ಆಧಾರ್ ಕಾರ್ಡ್ ಹೊಂದಿದ್ದಿರಾ? ಹಾಗಿದ್ದರೆ ಈ ಸುದ್ದಿ ಓದಿ..

ಮೊಬೈಲ್ ಸಿಮ್ ಕಾರ್ಡ್ ಪಡೆಯುವಾಗ ಹಾಗು ಬ್ಯಾಂಕ್ ಖಾತೆ ತೆರೆಯುವಾಗ ಗುರುತಿನ ದಾಖಲಾತಿಯಾಗಿ ಆಧಾರ್ ಸಂಖ್ಯೆ ಕೊಡಬೇಕೆ ಅಥವಾ ಬೇಡವೇ ಎಂಬುದು ತುಂಬಾ ಜನರ ಗೊಂದಲವಾಗಿತ್ತು.

ಮೊಬೈಲ್ ಸಿಮ್ ಕಾರ್ಡ್ ಪಡೆಯುವಾಗ ಹಾಗು ಬ್ಯಾಂಕ್ ಖಾತೆ ತೆರೆಯುವಾಗ ಗುರುತಿನ ದಾಖಲಾತಿಯಾಗಿ ಆಧಾರ್ ಸಂಖ್ಯೆ ಕೊಡಬೇಕೆ ಅಥವಾ ಬೇಡವೇ ಎಂಬುದು ತುಂಬಾ ಜನರ ಗೊಂದಲವಾಗಿತ್ತು.
ಆದರೆ ಇನ್ನುಮುಂದೆ ಬ್ಯಾಂಕುಗಳಲ್ಲಿ ಖಾತೆ ತೆರೆಯುವಾಗ ಮತ್ತು ಮೊಬೈಲ್ ಸಿಮ್ ಕಾರ್ಡ್ ಖರೀದಿಸುವಾಗ ಆಧಾರ್ ಸಂಖ್ಯೆ ಒದಗಿಸುವುದು ಕಡ್ಡಾಯವಲ್ಲ.

ರಾಷ್ಟ್ರಪತಿ ಅಂಕಿತ

ರಾಷ್ಟ್ರಪತಿ ಅಂಕಿತ

ಕೇಂದ್ರ ಸರ್ಕಾರವು ಬ್ಯಾಂಕ್ ಖಾತೆ ತೆರೆಯಲು ಮತ್ತು ಹೊಸ ಸಿಮ್ ಪಡೆಯುವಾಗ ಗುರುತಿನ ಚೀಟಿಯಾಗಿ ಆಧಾರ್ ಸಂಖ್ಯೆಯನ್ನು ಸ್ವಯಂ ಪ್ರೇರಣೆಯಿಂದ ನೀಡಲು ಅವಕಾಶ ಮಾಡಿಕೊಡುವ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ.
ಲೋಕಸಭೆಯಲ್ಲಿ ಆಧಾರ್ ಸಂಖ್ಯೆ ಸ್ವಯಂ ಪ್ರೇರಣೆಯಿಂದ ನೀಡಲು ಅವಕಾಶ ಮಾಡಿಕೊಡುವ ಮಸೂದೆಗೆ ಅನುಮೋದನೆ ದೊರೆತಿದೆ. ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ಸಿಗದ ಕಾರಣ ಮತ್ತು ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆಧಾರ್ ಕಾರ್ಡ್ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಸಂಪುಟ ಸಭೆಯಲ್ಲಿ ಒಪ್ಪಿಗೆ

ಸಂಪುಟ ಸಭೆಯಲ್ಲಿ ಒಪ್ಪಿಗೆ

ಜನವರಿ 4 ರಂದು ಆಧಾರ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಈಗಿನ ಲೋಕಸಭೆ ಅವಧಿ ಮುಗಿಯುವುದರೊಳಗೆ ರಾಜ್ಯಸಭೆಯಲ್ಲಿ ಮಂಡನೆಯಾಗಬೇಕಿತ್ತು. ಆದರೆ ಮಸೂದೆ ಕೈ ತಪ್ಪುವ ಸಾಧ್ಯತೆ ಹಿನ್ನೆಲೆಯಲ್ಲಿ ಆಧ್ಯಾದೇಶ ಹೊರಡಿಸಲು ಚರ್ಚೆ ನಡೆಸಲಾಗಿತ್ತು. ಆಧಾರ್ ಹಾಗೂ ಇತರೆ ಕಾನೂನು (ತಿದ್ದುಪಡಿ) ಮಸೂದೆಗಳ ಮೇಲೆ ಪರಿಣಾಮ ಬೀರುವ ಆಧ್ಯಾದೇಶ ಘೋಷಣೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ನಿಯಮಗಳ ಉಲ್ಲಂಘನೆಗೆ ದಂಡ

ನಿಯಮಗಳ ಉಲ್ಲಂಘನೆಗೆ ದಂಡ

ಆಧಾರ್ ಕಾರ್ಡ್ ಬಳಕೆ ಮತ್ತು ಗ್ರಾಹಕರ ಖಾಸಗಿತನ ಕಾಪಾಡಲು ರೂಪಿಸಿರುವ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸಲು ಅವಕಾಶವಿರುವ ಮಸೂದೆಯನ್ನು ಜಾರಿ ತರಲು ಈ ಸುಗ್ರೀವಾಜ್ಞೆಗೆ ಕಳೆದ ವಾರ ಅನುಮೋದನೆ ದೊರಕಿದೆ. ಒಟ್ಟಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ಮತ್ತು ಹೊಸ ಸಿಮ್ ಪಡೆಯುವಾಗ ಆಧಾರ್ ಸಂಖ್ಯೆಯನ್ನು ಸ್ವಯಂ ಪ್ರೇರಿತರಾಗಿ ನೀಡಲು ಅವಕಾಶ ನೀಡುವ ಆಧ್ಯಾದೇಶಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+