For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1ರಿಂದ ಮನೆ, ವಾಹನ ಸಾಲಗಳ ಹೊಸ ನೀತಿ ಅನ್ವಯ

ಮನೆ ಹಾಗೂ ವಾಹನ ಸಾಲಗಳ ಮೇಲಿನ ಬಡ್ಡಿದರ ನೀತಿಯಲ್ಲಿ ಏಪ್ರಿಲ್ 1, 2019 ರಿಂದ ಬದಲಾವಣೆ ಆಗಲಿದೆ. ಇದಕ್ಕೂ ಮುನ್ನ ಬಡ್ಡಿ ದರವನ್ನು ಯಾವಾಗ ಹೆಚ್ಚು ಮಾಡಬೇಕು, ಯಾವಾಗ ಕಡಿಮೆ ಮಾಡಬೇಕು ಎಂಬುದನ್ನು ಬ್ಯಾಂಕುಗಳು ನಿರ್ಧರಿಸುತ್ತಿದ್ದವು.

|

ಇನ್ಮುಂದೆ ಆರ್ಬಿಐ ರೆಪೋ ದರದಲ್ಲಿ ಬದಲಾವಣೆ ಮಾಡುತ್ತಿದ್ದಂತೆ ಬ್ಯಾಂಕುಗಳು ತಮ್ಮ ಬಡ್ಡಿ ದರದಲ್ಲಿ ಬದಲಾವಣೆ ಮಾಡಬೇಕು. ಸಣ್ಣ ವ್ಯಾಪಾರಿಗಳಿಗೆ ನೀಡಲಾಗುವ ಸಾಲದ ಮೇಲೂ ಈ ವ್ಯವಸ್ಥೆ ಅನ್ವಯವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಆರ್ಬಿಐ ಹೊಸ ನೀತಿಯನ್ನು ಎಲ್ಲ ಬ್ಯಾಂಕುಗಳು ಅಳವಡಿಸಿಕೊಳ್ಳಬೇಕಾಗಿದೆ.

ಆರ್ಬಿಐ ಹೊಸ ನೀತಿಯಂತೆ ಆರ್ಬಿಐ ರೆಪೋ ದರವನ್ನು ಇಳಿಕೆ ಮಾಡುತ್ತಿದ್ದಂತೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿಯನ್ನು ಇಳಿಕೆ ಮಾಡಬೇಕು. ಸಾಮಾನ್ಯವಾಗಿ ಆರ್ಬಿಐ ರೆಪೋ ದರವನ್ನು ಹೆಚ್ಚಳ ಮಾಡುತ್ತಿದ್ದಂತೆ ಬ್ಯಾಂಕುಗಳು ಬಡ್ಡಿ ದರವನ್ನು ಹೆಚ್ಚಳ ಮಾಡುತ್ತವೆ. ಆದರೆ ರೆಪೋ ದರ ಕಡಿಮೆಯಾದಂತೆ ಬಡ್ಡಿ ದರವನ್ನು ಕಡಿಮೆ ಮಾಡುವುದಿಲ್ಲ. ಇದು ಗ್ರಾಹಕರಿಗೆ ನಷ್ಟವುಂಟು ಮಾಡುತಿತ್ತು. ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ಈ ನೀತಿ ಜಾರಿಗೆ ತಂದಿದೆ. ಇದು ಜನಸಾಮಾನ್ಯರಿಗೆ ಲಾಭಕರವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Read more about: rbi loan interest rates home loan
English summary

how will your home loans change april 2019 rbi home personal auto bank loan emi

how will your home loans change april 2019 rbi home personal auto bank loan emi
Story first published: Saturday, March 9, 2019, 14:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X