ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಆರ್ಥಿಕ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ತನ್ನ ಪೈಲಟ್ ಗಳಿಗೆ ಕಳೆದ ಮೂರು ತಿಂಗಳುಗಳಿಂದ ಸಂಬಳ ನೀಡಿಲ್ಲ.
ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಆರ್ಥಿಕ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ತನ್ನ ಪೈಲಟ್ ಗಳಿಗೆ ಕಳೆದ ಮೂರು ತಿಂಗಳುಗಳಿಂದ ಸಂಬಳ ನೀಡಿಲ್ಲ.
ಮಾರ್ಚ 31ರ ಒಳಗಾಗಿ ವೇತನ ಪಾವತಿ ಮಾಡದೇ ಇದ್ದಲ್ಲಿ ಏಪ್ರಿಲ್ 1ರಿಂದ ಸೇವೆಗೆ ಹಾಜರಾಗುವುದಿಲ್ಲ ಎಂದು 1000ಕ್ಕೂ ಹೆಚ್ಚು ಪೈಲಟ್‌ಗಳು ಹೇಳಿದ್ದಾರೆ. ಜೆಟ್ ಏರ್ವೇಸ್ ತಂತ್ರಜ್ಞರು ಸಂಬಳವಿಲ್ಲದೆ ಮಾನಸಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದಾಗಿ ಜೆಟ್ ಏರ್‌ವೇಸ್ ವಿಮಾನ ಪ್ರಯಾಣಿಕರ ಸುರಕ್ಷತೆಗೂ ಸಮಸ್ಯೆಯಾಗಬಹುದು ಎಂದು ಜೆಟ್‌ನ ತಂತ್ರಜ್ಞರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಆಗಲಿದೆ ಪ್ರಮುಖ ಬದಲಾವಣೆ
ಕೇಂದ್ರ ಸರ್ಕಾರದಿಂದ ಎಚ್ಚರಿಕೆ
119 ವಿಮಾನಗಳ ಪೈಕಿ ಕೇವಲ 41 ವಿಮಾನಗಳು ಮಾತ್ರ ಸಂಚಾರ ನಡೆಸುತ್ತಿದ್ದು, ದೊಡ್ಡ ಒತ್ತಡಕ್ಕೆ ಸಿಲುಕಿದೆ. ಈ ನಡುವೆ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಆದ ಆರ್ಥಿಕ ದುಸ್ಥಿತಿಯೇ ಜೆಟ್‌ಗೂ ಬಾರದಿರಲಿ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಿದೆ. ಜೊತೆಗೆ ಜೆಟ್‌ನ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಕ್ಕೆ ಸೂಚನೆ ನಿಡಿದೆ.
ಎಸ್‌ಬಿಐ ನೇತೃತ್ವ ಸಾಧ್ಯತೆ
ಜೆಟ್ ಏರ್‌ವೇಸ್‌ಗೆ ಸೂಕ್ತ ಹೊಸ ಮಾಲೀಕರು ಸಿಗುವವರೆಗೂ ಅಗತ್ಯ ಹಣಕಾಸಿನ ನೆರವು ನೀಡುವಂತೆ ಎಸ್‌ಬಿಐ ನೇತೃತ್ವದ ಸರ್ಕಾರಿ ವಲಯದ ಕೆಲವು ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕುಗಳು ತಕ್ಷಣಕ್ಕೆ ಜೆಟ್‌ಗೆ ಹಣಕಾಸಿನ ನೆರವು ನೀಡಿದರೆ ವಿಮಾನಯಾನ ಕಂಪನಿ ಉಳಿಯಲಿದೆ. ಒಂದು ವೇಳೆ ನೆರವು ಸಿಗದಿದ್ದಲ್ಲಿ ಕಿಂಗ್‌ಫಿಶರ್ ಹಾದಿ ಹಿಡಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
3 ತಿಂಗಳಿಂದ ವೇತನ ಇಲ್ಲ
ಜೆಟ್ ಏರ್‌ವೇಸ್ ಸಂಸ್ಥೆ ತನ್ನ ಎಂಜಿನಿಯರ್, ಪೈಲಟ್ ಹಾಗೂ ಹಿರಿಯ ಅಧಿಕಾರಿಗಳಿಗೆ ಕಳೆದ 3 ತಿಂಗಳುಗಳಿಂದ ವೇತನ ಪಾವತಿಸಿಲ್ಲ. ಇದರ ಬಗ್ಗೆ ಸಂಸ್ಥೆ ಉದ್ಯೋಗಿಗಳು ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದಾರೆ. ಸಂಬಳವಿಲ್ಲದೆ ನೌಕರರು ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದು ಜೆಟ್ ಏರ್‌ವೇಸ್ ವಿಮಾನದ ಪ್ರಯಾಣಿಕರ ಸುರಕ್ಷತೆ ಮೇಲೂ ಪರಿಣಾಮ ಬೀರಬಹುದು.
ಬ್ಯಾಂಕು/ಇತರೆ ನೆರವು
ಜೆಟ್ ಏರ್‌ವೇಸ್ ಸುಮಾರು ರೂ. 8200 ಕೋಟಿ ಸಾಲದಲ್ಲಿ ಸಿಲುಕಿದ್ದು, ಇದರಿಮದ ಪಾರಾಗಲು ಕೇಂದ್ರ ಸರ್ಕಾರ ಹೊಸ ಉಪಾಯವೊಂದನ್ನು ಹುಡುಕಿದ್ದು, ಸಾಲ ನೀಡಿದ ಎಸ್ಬಿಐ ನೇತೃತ್ವದ ಬ್ಯಾಂಕುಗಳಿಗೆ ಜೆಟ್ ಏರ್‌ವೇಸ್ ಷೇರು ಖರೀದಿಸಲು ಸೂಚಿಸಿದೆ ಎನ್ನಲಾಗಿದೆ. ಜೆಟ್ ಏರ್‌ವೇಸ್ ದಿವಾಳಿಯಾಗುವುದನ್ನು ತಪ್ಪಿಸಲು ಎಸ್ಬಿಐ, ಪಿಎನ್‌ಬಿ ಹಾಗೂ ನ್ಯಾಷನಲ್ ಇನ್‌ವೆಸ್ಟ್‌ಮೆಂಟ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ ಒಳಗೊಂಡಂತೆ ಹಲವು ಬ್ಯಾಂಕುಗಳಿಗೆ ಜೆಟ್ ಏರ್‌ವೇಸ್‌ಗೆ ನೀಡಿದ ಸಾಲವನ್ನು ಷೇರಾಗಿ ಪರಿವರ್ತಿಸಿಕೊಳ್ಳಿ ಎಂದು ಹಣಕಾಸು ಸಚಿವಾಲಯ ಸೂಚಿಸಿದೆ ಎನ್ನಲಾಗಿದೆ.


Click it and Unblock the Notifications