For Quick Alerts
ALLOW NOTIFICATIONS  
For Daily Alerts

ಜಿಯೋ ಜಮಾನ! ಗ್ರಾಹಕರಿಗೆ 5G ಸೇವೆ ಲಭ್ಯ.. ಯಾವಾಗಿನಿಂದ ಗೊತ್ತಾ?

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ನಿಯಂತ್ರಿಸುತ್ತಿರುವ ಹೊಸ ಯುಗದ ಟೆಲಿಕಾಂ ಉದ್ಯಮದ ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ ದೂರಸಂಪರ್ಕ ವಲಯದಲ್ಲಿ ಸ್ಪರ್ಧೆಯನ್ನು ತೀವ್ರಗೊಳಿಸಲು ಯೋಜಿಸುತ್ತಿದೆ.

|

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ನಿಯಂತ್ರಿಸುತ್ತಿರುವ ಹೊಸ ಯುಗದ ಟೆಲಿಕಾಂ ಉದ್ಯಮದ ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ ದೂರಸಂಪರ್ಕ ವಲಯದಲ್ಲಿ ಸ್ಪರ್ಧೆಯನ್ನು ತೀವ್ರಗೊಳಿಸಲು ಚಿಂತನೆ ನಡೆಸಿದೆ.
ಎರಡುವರೆ ವರ್ಷದ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್, ಅತೀ ಕಡಿಮೆ ಸಮಯದೊಳಗೆ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಲು ಆಕ್ರಮಣಕಾರಿ ಹೆಜ್ಜೆಯನ್ನಿಟ್ಟು ಯಶಸ್ಸು ಕಂಡಿದೆ. ಇದೀಗ ಮತ್ತೆ ವಿನೂತನ, ಅಡ್ವಾನ್ಸಡ್ ತಂತ್ರಜ್ಞಾನ ಅಳವಡಿಕೆ ಮತ್ತು ಸೇವೆಗೆ ಮುಂದಾಗಿದೆ. ಕೇಬಲ್‌ ಟಿವಿ, ಡಿಟಿಎಚ್‌ಗಳಿಗೆ ಗಂಡಾಂತರ! ಇನ್ಮುಂದೆ ಕೇಬಲ್‌, ಡಿಟಿಎಚ್ ಸೇವೆ ಸಿಗೋದು ಕಷ್ಟ..

5 ಜಿ ನೆಟ್ ವರ್ಕ್

5 ಜಿ ನೆಟ್ ವರ್ಕ್

ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿರುವ ಜಿಯೋ ಮತ್ತೊಂದು ಮಹತ್ತರ ಕಾರ್ಯಕ್ಕೆ ಕೈ ಹಾಕಿದೆ. ಅನೇಕ ಟೆಲಿಕಾಂ ಸಂಸ್ಥೆಗಳು 4 ಜಿ ನೆಟ್ವರ್ಕ್ ನ್ನು ಹೆಚ್ಚು ಪರಿಣಾಮಕಾರಿಯಾಗಿ ನೀಡಲು ಒದ್ದಾಡುತ್ತಿರುವಾಗಲೇ ಜಿಯೋ ಮತ್ತೊಂದು ಹೆಜ್ಜೆ ಮುಂದೆ ಹೋಗಿ 5 ಜಿ ಸೇವೆ ನೀಡಲು ಮುಂದಾಗಿದೆ.

2020 ರ ವೇಳೆಗೆ

2020 ರ ವೇಳೆಗೆ

ಮುಕೇಶ್ ಅಂಬಾನಿ ಸಂಸ್ಥೆ 5 ಜಿ ನೆಟ್ವರ್ಕ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು, 2020 ರ ವೇಳೆಗೆ ಈ ನೆಟ್ವರ್ಕ್ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡಲಿದೆ. 2020 ರ ಮಧ್ಯಂತರದಲ್ಲಿ 5 ಜಿ ಸೇವೆ ಸಿಗಲಿದೆ.

ಮೂರನೇ ದೊಡ್ಡ ಕಂಪನಿ

ಮೂರನೇ ದೊಡ್ಡ ಕಂಪನಿ

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಬಿಡುಗಡೆ ಮಾಡಿದ ಡಿಸೆಂಬರ್ 2018 ರ ಅಂಕಿ ಅಂಶಗಳ ಪ್ರಕಾರ, ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿರುವ ಜಿಯೋ 280.01 ದಶಲಕ್ಷದಷ್ಟು ಚಂದಾದಾರರನ್ನು ಹೊಂದಿದೆ. ಭಾರತಿ ಏರ್ಟೆಲ್ ಲಿಮಿಟೆಡ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ನಂತರದಲ್ಲಿ ಜಿಯೋ ಇದೆ.

ಹೊಸತನದ ನಾಯಕತ್ವ

ಹೊಸತನದ ನಾಯಕತ್ವ

4 ಜಿ ಸೇವೆ ಒದಗಿಸುತ್ತಿರುವ ಏರ್ಟೆಲ್ ಮತ್ತು ವೋಡಾಫೋನ್ ನೊಂದಿಗಿನ ಪೈಪೋಟಿಗೆ ಬ್ರೇಕ್ ಹಾಕಲು ಮುಂದಿನ ವರ್ಷದಿಂದ 5 ಜಿ ಅಪ್ಗ್ರೇಡ್ ಮಾಡಲಿದ್ದು, ಆ ಮೂಲಕ 4 ಜಿ ಫ್ರಂಟ್ ನಿಂದ 5 ಜಿಗೆ ಜಂಪ್ ಮಾಡಲಿದೆ. ವೇಗದ ಬ್ರಾಡ್ಬ್ಯಾಂಡ್ ತಂತ್ರಜ್ಞಾನ, ಹೊಸ ಅವಿಷ್ಕಾರ ಮತ್ತು ಮಾರುಕಟ್ಟೆಯಲ್ಲಿ ಆದಾಯ ಪಾಲು ಹೋರಾಟದಲ್ಲಿ ಮುಂದೆ ನಿಂತು ನಾಯಕತ್ವವನ್ನು ಕಾಪಾಡಿಕೊಳ್ಳಲಿದೆ ಎನ್ನಲಾಗಿದೆ.

ಏರ್ಟೆಲ್, ವೋಡಾಫೋನ್-ಐಡಿಯಾಗೆ ಹೊಡೆತ

ಏರ್ಟೆಲ್, ವೋಡಾಫೋನ್-ಐಡಿಯಾಗೆ ಹೊಡೆತ

ಜಿಯೋ 5G ನೆಟ್ವರ್ಕ್ ನ್ನು ಪರಿಚಯಿಸುವುದರಿಂದ ಭಾರ್ತಿ ಏರ್ಟೆಲ್, ವೋಡಾಫೋನ್ ಐಡಿಯಾಗೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗಿದೆ. ಏಕೆಂದರೆ ಈ ಕಂಪನಿಗಳು 4ಜಿ ಸೇವೆ ಒದಗಿಸಲು ಇನ್ನೂ ತಡಕಾಡುತ್ತಿವೆ. ಜಿಯೋ 5Gಯೊಂದಿಗೆ ಪೈಪೋಟಿ ನೀಡಬೇಕೆಂದರೆ ನಗರ ಮಾರುಕಟ್ಟೆಗಳಲ್ಲಿ 4ಜಿ ಸೇವೆ ಅತ್ಯುತ್ತಮಗೊಳಿಸಿ ಅಂತರವನ್ನು ಕಡಿಮೆಗೊಳಿಸಬೇಕಾಗುತ್ತದೆ.

English summary

Expect Jio to roll out 5G by second half of 2020

Reliance Jio Infocomm is likely to launch 5G services by the second half of 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X