8 ಕಂಪನಿಗಳಿಂದ 224 ಕೋಟಿ ಜಿಎಸ್ಟಿ ವಂಚನೆ ಪತ್ತೆ

ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ರೂ. 224 ಕೋಟಿ ಮೊತ್ತದ ವಂಚನೆ ಪ್ರಕರಣ ಪತ್ತೆ ಮಾಡಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ರೂ. 224 ಕೋಟಿ ಮೊತ್ತದ ವಂಚನೆ ಪ್ರಕರಣ ಪತ್ತೆ ಮಾಡಿದ್ದಾರೆ.
ಕಬ್ಬಿಣದ ಮತ್ತು ಉಕ್ಕಿನ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿರುವ ಎಂಟು ಕಂಪನಿಗಳ ಸಮೂಹದಿಂದ 1,289 ಕೋಟಿ ರೂಪಾಯಿ ಮೌಲ್ಯದ ನಕಲಿ ಇನ್ ವಾಯ್ಸ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಜಿಎಸ್ಟಿ ಅಧಿಕಾರಿಗಳು ಹೇಳಿದ್ದಾರೆ.

8 ಕಂಪನಿಗಳಿಂದ 224 ಕೋಟಿ ಜಿಎಸ್ಟಿ ವಂಚನೆ ಪತ್ತೆ

ಜಿಎಸ್ಟಿ ವಂಚನಾ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ಶಂಕಿತರಿಂದ ರೂ. ೧೯.೭೫ ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಹೈದರಾಬಾದಿನ ಕೇಂದ್ರೀಯ ಜಿಎಸ್ಟಿ ಆಯುಕ್ತರು ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಈ ಕಂಪೆನಿಗಳ ವಸತಿ ಮತ್ತು ವ್ಯವಹಾರದ ಆವರಣದಲ್ಲಿ ನಡೆಸಿದ ಏಕ ಕಾಲಿಕ ದಾಳಿಯಲ್ಲಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

2017ರ ಜುಲೈ ತಿಂಗಳಿನಿಂದ ಎಂಎಸ್ ಬಾರ್, ಟಿಎಂಟಿ ಬಾರ್, ಎಂಎಸ್ ಪ್ಯಲಾಟ್ ಉತ್ಪನ್ನಗಳ ಮಾರಾಟದ ನಕಲಿ ಇನ್ ವಾಯ್ಸ್ ಸೃಷ್ಟಿಸುವುದರ ಮೂಲಕ ಕಂಪನಿಯಲ್ಲಿರುವ ಇತರ ತೆರಿಗೆ ಪಾವತಿದಾರರಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಾವತಿಯಾಗುವಂತೆ ಮಾಡುತ್ತಿದ್ದರು ಎನ್ನಲಾಗಿದೆ.

ಸುರಕ್ಷತೆ ಇಲ್ಲದೆ, ಸಾಲ ಖಾತರಿ ಪತ್ರ ಪಡೆಯಲು ಬ್ಯಾಂಕುಗಳನ್ನು ವಂಚಿಉವ ವ್ಯವಸ್ಥೆ ರೂಪಿಸಿದ್ದರು ಎಂದು ನಿಖೆಯಿಂದ ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+