For Quick Alerts
ALLOW NOTIFICATIONS  
For Daily Alerts

ಕೇಬಲ್‌ ಟಿವಿ, ಡಿಟಿಎಚ್‌ಗಳಿಗೆ ಗಂಡಾಂತರ! ಇನ್ಮುಂದೆ ಕೇಬಲ್‌, ಡಿಟಿಎಚ್ ಸೇವೆ ಸಿಗೋದು ಕಷ್ಟ..

ಮಾರ್ಚ್ 25ರಂದು ಟ್ರಾಯ್ (ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ) ಮುಕ್ತ ಸಭೆಯನ್ನು ಇಟ್ಟಿದ್ದು, ಇದರಲ್ಲಿ ಹೊಸ ನಿಯಮಗಳನ್ನು ರೂಪಿಸುವ ದೃಷ್ಟಿಕೋನವನ್ನು ತೆಗೆದುಕೊಳ್ಳಲಾಗುವುದು.

|

ಮಾರ್ಚ್ 25ರಂದು ಟ್ರಾಯ್ (ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ) ಮುಕ್ತ ಸಭೆಯನ್ನು ಇಟ್ಟಿದ್ದು, ಇದರಲ್ಲಿ ಹೊಸ ನಿಯಮಗಳನ್ನು ರೂಪಿಸುವ ದೃಷ್ಟಿಕೋನವನ್ನು ತೆಗೆದುಕೊಳ್ಳಲಾಗುವುದು.
ಇಂದಿನ ದಿನಗಳಲ್ಲಿ ಡಿಜಿಟಲೀಕರಣದ ವ್ಯಾಪ್ತಿ ದೊಡ್ಡದಾಗುತ್ತಿದ್ದು, ನೆಟ್‌ಫ್ಲಿಕ್ಸ್, ಅಮೆಜಾನ್‌ ಪ್ರೈಮ್, ಹಾಟ್‌ಸ್ಟಾರ್‌, ವೂಟ್ ಸೇರಿದಂತೆ ಒಟಿಟಿ (ಓವರ್‌-ದ-ಟಾಪ್‌) ಸೇವೆಗಳು ಜನಪ್ರಿಯವಾಗುತ್ತಿವೆ.

ವಿಶ್ಲೇಷಕರ ಪ್ರಕಾರ, ಮುಂದಿನ ದಿನಗಳಲ್ಲಿ ಕೇಬಲ್‌, ಡಿಟಿಎಚ್‌ಗಳಿಗೆ ಸಂಚಕಾರ ತಪ್ಪಿದ್ದಲ್ಲ. ಜನರಿಗೆ ಆಪ್ತವಾಗಿದ್ದ ದುರದರ್ಶನ ಮತ್ತು ಅದಕ್ಕೆ ಜೀವ ತುಂಬುತ್ತಿದ್ದ ಕೇಬಲ್‌, ಡಿಟಿಎಚ್ ಗಳು ಅಡಕತ್ತರಿಯಲ್ಲಿವೆ.

ಒಟಿಟಿ ಮೂಲಕ ವೀಕ್ಷಣೆಗೆ ಅವಕಾಶ

ಒಟಿಟಿ ಮೂಲಕ ವೀಕ್ಷಣೆಗೆ ಅವಕಾಶ

ಟಿ.ವಿಗಳಲ್ಲಿ ಬರುವ ಕಾರ್ಯಕ್ರಮಕ್ಕೆ ಕೆಲಸಗಳನ್ನು ಬಿಟ್ಟು ಕಾಯುತ್ತಾ ಕೂರಬೇಕಾಗಿಲ್ಲ. ಸಮಯ ಹೊಂದಾಣಿಕೆಯಾಗದೇ ನೆಚ್ಚಿನ ಕಾರ್ಯಕ್ರಮ ಮಿಸ್‌ ಆಯಿತು ಎನ್ನಬೇಕಿಲ್ಲ. ಎಲ್ಲವನ್ನೂ ಹೊಂದಿಕೆಯಾಗುವ ಸಮಯದಲ್ಲಿ ಒಟಿಟಿ ಮೂಲಕ ವೀಕ್ಷಿಸಲು ಅವಕಾಶವಿದೆ. ಅಲ್ಲದೇ ಹೊಸ ಹೊಸ ಸಿನಿಮಾಗಳನ್ನು ನೆಟ್‌ಫ್ಲೆಕ್ಸ್‌ನಂಥ ಆಪ್ ಮೂಲಕ ಲಭ್ಯವಿರುತ್ತವೆ.

ಕೇಬಲ್‌, ಟಿಟಿಎಚ್ ಭವಿಷ್ಯ ಅಡಕತ್ತರಿಯಲ್ಲಿ!

ಕೇಬಲ್‌, ಟಿಟಿಎಚ್ ಭವಿಷ್ಯ ಅಡಕತ್ತರಿಯಲ್ಲಿ!

ನಮ್ಮ ದೇಶದಲ್ಲಿ ಒಟಿಟಿ ಕಂಪನಿಗಳು ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿರುವುದರಿಂದ ಅವುಗಳ ಬಳಕೆ ತ್ವರಿತಗತಿಯಲ್ಲಿ ವಿಸ್ತಾರವಾಗುತ್ತಿದೆ. ಆದರೆ ಜನರು ಟಿವಿ ಸೇವೆಗಳನ್ನು ನಿರಾಕರಿಸುವ ಮಟ್ಟಕ್ಕೆ ಇನ್ನೂ ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕೇಬಲ್‌ ಮತ್ತು ಟಿಟಿಎಚ್‌ ಸೇವೆಗಳು ಅಪ್ರಸ್ತುತವಾಗುವ ಸಾಧ್ಯತೆಯನ್ನು ತಜ್ಞರು ಅಲ್ಲಗಳೆಯುವುದಿಲ್ಲ.

ಕೇಬಲ್‌/ಡಿಟಿಎಚ್ ಮತ್ತು ಒಟಿಟಿ ವ್ಯತ್ಯಾಸ

ಕೇಬಲ್‌/ಡಿಟಿಎಚ್ ಮತ್ತು ಒಟಿಟಿ ವ್ಯತ್ಯಾಸ

ಕೇಬಲ್‌, ಡಿಟಿಎಚ್ ಗಳಿಗಾಗಿ ತಿಂಗಳಿಗೆ ಹಣ ತೆರಬೇಕು. ಆದರೆ ಇದೇ ಕಾರ್ಯಕ್ರಮಗಳನ್ನು ಒಟಿಟಿ ವೇದಿಕೆಯಡಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಒಟಿಟಿ ಪ್ಲಾರ್ಟ್‌ಫಾರ್ಮ್‌ಗಳಿಗೆ ಟ್ರಾಯ್‌ ಸೇರಿದಂತೆ ಯಾವುದೇ ಸಂಸ್ಥೆಯ ನಯಮಗಳು ಅನ್ವಯವಾಗುವುದಿಲ್ಲ.
ಕೇಬಲ್‌ ಮತ್ತು ಡಿಟಿಎಚ್ ಸೇವಾ ಸಂಸ್ಥೆಗಳು ಮತ್ತು ವಿತರಕರು ಪರವಾನಿಗಿ ಶುಲ್ಕ ಭರಿಸಬೇಕು. ಜೊತೆಗೆ ಅನೇಕ ನಾನಾ ನಿಯಮಗಳನ್ನು ಪಾಲಿಸಬೇಕು.

ಟ್ರಾಯ್‌ನ ಹೊಸ ಶುಲ್ಕ ನೀತಿ

ಟ್ರಾಯ್‌ನ ಹೊಸ ಶುಲ್ಕ ನೀತಿ

ಇತ್ತೀಚೆಗೆ ಬಂದಿರುವ ಟ್ರಾಯ್‌ನ ಹೊಸ ಶುಲ್ಕ ನೀತಿಯು ಕೇಬಲ್‌ ಮತ್ತು ಡಿಟಿಎಚ್‌ ಉದ್ಯಮಕ್ಕೆ ತಲೆನೋವು ತಂದಿದೆ. ಹೊಸ ಕೇಬಲ್ ನೀತಿ ಫೆಬ್ರವರಿ 1 ರಿಂದ ಜಾರಿಯಾಗಲಿದೆ ಎಂದು ಟ್ರಾಯ್ ತಿಳಿಸಿತ್ತು., ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಫೆ.1 ರಿಂದ ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಹೆಚ್ ಚಾನೆಲ್ ಹೊಸ ದರದ ಮಾಹಿತಿ ಇಲ್ಲಿದೆ..

Read more about: trai money business
English summary

Cable, DTH operators face the OTT threat

Come March 25, the Telecom Regulatory Authority of India (TRAI) will hold an open house meeting in which it will take views on formulating regulations.
Story first published: Tuesday, March 12, 2019, 14:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X