ಲೋಕಸಭೆ ಚುನಾವಣೆಗೂ ಮುನ್ನ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮೋದಿ ಸರ್ಕಾರ ಶುಭ ಸುದ್ದಿ ಕೊಟ್ಟಿತ್ತು. ಜಿಎಸ್ಟಿ ತಗ್ಗಿಸುವ ಮೂಲಕ ಅಪಾರ್ಟ್ಮೆಂಟ್ ಖರೀದಿಸುವವರಿಗೆ ಉತ್ತೇಜಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಾಗ್ರಿಗಳ ಬೆಲೆ ಮಾತ್ರ ತಗ್ಗಿಲ್ಲ. ಸಿಮೆಂಟ್ ಬೆಲೆ ಪ್ರತಿ ಬ್ಯಾಗಿಗೆ 25ರು ನಂತೆ ಏರಿಕೆ ಕಂಡಿದೆ.
ಫೆಬ್ರವರಿ ತಿಂಗಳಿನಲ್ಲಿ 50 ಕೆಜಿ ಸಿಮೆಂಟ್ ಬ್ಯಾಗಿಗೆ 25 ರೂ. ಏರಿಕೆಯಾಗಿದೆ ಎಂದು ಕ್ರಿಸಿಲ್ ಸಂಸ್ಥೆ ತಿಳಿಸಿದೆ. ದಕ್ಷಿಣ ಭಾರತದಲ್ಲಿ ಬೆಂಗಳೂರಿನಲ್ಲಿ 50 ಕೆಜಿ ಚೀಲಕ್ಕೆ ಸರಾಸರಿ 52 ರೂ. ನಷ್ಟಿದ್ದರೆ, ಚೆನ್ನೈನಲ್ಲಿ 62ರು ಹಾಗೂ ಹೈದರಾಬಾದಿನಲ್ಲಿ 77ರು ಬೆಲೆ ಇದೆ.
ಲೋಕಸಭೆ ಚುನಾವಣೆಗೂ ಮುನ್ನ ಸಿಮೆಂಟ್ ಬೆಲೆ ಇಳಿಕೆ ಸಾಧ್ಯತೆ!
ಸಿಮೆಂಟ್ ಬೇಡಿಕೆ ಮತ್ತು ವೆಚ್ಚದಲ್ಲಿನ ಇಳಿಕೆಗೆ ಅನುಗುಣವಾಗಿ ಸಿಮೆಂಟ್ ದರದಲ್ಲಿ ಏರಿಕೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ ಬಳಿಕ ಸಿಮೆಂಟ್ ದರ ಏರಿಕೆ ಹಾದಿಯಲ್ಲಿದೆ. ಸದ್ಯ ಶೇ 28ರ ಸ್ಲ್ಯಾಬಿನಲ್ಲಿರುವ ಸಿಮೆಂಟ್ ಬೆಲೆಯನ್ನು ತಗ್ಗಿಸಿದರೆ, ಸರ್ಕಾರಕ್ಕೆ ವಾರ್ಷಿಕ 13,000ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ.

ಜಿಎಸ್ಟಿ ಇಳಿಕೆಯಿಂದ ಕಟ್ಟಡ ನಿರ್ಮಾಣಕ್ಕೂ ಉತ್ತೇಜನ ಸಿಗಲಿದೆ, ಫ್ಲಾಟ್, ಅಪಾರ್ಟ್ಮೆಂಟ್ ಖರೀದಿದಾರರಿಗೂ ಪ್ರೋತ್ಸಾಹ ಸಿಕ್ಕಿದೆ. ಆದರೆ, ಸಿಮೆಂಟ್ ಮೇಲಿನ ತೆರಿಗೆ ಇಳಿಕೆ ಬೇಡಿಕೆ ಹಾಗೆ ಉಳಿದಿದೆ ಎಂದು ದಾಲ್ಮಿಯಾ ಸಿಮೆಂಟ್ ಸಿಇಒ, ಸಿಮೆಂಟ್ ಉತ್ಪಾದಕರ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಸಿಂಘಿ ಹೇಳಿದ್ದಾರೆ.
ತಗ್ಗಿದ ಜಿಎಸ್ಟಿ: ಅಪಾರ್ಟ್ಮೆಂಟ್ ಖರೀದಿದಾರರಿಗೆ ಸಿಹಿ ಸುದ್ದಿ
ಕಟ್ಟಡ ನಿರ್ಮಾಣದ ವೆಚ್ಚ : ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ.


Click it and Unblock the Notifications