತಂತ್ರಗಳ ಜಾರಿ ಹಾಗು ಗ್ರಾಹಕರ ಮನಸ್ಥಿತಿಗಳನ್ನು ಅರಿತು ನಿರ್ಣಯ ಕೈಗೊಳ್ಳಲು ಡೇಟಾ ಸೈನ್ಸ್‌ ಸಹಾಯಕವಾಗಿದೆ.

ಬೆಂಗಳೂರು ಪಾಲು ಹೆಚ್ಚು!

ಬೆಂಗಳೂರು ಪಾಲು ಹೆಚ್ಚು!

ಬೆಂಗಳೂರು ವಿಶ್ಲೇಷಣಾತ್ಮಕ ವೃತ್ತಿಪರರ ಕೇಂದ್ರವಾಗಿ ಅಗ್ರಸ್ಥಾನದಲ್ಲಿದ್ದು, ವಿಶ್ಲೇಷಣಾ ಉದ್ಯೋಗಗಳಲ್ಲಿ ಶೇ. 24ರಷ್ಟು, ದೆಹಲಿ ಮತ್ತು ಎನ್ಸಿಆರ್ ಶೇ. 22, ಮುಂಬೈ ಶೇ. 15 ರಷ್ಟು ಮತ್ತು ಚೆನ್ನೈ ಶೇ. 7ರಷ್ಟು ವಿಶ್ಲೇಷಣಾತ್ಮಕ ವಿಭಾಗಕ್ಕೆ ಕೊಡುಗೆ ನೀಡುತ್ತಿವೆ. ಮುಂಬೈ, ದೆಹಲಿ ಮತ್ತು ಚೆನ್ನೈ ಮುಂತಾದ ಹಣಕಾಸು ಕೇಂದ್ರಗಳು ಈ ವರ್ಷದ ಅನಾಲಿಟಿಕ್ಸ್ ಉದ್ಯೋಗಗಳನ್ನು ಹೆಚ್ಚಿಸಿವೆ.

ಉದ್ಯೋಗಾವಕಾಶ

ಉದ್ಯೋಗಾವಕಾಶ

ಬಹುತೇಕ ಹುದ್ದೆಗಳು ಜ್ಯೂನಿಯರ್ ಹಂತದ್ದಾಗಿವೆ. 5 ವರ್ಷದೊಳಗಿನ ಅನುಭವಸ್ಥರಿಗೆ ಮತ್ತು ಹೊಸಬರಿಗೂ ಅವಕಾಶಗಳಿವೆ. ಬೆಂಗಳೂರಿನಲ್ಲಿ ಅನಾಲಿಟಿಕ್ಸ್‌ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮುಂಬಯಿ, ದಿಲ್ಲಿ, ಚೆನ್ನೈನಲ್ಲೂ ಅವಕಾಶಗಳು ಇವೆ. ಬ್ಯಾಂಕಿಂಗ್‌, ರಿಟೇಲ್ ,ಇ-ಕಾಮರ್ಸ್, ಔಷಧ, ಆಟೊಮೊಬೈಲ್‌, ಟೆಲಿಕಾಂ ಇತ್ಯಾದಿ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+